ಸುದ್ದಿ ಸಂಕ್ಷೇಪ
ಮೂಲಸೌಲಭ್ಯ ಕಲ್ಪಿಸುವೆ: ಶಾಸಕ ಶಿವಳ್ಳಿ ಭರವಸೆ
ಕುಂದಗೋಳ: ತಾಲೂಕಿನಲ್ಲಿ ಗುಡಗೇರಿ ಗ್ರಾಮ ದೊಡ್ಡ ಗ್ರಾಮವಾಗಿದ್ದು, ಗ್ರಾಮಕ್ಕೆ ಶೀಘ್ರವೇ ಮೂಲ ಸೌಲಭ್ಯ ಕಲ್ಪಿಸಲು ಶ್ರಮಿಸುವುದಾಗಿ ಶಾಸಕ ಸಿ.ಎಸ್. ಶಿವಳ್ಳಿ ಹೇಳಿದರು. ಗುಡಗೇರಿ ಗ್ರಾಪಂ ಕಾರ್ಯಾಲಯದಲ್ಲಿ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತ, ಅಭಿವೃಧ್ಧಿ ಕಾರ್ಯದಲ್ಲಿ ರಾಜಕೀಯ ಮಾಡದೇ ಬಂದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಜಿಪಂ ಸದಸ್ಯ ವೆಂಕನಗೌಡ ಹಿರೇಗೌಡ್ರ, ಗ್ರಾಪಂ ಅಧ್ಯಕ್ಷ ಗೀತಾ ಡಿ. ಸುತಾರ, ಉಪಾಧ್ಯಕ್ಷೆ ಯಲ್ಲವ್ವ ಶಿ. ಕತ್ತಿ, ಸದಸ್ಯರಾದ ರಾಜೇಂದ್ರ ಪಾಟೀಲ, ಅಶೋಕ ತಿರ್ಲಾಪೂರ, ಜೀವನಗೌಡ ಯತ್ನಳ್ಳಿ, ಬಾಹುಬಲಿ ಸೋಮಾಪುರ, ಈಶ್ವರಗೌಡ ದ್ಯಾವನಗೌಡ್ರ, ನಿಂಗವ್ವ ಹೈಗರ ಪಾಲ್ಗೊಂಡಿದ್ದರು. ಪಿಡಿಒ ಎನ್.ಕೆ. ದೊಡಮನಿ ಸ್ವಾಗತಿಸಿದರು. ದಯಾನಂದ ಕುಂದೂರ ನಿರೂಪಿಸಿದರು. ಎಂ.ಎಸ್. ಸಂಶಿಮಠ ವಂದಿಸಿದರು.
ಉತ್ಸವ: ಕ್ರೀಡಾಸ್ಪರ್ಧೆ
ಧಾರವಾಡ: ಧಾರವಾಡ ಉತ್ಸವ-2013ರ ಅಂಗವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಆರ್.ಎನ್. ಶೆಟ್ಟಿ ಕ್ರೀಡಾಂಗಣದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಡಿ. 11 ಹಾಗೂ 12ರಂದು ಸಂಜೆ 4ಕ್ಕೆ ಟೇಬಲ್ ಟೆನ್ನಿಸ್ ಆಯೋಜಿಸಲಾಗಿದೆ. 12 ಮತ್ತು 14 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರು ಹಾಗೂ ಪುರುಷ ಮತ್ತು ಮಹಿಳೆಯರು ಪಾಲ್ಗೊಳ್ಳಬಹುದು. ಇದೇ ದಿನ ನಡೆಯುವ ಶಟಲ್ ಬ್ಯಾಡ್ಮಿಂಟನ್ನಲ್ಲಿ 13 ಮತ್ತು 17 ವರ್ಷದೊಳಗಿನ ಬಾಲಕ, ಬಾಲಕಿಯರು ಹಾಗೂ ಪುರುಷರ ಮುಕ್ತ ಸ್ಪರ್ಧೆ ನಡೆಯಲಿದೆ. 12ರಂದು ಬೆಳಗ್ಗೆ 7ಕ್ಕೆ ಪುರುಷ ಮತ್ತು ಮಹಿಳೆಯರಿಗೆ 10 ಕಿ.ಮೀ. ಮ್ಯಾರಾಥಾನ್ ಆಯೋಜಿಸಲಾಗಿದ್ದು, ಇಸ್ಕಾನ್ ದೇವಸ್ಥಾನದಿಂದ ಪ್ರಾರಂಭಗೊಂಡು ಆರ್ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ಮುಕ್ತಾಯಗೊಳ್ಳುವುದು. ಅದೇ ದಿನ ಬೆಳಗ್ಗೆ 11ಕ್ಕೆ ಆರ್ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ಕುಸ್ತಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 5ಕ್ಕೆ ದೇಹದಾರ್ಢ್ಯ ಸ್ಪರ್ಧೆ, ಮಧ್ಯಾಹ್ನ 3ಕ್ಕೆ ಮಹಿಳೆಯರಿಗೆ ಹಗ್ಗ ಜಗ್ಗಾಟ ಏರ್ಪಡಿಸಲಾಗಿದೆ. ಡಿ. 14ರಂದು ಬೆಳಗ್ಗೆ 8ಕ್ಕೆ ಅಮರಗೋಳ ಎಪಿಎಂಸಿ ಆವರಣದಲ್ಲಿ ಚಕ್ಕಡಿ ಓಡಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಕಳ್ಳತನ ತಡೆಗೆ ಮನವಿ
ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಅರವಿಂದ ನಗರದಲ್ಲಿ ವಾಹನ ಬಿಡಿ ಭಾಗಗಳ ಕಳ್ಳತನ ಹೆಚ್ಚಾಗಿದ್ದು ತಕ್ಷಣ ಹಳೇ ಹುಬ್ಬಳ್ಳಿ ಠಾಣೆ ಪೊಲೀಸ್ ಸಿಬ್ಬಂದಿ ಕಳ್ಳತನ ತಡೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಅರವಿನಂದ ನಗರ ನಿವಾಸಿಗಳು ಪೊಲೀಸ್ ಇನ್ಸಪೆಕ್ಟರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಅರವಿಂದ ನಗರದಲ್ಲಿ ಮನೆ ಎದುರು ರಾತ್ರಿ ನಿಲ್ಲಿಸುವ ಅಟೋ ರಿಕ್ಷಾಗಳ ಸ್ಟೇಫ್ನಿ, ಬ್ಯಾಟರಿ ಸೇರಿದಂತೆ ಇನ್ನಿತರ ಬಿಡಿ ಭಾಗಗಳನ್ನು ಕಳ್ಳತನ ಸಾಮಾನ್ಯವಾಗಿದೆ. ಮನೆ ಗೇಟ್ ಕೀಲಿ ಮುರಿದು ಕಂಪೌಂಡ್ನಲ್ಲಿರುವ ವಸ್ತುಗಳ ಕಳ್ಳತನ ನಡೆಯುತ್ತಿದೆ. ಆದ್ದರಿಂದ ಪೊಲೀಸರು ಕಳ್ಳತನ ತಡೆಯುವುದಕ್ಕೆ ರಾತ್ರಿ ಗಸ್ತು ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

