ಸುದ್ದಿ ಸಂಕ್ಷೇಪ
ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರ ಬದಲಾಯಿಸಲು ಆಗ್ರಹ
ಕಲಘಟಗಿ: ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರಾಗಿ ತಮಿಳುನಾಡಿನ ನಿವೃತ್ತ ನ್ಯಾಯಮೂರ್ತಿ ಮುರಗೇಶನ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ತಾಲೂಕಿನಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಕುರಿತು ತಾಲೂಕು ಕರಾವೇ (ಪ್ರವೀಣ ಶೆಟ್ಟಿ ಬಣ) ಹಾಗೂ ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆ ಕಾರ್ಯಕರ್ತರು, ಕೂಡಲೇ ಅವರನ್ನು ಬದಲಾಯಿಸಲು ಒತ್ತಾಯಿಸಿದ್ದಾರೆ. ಈ ಕುರಿತು ತಹಸೀಲ್ದಾರ್ಗೆ ಕರವೇ ಅಧ್ಯಕ್ಷ ಬಸವಂತಪ್ಪ ಗಬ್ಬೂರ, ಡಾ. ರಾಜಕುಮಾರ ಕನ್ನ್ನಡ ಸಂಸ್ಕೃತಿ ವೇದಿಕೆ ಅಧ್ಯಕ್ಷ ರವಿರಾಜ ಬಡಿಗೇರ, ಪ್ರಭು ರಂಗಾಪುರ, ವೀರಪ್ಪ ಧನಿಗೊಂಡ, ಶಂಕರ ಹೊಸಮನಿ, ಬಿ.ಸಿ. ಕೆಲಗೇರಿ, ಸಂಗಪ್ಪ ಗೌರಣ್ಣವರ, ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ಅಧ್ಯಕ್ಷ ಮಂಜುನಾಥ ಧನಿಗೊಂಡ, ಸಂಗಮೇಶ ನಿಂಬಣ್ಣವರ, ಕಲ್ಲಪ್ಪ ಕಟ್ಟಿಮನಿ, ಚಾರ್ಲಸ್ ಕಲಘಟಗಿ, ವೀರಣ್ಣ ಹಿರೇಮಠ, ಕಲ್ಲಪ್ಪ ಮಿರ್ಜಿ, ಮಂಜುನಾಥ ಬಾವಿಕಟ್ಟಿ ಮುಂತಾದವರು ಮನವಿಯಲ್ಲಿ ಆಗ್ರಹಿಸಿದ್ದಾರೆ.
ವಕೀಲರ ಸಂಘಕ್ಕೆ ಸಿ.ಆರ್. ಪಾಟೀಲ ಅಧ್ಯಕ್ಷ
ಹುಬ್ಬಳ್ಳಿ: ಹುಬ್ಬಳ್ಳಿ ವಕೀಲರ ಸಂಘಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿ.ಆರ್. ಪಾಟೀಲ್ ಹಾಗೂ ಕಾರ್ಯದರ್ಶಿಯಾಗಿ ತೋಟದ ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷ ಸ್ಥಾನಕ್ಕೆ ಅಶೋಕ ಬಳಿಗಾರ ಹಾಗೂ ಸಿ.ಆರ್. ಪಾಟೀಲ ಮಧ್ಯೆ ಮತ್ತು ಕಾರ್ಯದರ್ಶಿ ಸ್ಥಾನಕ್ಕೆ ಜಿ.ಎಚ್. ತೋಟದ ಹಾಗೂ ಅಣ್ವೇಕರ ಮಧ್ಯೆ ತುರುಸಿನ ಪೈಪೋಟೆ ನಡೆದಿತ್ತು. ಕಿರಿಯ ವಿಭಾಗದಲ್ಲಿ 12 ಜನ ಹಾಗೂ ಹಿರಿಯ ವಿಭಾಗದಲ್ಲಿ 33 ಜನರು ಸ್ಪರ್ಧಿಸಿದ್ದು, ಎರಡೂ ವಿಭಾಗದಲ್ಲಿ ತಲಾ 5 ಜನರು ಆಯ್ಕೆಗೊಂಡಿದ್ದಾರೆ. ಸಂಘದ ಒಟ್ಟು 975 ಮತಗಳಲ್ಲಿ 854 ಮತಗಳು ಚಲಾವಣೆಗೊಂಡಿವೆ. ನ್ಯಾಯಾಲಯ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಬಸ್ ಡಿಪೋ ನಿರ್ಮಿಸಿ
ಕಲಘಟಗಿ: ತಾಲೂಕು ಕೇಂದ್ರದಲ್ಲಿ ಸಾರಿಗೆ ಬಸ್ ಡಿಪೋ ನಿರ್ಮಿಸಲು ಮಂಜೂರಾತಿ ನೀಡಬೇಕು ಎಂದು ತಾಲೂಕು ರಾಜ್ಯ ಜನಪರ ಅಭಿವೃದ್ಧಿ ಹೋರಾಟ ಸಮಿತಿ ಸಾರಿಗೆ ಸಚಿವರಿಗೆ ಮನವಿ ಮಾಡಿದೆ. ದಶಕಗಳಿಂದಲೂ ಸಾರಿಗೆ ಇಲಾಖೆ ಸಚಿವರಿಗೆ ಮನವಿ ಮಾಡುತ್ತಿದ್ದರೂ ಬೇಡಿಕೆ ಈಡೇರಿಲ್ಲ. ಹೀಗಾಗಿ, ಶೀಘ್ರದಲ್ಲಿ ಮಂಜೂರು ಮಾಡಬೇಕು ಎಂದು ಧಾರವಾಡ ಜಿಲ್ಲಾ ಸಮಿತಿ ಕಾರ್ಯದರ್ಶಿ ಮಲ್ಲಿಕಾರ್ಜುನ ರಡ್ಡೇರ, ತಾಲೂಕು ಅಧ್ಯಕ್ಷ ಶಂಕ್ರಪ್ಪ ಮೆಣಸಿನಕಾಯಿ, ಯಲ್ಲಪ್ಪ ಕಟ್ಟಿಮನಿ, ಶಿವಾನಂದ ದೊಡ್ಡಮನಿ, ಉಮೇಶ ವೀರಾಪುರ ಮುಂತಾದವರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

