ಧಾರವಾಡ

ಸರ್ವರಿಗೂ ಸಮಾನ ಹಕ್ಕು ನೀಡಿ: ಮುತಾಲಿಕ

Published On :

ನವಲಗುಂದ: ಎಲ್ಲ ಜಾತಿಗಳಲ್ಲಿ ಹಿಂದುಳಿದ ವರ್ಗದವರಿದ್ದಾರೆ. ಆದರೆ ಮುಸ್ಲಿಂರಿಗೆ ಅಷ್ಟೇ ಶಾದಿಭಾಗ್ಯದ ರು. 50 ಸಾವಿರ ನೀಡುವ ಯೋಜನೆ ಜಾರಿ ಮಾಡಿ ಹಿಂದೂ ಬಡವರಿಗೆ ಮಾತ್ರ ಯಾವುದೇ ಸವಲತ್ತುಗಳನ್ನು ನೀಡದೇ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಆರ್ಥಿಕವಾಗಿ ಎಲ್ಲರಿಗೂ ಸಮಾನತೆ ಕೊಡಬೇಕಾಗಿದೆ ಎಂದು ಶ್ರೀರಾಮಸೇನಾ ಮುಖಂಡರಾದ ಪ್ರಮೋದ ಮುತಾಲಿಕ ಸರ್ಕಾರದ ವಿರುದ್ಧ ಕಿಡಿಕಾರಿದರು.
ಶನಿವಾರ ರಾತ್ರಿ ಇಲ್ಲಿಯ ಸಿದ್ಧಲಿಂಗೇಶ್ವರ ಚಿತ್ರಮಂದಿರದಲ್ಲಿ ಶ್ರೀರಾಮಸೇನೆನವಲಗುಂದ ಘಟಕದ ನಾಮಫಲಕ ಉದ್ಟಾಟನೆ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ಜಾತಿ, ಜಾತಿಗಳಲ್ಲಿ ವಿಷ ಬೀಜ ಬಿತ್ತಿ ಮುಸ್ಲಿಂ, ಕ್ರಿಶ್ಚಿಯನ್ನರಿಗೆ ಕುಮ್ಮಕ್ಕು ಕೊಡುತ್ತ ರಾಜಕೀಯ ವ್ಯಕ್ತಿಗಳು ಹಿಂದೂಗಳನ್ನು ಒಡೆದು ಆಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಹಿಂದೂಗಳಿಗೆ ಕಿರುಕುಳ ಕೊಡುತ್ತಿರುವುದನ್ನು ತಾವೆಲ್ಲ ಗಮನಿಸಿ ಒಗ್ಗಟ್ಟಾಗಿ ರಾಷ್ಟ್ರ ಹಾಗೂ ಹಿಂದೂ ಸಂಸ್ಕೃತಿ ಉಳಿಸಿ ಬೆಳೆಸಬೇಕೆಂದು ಹೇಳಿದರು.
ಉತ್ತರ ಪ್ರಾಂತದ ಪ್ರಚಾರಕ ಬಸವರಾಜ ಬೂದಿಹಾಳ ಮಾತನಾಡಿ, ಹಿಂದೂಗಳನ್ನು ಮತಾಂತರ ಮಾಡುವ ಪ್ರಕ್ರಿಯ ತೀವ್ರವಾಗಿದೆ. ಸ್ವಾಮೀಜಿಗಳ ಮೇಲೆ ಸುಳ್ಳು ಆರೋಪ ಮಾಡಿ ಹಿಂದೂ ಧರ್ಮಕ್ಕೆ ಕಳಂಕ ತರಲಾಗುತ್ತಿದೆ. ಆದ್ದರಿಂದ ಎಲ್ಲ ಹಿಂದೂಗಳು ಸಂಘಟಿತರಾಗಿ ದೇಶ ರಕ್ಷಣೆ, ಸಂಸ್ಕೃತಿ, ಪರಂಪರೆ ಉಳಿಸಲು ಶ್ರಮಿಸಬೇಕು ಎಂದರು.
ಪುರಸಭೆ ಸದಸ್ಯೆ ಪೂರ್ಣಿಮಾ ಜೋಶಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನೇತಾಜಿ ಕಲಾಲ, ಸಹದೇವಪ್ಪ ಶಿರೋಳ, ಜಯಣ್ಣ ಜಿನಗಾ, ಈರನಗೌಡ ಹೊಸಗೌಡರ, ಶ್ರೀರಾಮಸೇನಾ ಜಿಲ್ಲಾಧ್ಯಕ್ಷ ಅಪ್ಪಣ್ಣ ಹಿರಗಣ್ಣವರ, ಚನ್ನಪ್ಪ ನಾಗರಹಳ್ಳಿ, ವೀರಣ್ಣ ಪೂಜಾರ ಸಂತೋಷ ಪವಾರ, ಮುರಳಿ ಹೆಬಸೂರ, ಸೋಮ ವಡ್ಡರ, ಸಂತೋಷ ಪವಾರ ಇತರರಿದ್ದರು. ದೇವರಾಜ ಕರಿಯಪ್ಪನವರ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.