ಸುಶೀಲಾತಾಯಿ ನಿಧನ (ಸುದ್ದಿ ಸಂಕ್ಷೇಪ)
ಧಾರವಾಡ: ದಾನಚಿಂತಾಮಣಿ ಎಂದೇ ಖ್ಯಾತಿ ಗಳಿಸಿದ್ದ ಇಲ್ಲಿಯ ಸನ್ಮತಿನಗರದ ನಿವಾಸಿ ಸುಶೀಲಾತಾಯಿ ರಾಚಯ್ಯ ವಸ್ತ್ರದ (90) ಬುಧವಾರ ಬೆಳಗಿನ ಜಾವ ನಿಧನ ಹೊಂದಿದ್ದಾರೆ. ವಿವಿಧ ಅನಾಥಾಶ್ರಮ, ಶಿಕ್ಷಣ ಸಂಸ್ಥೆ, ಸಮುದಾಯ ಭವನ, ಪ್ರಸಿದ್ಧ ದೇವಾಲಯ ಸೇರಿ ಅನೇಕ ಧರ್ಮ ಸೇವೆಗಳಿಗೆ ದಾನ-ಧರ್ಮ ಮಾಡುವುದರೊಂದಿಗೆ ಸಮಾಜಮುಖಿ ದಾಸೋಹ ಸೇವೆಗೆ ಸಮರ್ಪಿಸಿಕೊಂಡಿದ್ದ ಅವರು, ನೇತ್ರದಾನ ಸಹ ಮಾಡಿದ್ದರು. ಮೃತರಿಗೆ ಇಬ್ಬರು ಪುತ್ರರು, ಲೇಖಕಿ ರಾಜೇಶ್ವರಿ ಮಹೇಶ್ವರಯ್ಯ ಸೇರಿದಂತೆ ಮೂವರು ಹೆಣ್ಣುಮಕ್ಕಳು ಹಾಗೂ ಅಪಾರ ಬಂಧುಗಳು ಇದ್ದಾರೆ. ಶ್ರೀರಂಭಾಪುರಿ, ಕಾಶಿ ಶ್ರೀಗಳು, ಶಿರಹಟ್ಟಿ, ಚಿಕ್ಕೇನಕೊಪ್ಪ, ಮುರುಘಾಮಠ, ಸೂಡಿ ಜುಕ್ತಿ ಹಿರೇಮಠ, ಅಮ್ಮಿನಬಾವಿ ಪಂಚಗ್ರಹ ಹಿರೇಮಠ ಸೇರಿದಂತೆ ವಿವಿಧ ಮಠಾಧೀಶರು, ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್.ಆರ್. ಬನ್ನೂರಮಠ, ಶಾಸಕರಾದ ಚಂದ್ರಕಾಂತ ಬೆಲ್ಲದ, ಸೀಮಾ ಮಸೂತಿ, ಮಾಜಿ ಶಾಸಕ ವಿನಯ ಕುಲಕರ್ಣಿ, ಕೆ.ಎಲ್.ಇ. ಸಂಸ್ಥೆ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಸಂತಾಪ ವ್ಯಕ್ತಪಡಿಸಿದ್ದಾರೆ.
ದಾನಯ್ಯ ನಿಧನ
ಧಾರವಾಡ: ಕರ್ನಾಟಕ ವಿವಿ ನಿವೃತ್ತ ನೌಕರ ಇಲ್ಲಿನ ಶ್ರೀನಗರ ನಿವಾಸಿಯಾಗಿದ್ದ ದಾನಯ್ಯ ಹಿರೇಮಠ (72) ಬುಧವಾರ ಬೆಳಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೃತರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ. ಫೆ. 23ರಂದು ಸ್ವಗೃಹದಲ್ಲಿ ಪುಣ್ಯತಿಥಿ ಇರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

