ಧಾರವಾಡ

ಬ್ರಿಟಿಷರ ಶಿಕ್ಷಣ ಪದ್ಧತಿ ಬದಲಿಸಿ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಡಿ. 30
ತಮಗೆ ಬೇಕಾದ ಕಾರಕೂನರನ್ನು ತಯಾರಿಸುವ ಶಿಕ್ಷಣ ಪದ್ಧತಿಯನ್ನು ಬ್ರಿಟಿಷರು ರೂಪಿಸಿದ್ದರು. ನೂರಾರು ವರ್ಷಗಳಿಂದ ಅದೇ ಶೈಕ್ಷಣಿಕ ಪದ್ಧತಿ ಜಾರಿಯಲ್ಲಿದ್ದು, ಮಹತ್ವದ ಬದಲಾವಣೆ ತರುವ ಅಗತ್ಯವಿದೆ ಎಂದು ಅಂತಾರಾಷ್ಟ್ರೀಯ ಶಿಕ್ಷಣ ತರಬೇತುದಾರ ಅಮೀನ ಮುದಾಸ್ಸರ್ ಹೇಳಿದರು.
ಇಲ್ಲಿಯ ಚಾಣಕ್ಯ ಕರೀಯರ್ ಅಕಾಡೆಮಿಯಲ್ಲಿ ನಡೆದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು. ಬ್ರಿಟಿಷ್ ಕಾಲದ ಶಿಕ್ಷಣ ಪದ್ಧತಿಯನ್ನೇ ಭಾರತೀಯರು ಇದುವರೆಗೂ ಮುಂದುವರೆಸಿಕೊಂಡು ಬಂದಿದ್ದು, ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞರು, ಸರ್ಕಾರ, ಜನಪ್ರತಿನಿಧಿಗಳು ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ ಎಂದರು.
ಮನುಷ್ಯನ ಮೆದುಳಿನ ಶಕ್ತಿ ಅತ್ಯದ್ಭುತ. ಅದರ ಸದ್ಬಳಕೆಯಿಂದ ಅಗಾಧ ಸಾಧನೆ ಮಾಡಬಹುದು. ಕಂಪ್ಯೂಟರ್‌ಗಿಂತಲೂ ಸಾವಿರಾರು ಪಟ್ಟು ಶಕ್ತಿ ಹೊಂದಿರುವ ಮೆದುಳಿಗೆ ಸಮರ್ಪಕ ತರಬೇತಿ ನೀಡುವ ಮೂಲಕ ಮನುಷ್ಯ ಏನೆಲ್ಲ ಸಾಧನೆ ಮಾಡಲು ಸಾಧ್ಯ. ಮೆದುಳಿನ ಸಮರ್ಪಕ ಬಳಕೆಯೊಂದಿಗೆ ಜ್ಞಾಪಕ ಶಕ್ತಿ ವರ್ಧನೆ, ಏಕಾಗ್ರತೆ ಸಾಧಿಸಬಹುದಲ್ಲದೇ, ಸಮಯ ನಿರ್ವಹಣೆ ಮೂಲಕ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸಲು ಸಾಧ್ಯವಿದೆ. ಅತಿ ಹೆಚ್ಚು ಸಮಯ ಓದುವುದಕ್ಕಿಂತ ವಿನೂತನ ಕಲಿಕಾ ತಂತ್ರಗಳ ಮೂಲಕ ಕಡಿಮೆ ಹೊತ್ತು ಓದಿದರೂ ಪರಿಣಾಮಕಾರಿಯಾಗಿ ಓದುವ ಹವ್ಯಾಸವನ್ನು ರೂಢಿಸಿಕೊಳ್ಳುವ ಅಗತ್ಯವಿದೆ ಎಂದರು.
ವಿಜ್ಞಾನ, ಗಣಿತ, ಇತಿಹಾಸ ಸೇರಿದಂತೆ ಎಲ್ಲ ವಿಷಯಗಳನ್ನು ಓದುವುದಕ್ಕೆ ಅದರದೇ ಆದ ತಂತ್ರಗಳಿವೆ. ವಿಜ್ಞಾನ ಓದಿದಂತೆ ಗಣಿತವನ್ನು ಓದಲಾಗದು. ಗಣಿತ ಓದಿದಂತೆ ಇತಿಹಾಸ ಓದಲಾಗದು. ಆದರೆ, ಲಾಜಿಕಲ್ ರೀಡಿಂಗ್ (ತಾರ್ಕಿಕ ಓದುವಿಕೆ) ಮೂಲಕ ಪರೀಕ್ಷೆಗಳಲ್ಲಿ ಹೆಚ್ಚಿನ ಯಶಸ್ಸು ಗಳಿಸಲು ಸಾಧ್ಯ. ಇಂತಹ ತಂತ್ರಗಳು ಶಾಲಾ-ಕಾಲೇಜು ಅಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗಳ ಓದಿಗೂ ಸಹಕಾರಿ ಎಂದು ಮುದಾಸ್ಸರ್ ಹೇಳಿದರು.
ಅಕಾಡೆಮಿಯ ನಿರ್ದೇಶಕ ಪ್ರದೀಪ ಗುಡ್ಡದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಜಯದೇವ ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸುರೇಶ ಗೌಡರ ಇದ್ದರು. ಹನುಮಂತಗೌಡ ಪಾಟೀಲ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.