ಧಾರವಾಡ

ರಾಜ್ಯ ಬಜೆಟ್ 2013

Published On :

ಪ್ರಸಕ್ತದ ಬಜೆಟ್ ಸಿಎಂ ಶೆಟ್ಟರ್ ದೂರದೃಷ್ಟಿ ಕೊರತೆ ತೋರಿಸುತ್ತದೆ. ಹೆಸರಿಗೆ ಮಾತ್ರ ಅಭಿವೃದ್ಧಿ ಪರ ಬಜೆಟ್ ಎಂದು ಹೇಳಿಕೊಂಡಿದ್ದಾರೆ. ಮಂಡಿಸಿರುವ ಅಂಶಗಳು ಅಭಿವೃದ್ಧಿಪರವಾಗಿರದೇ ಬಿಜೆಪಿ ಪ್ರಣಾಳಿಕೆಯಾಗಿದೆ.
-ಸಂತೋಷ ಅಗಡಿ, ನಾಗರಿಕ

ಬಜೆಟ್‌ನಲ್ಲಿ ಎಲ್ಲ ವರ್ಗಕ್ಕೆ ಪ್ರಾಶಸ್ತ್ಯ ನೀಡಿರುವುದರಿಂದ ಅಭಿವೃದ್ಧಿ, ಜನಪರ ಬಜೆಟ್ ಆಗಿದೆ. ಧಾರ್ಮಿಕ ಸಂಸ್ಥೆಗಳಿಗೆ ಅನುದಾನ ಹರಿಸಲಾಗಿದೆ. ಹಿಂದುಳಿದ ಸಮಾಜವನ್ನು ಮುಖ್ಯ ವಾಹಿನಿಗೆ ಕರೆತರಲು ಆದರ್ಶ ಬಜೆಟ್ ಆಗಿದೆ.
-ಸೋಮಣ್ಣ ಬೇವಿನಮರದ, ವಿಪ ಸದಸ್ಯ

ಬಜೆಟ್ ಸಿಎಂ ಜಗದೀಶ ಶೆಟ್ಟರ್ ದೂರದೃಷ್ಟಿ ನಾಯಕ ಎಂಬುದಕ್ಕೆ ಸಾಕ್ಷಿ. ಎಲ್ಲ ವರ್ಗಕ್ಕೆ ನ್ಯಾಯ ಒದಗಿಸಿದ್ದಾರೆ. ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಸಮರ್ಥ ಹಾಗೂ ದಕ್ಷ ಸಿಎಂ ಎಂಬುದನ್ನು ಸಾಬೀತು ಪಡಿಸಿದ್ದಾರೆ.
-ಭೋಜರಾಜ ಕರೂದಿ

ಬಜೆಟ್‌ನಲ್ಲಿ ಗ್ರಾಪಂಗಳಿಗೂ ನೇರ ಅನುದಾನ ನೀಡಬಹುದಾಗಿತ್ತು. ಗ್ರಾಮೀಣಾಭಿವೃದ್ಧಿ ಸಚಿವರಾಗಿ ಅನುಭವಿಗಳಾಗಿದ್ದರೂ ಗ್ರಾಪಂಗಳನ್ನು ನಿರ್ಲಕ್ಷ್ಯಿಸಲಾಗಿದೆ. ಬಿಜೆಪಿ-ಕೆಜೆಪಿ ಕಾದಾಟದಲ್ಲಿ ಹಾವೇರಿ ಜಿಲ್ಲೆ ಬಡವಾಗಿದೆ.
-ಡಾ. ಸತೀಶ ಈಳಗೇರ

ಸಿಎಂ ಶೆಟ್ಟರ್ ಮಂಡಿಸಿದ ಬಜೆಟ್ ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿಗಿದೆ. ಹಾವೇರಿ, ರಾಣಿಬೆನ್ನೂರು ಅಭಿವೃದ್ಧಿಗೆ ಕೊಂಚ ನೀಡುವುದಾಗಿ ಹೇಳಿ, ಸರ್ವಜ್ಞ ಪ್ರಾಧಿಕಾರಕ್ಕೆ ನಿರ್ಲಕ್ಷ್ಯಿಸಿದ್ದಾರೆ. ಹೊಸ ತಾಲೂಕಿಲ್ಲ.
-ನೂರಅಹ್ಮದ್ ಮಿರ್ಜಾನವರ

ವಿತ್ತೀಯ ಬೆಳವಣಿಗೆ ಕುರಿತು ಚಿಂತಿಸದೇ ರು. 22 ಸಾವಿರ ಕೋಟಿ ಸಾಲ ಮಾಡಿ ಬಜೆಟ್ ಮಂಡಿಸುವ ಅವಶ್ಯಕತೆ ಏನಿತ್ತು.. ಕೇಂದ್ರಕ್ಕೂ ಮುನ್ನ ರಾಜ್ಯ ಬಜೆಟ್ ಮಂಡನೆ ಅಸಂವಿಧಾನಿಕ ಕ್ರಮ, ಬಜೆಟ್ ಹ್ಯಾಂಡ್‌ಬಿಲ್‌ನಂತಿದೆ.
-ಎಸ್.ಆರ್. ಪಾಟೀಲ, ಮುಖಂಡ

  ದೂರದೃಷ್ಟಿ ಬಜೆಟ್ ಇದಾಗಿದ್ದರೂ ತೆರಿಗೆ ಸಂಗ್ರಹಣಾ ವಲಯಗಳನ್ನು ಹೆಚ್ಚಿಸಬಹುದಾಗಿತ್ತು. ಅಭಿವೃದ್ಧಿ ಕಾಮಗಾರಿಗಳಿಗೆ ಕಾಲಮಿತಿ ನಿಗದಿಪಡಿಸಿಲ್ಲ.  
-ಎಸ್.ಎಂ. ಕೆಂಬಿ, ವರ್ತಕ

ಕೃಷಿಗೆ ರು. 22 ಸಾವಿರ ಕೋಟಿ ಅನುದಾನ ಸ್ವಾಗತಾರ್ಹ. ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆಗೆ ಅನುದಾನ ಹೆಚ್ಚಿಸಿಲ್ಲ. ಜಿಲ್ಲೆ ಮಟ್ಟಿಗೆ ಇದು ಶೂನ್ಯ ಬಜೆಟ್.
-ಗಂಗಣ್ಣ ಎಲಿ ಕೃಷಿಕ ಸಮಾಜ

 ಬಜೆಟ್ ಸಮತೋಲನ ದಿಂದ ಕೂಡಿದೆ. ಭಾಗ್ಯಲಕ್ಷ್ಮೀ ಯೋಜನೆ ರು. 18 ಸಾವಿರಕ್ಕೆ ಏರಿಕೆ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹಾಗೂ ಅಂಗವಿಕಲ ವೃದ್ಧಾಪ್ಯ ವೇತನ ಹೆಚ್ಚಿಸಿರುವುದು ಸ್ವಾಗತಾರ್ಹ.
-ಚಂದ್ರಣ್ಣ ಮುಚ್ಚಟ್ಟಿ

ಪ್ರಸಕ್ತ ಬಜೆಟ್ ಶಿಕ್ಷಣ ಪರವಾಗಿದೆ. ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿ ನಿಲಯ, ಶಿಕ್ಷಕರ ನೇಮಕ, ಇತರ ವಿಷಯಗಳ ಮೇಲೆ ಆಶಾಭಾವನೆ ಮೂಡಿಸಿದೆ.  
-ಸಾಗರ ಗುಡಿಸಾಗರ, ಸ್ನಾತಕೋತ್ತರ ವಿದ್ಯಾರ್ಥಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.