ಧಾರವಾಡ

ಇಂದು ಪೂರ್ವಭಾವಿ ಸಭೆ

Published On :

ಹುಬ್ಬಳ್ಳಿ: ರೈತರ ಬೆಳೆಗಳಿಗೆ ಯೋಗ್ಯ ಬೆಲೆ ಮತ್ತು ಕಳಪೆ ಕನಕ ಬಿಚಿ ಹತ್ತಿ ಹಾನಿಗೆ ಪರಿಹಾರ ಕೋರಿ ಮುಖ್ಯಮಂತ್ರಿ ಬಳಿಗೆ ನಿಯೋಗ ಕೊಂಡೋಯ್ಯುವ ಕರ್ನಾಟಕ ರಾಜ್ಯ ಪಕ್ಷಾತೀತ ರೈತ ಹಿತರಕ್ಷಣಾ ಸಮಿತಿ ನಿರ್ಧರಿಸಿದೆ. ಈ ಕುರಿತಂತೆ ಚರ್ಚಿಸಲು ಡಿ. 30ರ ಮಧ್ಯಾಹ್ನ 1ಕ್ಕೆ ನವಲಗುಂದದ ಲಾಲ ಮಾರುತಿ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಮಿತಿ ಕಾರ್ಯದರ್ಶಿ ಎಸ್.ಬಿ. ಬಳಿಗಾರ ಕೋರಿದ್ದಾರೆ.
ಸಾಮೂಹಿಕ ವಿವಾಹ: ನೋಂದಣಿಗೆ ಸೂಚನೆ
ಹುಬ್ಬಳ್ಳಿ: ಕರ್ನಾಟಕ ಲಿಂಗಾಯತ ವೀರಶೈವ ಸಂಘಟನಾ ಸಮಿತಿ ಜಿಲ್ಲಾ ಘಟಕ ಫೆ. 9ರಂದು ಮೂರುಸಾವಿರ ಮಠದ ಆವರಣದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ವಿವಾಹ ಆಗಬಯಸುವವರು ಜ. 1ರ ಒಳಗೆ ಹೆಸರು ನೋಂದಾಯಿಸಿ. ಮಾಹಿತಿಗೆ 9916213646, 9242984178ಗೆ ಸಂಪರ್ಕಿಸುವಂತೆ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಚನ್ನಬಸಪ್ಪ ಧಾರವಾಡ ಶೆಟ್ರು ತಿಳಿಸಿದ್ದಾರೆ.
ಕ್ರಿಸ್‌ಮಸ್: ಇಮಾನ್ಯುವೆಲ್ ಪ್ರಾಥನಾ ಕೂಟದ ಸಭೆ
ಹುಬ್ಬಳ್ಳಿ: ಕ್ರಿಸ್‌ಮಸ್ ಅಂಗವಾಗಿ ಇತ್ತೀಚಿಗೆ ನಗರದ ವಿಜಯನಗರ ಇಮಾನ್ಯುವೆಲ್ ಪ್ರಾಥನಾಕೂಟದ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸ್ವೀಡನ್ ಲೊಂಜಾಳ್‌ರಾವ್ ಹಾಡು ಹಾಡಿದರು. ಪ್ರಾಥನಾಕೂಟದ ಬ್ರದರ್ ಶರಣಪ್ಪ ನಲವಾಡ ಶುಭ ಸಂದೇಶ ನೀಡಿದರು. ಸಭೆಯಲ್ಲಿ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ಪುಷ್ಪಾವತಿ, ಶಾರದಾ, ಗಣೇಶ, ಅರುಣ ಫರ್ನಾಂಡಿಸ್ ಅವರಿಗೆ ಬಿ.ಸಿ. ನಲವಾಡ ಬಹುಮಾನ ವಿತರಿಸಿದರು.   ಮನೋಜ್ ಹಾನಗಲ್, ಗಂಗೂಬಾಯಿ ಹಾನಗಲ್, ಪಲ್ಲವಿ ಕಾನ್‌ಪೇಟ, ಕಾಂತರಾಜ್ ಇದ್ದರು.
ವಸಂತ ಲದವಾ ನೇಮಕ
ಹುಬ್ಬಳ್ಳಿ: ಕರ್ನಾಟಕ ವಾಣಿಜೋದ್ಯಮ ಸಂಸ್ಥೆಯ ಅಧ್ಯಕ್ಷ ವಸಂತ ಲದವಾ ಅವರನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಸಲಹಾ ಸಮಿತಿ ಸದಸ್ಯರನ್ನಾಗಿ ನೇಮಿಸಿದೆ. ಸದಸ್ಯರು, ಗ್ರಾಹಕರು ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಸಂಬಂಧಪಟ್ಟ ಸಲಹೆ ಸಮಸ್ಯೆಗಳು ಏನಾದರೂ ಇದ್ದಲ್ಲಿ ಸಂಸ್ಥೆಗೆ ಬರೆದು ತಿಳಿಸುವಂತೆ ಕಾರ್ಯದರ್ಶಿ ಸಿದ್ಧೇಶ್ವರ ಜಿ. ಕಮ್ಮಾರ ತಿಳಿಸಿದ್ದಾರೆ.
ವಿಕಲಚೇತನರಿಗೆ ಕ್ರೀಡಾಕೂಟ
ಧಾರವಾಡ: ಹಂಪಿ ಉತ್ಸವದ ಅಂಗವಾಗಿ 18 ವರ್ಷ ಮೇಲ್ಪಟ್ಟ ವಿಕಲಚೇತನರಿಗೆ ಜ. 12ರಿಂದ ವಿಶೇಷ ಕ್ರೀಡಾಕೂಟ ಆಯೋಜಿಸಲಾಗಿದೆ. ಇದರಲ್ಲಿ ಭಾಗವಹಿಸುವ ಆಸಕ್ತಿಯುಳ್ಳ ಅರ್ಹ ವಿಕಲಚೇತನರು ಹಂಪಿ ಉತ್ಸವ ವೆಬ್‌ಸೈಟ್ ಅಥವಾ ಧಾರವಾಡ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಕಚೇರಿ ದೂ. 0836- 2435749ಗೆ ಸಂಪರ್ಕಿಸಿ.
ಹೈನುಗಾರಿಕೆ ತರಬೇತಿ
ಧಾರವಾಡ:  ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದಿಂದ ರೈತರು ಮತ್ತು ಮಹಿಳೆಯರಿಗಾಗಿ ಜ. 6ರಿಂದ ಆರು ದಿನಗಳ ಹೈನುಗಾರಿಕೆ ತರಬೇತಿಯನ್ನು ಧಾರವಾಡ ಪಶು ಆಸ್ಪತ್ರೆ ಆವರಣದಲ್ಲಿ ಆಯೋಜಿಸಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ. 98448-34926 ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.
ಜ. 2ರಿಂದ ಟೇಲರಿಂಗ್ ತರಬೇತಿ ಶಿಬಿರ
ಹುಬ್ಬಳ್ಳಿ: ಕರ್ನಾಟಕ ರಾಜ್ಯ ಮಹಿಳಾ ಉದ್ದಿಮೆದಾರರ ಸಂಘ (ವೇಕಾಸ್) ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ 30 ದಿನಗಳ ಅಡ್ವಾನ್ಸಡ್ ಟೇಲರಿಂಗ್ ತರಬೇತಿ ಶಿಬಿರವನ್ನು ಜನವರಿ 2ರಿಂದ ಹಮ್ಮಿಕೊಳ್ಳಲಾಗಿದೆ. ಮಾಹಿತಿಗೆ ಕರ್ನಾಟಕ ರಾಜ್ಯ ಮಹಿಳಾ ಉದ್ದಿಮೆದಾರರ ಸಂಘ, ನಂ. 6, ಎಪಿಎಂಸಿ ಎದುರು, ಈಶ್ವರನಗರ, ಅಮರಗೋಳ, ಹುಬ್ಬಳ್ಳಿ ಇಲ್ಲಿಗೆ ಖುದ್ದಾಗಿ ಅಥವಾ ದೂ. ಸಂ. (0836) 2222327, ಮೊ. 9620219983, 9620219984ಗೆ ಸಂಪರ್ಕಿಸುವಂತೆ ಕೋರಲಾಗಿದೆ.
ಜ. 7, 8ಕ್ಕೆ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ
ಧಾರವಾಡ: ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಜ. 7 ಹಾಗೂ 8ರಂದು ಏರ್ಪಡಿಸಲಾಗಿದೆ. ಆಸಕ್ತ ಸಿಬ್ಬಂದಿಯನ್ನು ಕಚೇರಿ ಮುಖ್ಯಸ್ಥರು ಜ. 7ರಂದು ಮುಂಜಾನೆ 9ಕ್ಕೆ ಕವಿವಿ ಕಿತ್ತೂರ ರಾಣಿ ಚನ್ನಮ್ಮ ಕ್ರೀಡಾಂಗಣದಲ್ಲಿ ಹಾಜರಿರಲು ತಿಳಿಸಲಾಗಿದೆ. ಕ್ರೀಡೆ ಹಾಗೂ ಅವುಗಳು ಜರುಗುವ ಸ್ಥಳಗಳ ಕುರಿತ ಮಾಹಿತಿಗೆ 0836-2447424 ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತಿಳಿಸಿದ್ದಾರೆ.
ಉದ್ಯಮಿಗಳಿಗೆ ಸ್ಪರ್ಧೆ
ಹುಬ್ಬಳ್ಳಿ: ನಗರದ ಬಿವಿಬಿ ಎಂಜಿನಿಯರಿಂಗ್ ಆವರಣದಲ್ಲಿರುವ ದೇಶಪಾಂಡೆ ಪ್ರತಿಷ್ಠಾನದಲ್ಲಿರುವ ದಿ. ಇಂಡಸ್ ಎಂಟರ್‌ಪ್ರಿನರ್, ಟೈ ಹುಬ್ಬಳ್ಳಿ ಶಾಖೆ ಉದ್ಯಮಿಗಳಿಗೆ ಟೈ ಬಿಗ್ ಐಡಿಯಾ 100ಕ್ಕೆ ವ್ಯವಹಾರ ಯೋಜನೆ ಎಂಬ ಒಂದು ಲಕ್ಷ ಮೊತ್ತದ ಸ್ಪರ್ಧೆ ಏರ್ಪಡಿಸಿದೆ. ಎಲ್ಲ ವಯೋವಾನದ ಉದ್ಯಮಿಗಳು ಇದರಲ್ಲಿ ಭಾಗವಹಿಸಿ, ತಮ್ಮ ವಿಚಾರಗಳನ್ನು ಹಂಚಿಕೊಳ್ಳಬಹುದು. ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ ಒಂದು ವರ್ಷದ ಅವಧಿಯ ಟೈ ಸದಸ್ಯತ್ವವನ್ನು ಉಚಿತವಾಗಿ ನೀಡಲಾಗುತ್ತದೆ. ಅಲ್ಲದೆ, ಓರ್ವ ವ್ಯಕ್ತಿಗೆ ರು. 1ಲಕ್ಷ ಬಹುಮಾನ ನೀಡಲಾಗುಗುವುದು. ಜೊತೆಗೆ ಉದ್ದಿಮೆಗಳನ್ನು ಬೆಳಸಲು ಮಾರ್ಗದರ್ಶನವನ್ನೂ ನೀಡಲಾಗುತ್ತದೆ. ಆಸಕ್ತರು, ಜ. 10, 2014ರ ಒಳಗಾಗಿ ನಿಗದಿತ ಅರ್ಜಿ ಭರ್ತಿ ಮಾಡಿ ರು. 1000 ಪಾವತಿಸಬೇಕು. ಜ. 7ರ ಒಳಗಾಗಿ ಅರ್ಜಿ ಸಲ್ಲಿಸುವವರಿಗೆ ವಿಶೇಷ ರಿಯಾಯಿತಿ ಇದೆ. ಹೆಚ್ಚಿನ ಮಾಹಿತಿಗೆ ಕಾರ್ಯಕ್ರಮ ವ್ಯವಸ್ಥಾಪಕ ಮಹೇಶ ವಿ.ಕೆ. ಮೊ. 9448154063ಗೆ ಸಂಪರ್ಕಿಸಬಹುದು.
ರಿಕವರಿ: ಜ. 2ರಿಂದ 100 ತಾಸು ತರಬೇತಿ
ಹುಬ್ಬಳ್ಳಿ: ಧಾರವಾಡದ ಡಾ. ಡಿ.ಜಿ. ಶೆಟ್ಟಿ ಸೊಸೈಟಿ ಜ. 2ರಿಂದ ಜ. 13ರ ವರೆಗೆ ಬ್ಯಾಂಕ್ ಡೆಟ್ ರಿಕವರಿ ಏಜೆಂಟ್‌ರಿಗಾಗಿ 100 ಗಂಟೆಗಳ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಆಸಕ್ತರು, ಡಾ. ಜಿ.ಟಿ. ಶೆಟ್ಟಿ ಎಜುಕೇಶನಲ್ ಸೊಸೈಟಿ, ಜ್ಞಾನ ದೇಗುಲ ಕೆಎಂಎಫ್ ಹತ್ತಿರ ಧಾರವಾಡ ದೂ. 0836-2465327, 2465105, ಮೊ. 9343400038ಗೆ ಸಂಪರ್ಕಿಸಿ.
ತರಬೇತಿಗೆ ಆಹ್ವಾನ
ಧಾರವಾಡ: ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿಯ ಕಂಪ್ಯೂಟರ್ ಜ್ಞಾನವುಳ್ಳ 40 ಪದವೀಧರರಿಗೆ ಛಾಯಾಗ್ರಹಣ, ಸಂಕಲನಜ್ಞಾನ ಮಲ್ಟಿಮೀಡಿಯಾದಲ್ಲಿ ತಾಂತ್ರಿಕ ವೃತ್ತಿ ತರಬೇತಿಯನ್ನು ಮೈಸೂರು ವಿ.ವಿ.ಯಲ್ಲಿ ಹಾಗೂ ಕಲಾಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ದೃಶ್ಯ ಮಾಧ್ಯಮದಲ್ಲಿ ಚಿತ್ರಕಲೆ, ಗ್ರಾಫಿಕ್ಸ್, ಶಿಲ್ಪಕಲೆ ಕುರಿತಂತೆ 100 ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಐದು ದಿನದ ತರಬೇತಿಯನ್ನು ಮೈಸೂರಿನಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ) ಇಲ್ಲಿ ಜರುಗಿಸಲು ವಾರ್ತಾ ಇಲಾಖೆ ಉದ್ದೇಶಿಸಿದೆ. ಹೆಚ್ಚಿನ ಮಾಹಿತಿಗಾಗಿ 080-22028052 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.