ಧಾರವಾಡ

ಕಾವ್ಯಗಳಲ್ಲೇ ಬಾಲ್ಯ ಸವಿದ ಕಣವಿ, ಎಚ್‌ಎಸ್ವಿ

Published On :

ಧಾರವಾಡ: ಬಾಲ್ಯದಲ್ಲಿ ತಾವಾಡಿದ, ಬೆಳೆದ ಆ ಊರುಗಳ ಬಗ್ಗೆ ಕಟ್ಟಿದ ಕವನಗಳನ್ನು ಒಂದೊಂದಾಗಿ ತಮ್ಮ ಮನದಾಳದಿಂದ ಹೊರ ಹಾಕುತ್ತಿದ್ದಾಗ ಚಂಬೆಳಕಿನ ಕವಿ ಚನ್ನವೀರ ಕಣವಿ ಹಾಗೂ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಪೂರ್ತಿಯಾಗಿ ಕಾವ್ಯದಲ್ಲಿಯೇ ಬಾಲ್ಯ ಸವಿದರು. ಇಲ್ಲಿನ ಕವಿವಿ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಭಾನುವಾರ ನಡೆದ ಸಾಹಿತ್ಯ ಸಂಭ್ರಮದ ಕವಿಯೊಂದಿಗೆ ಕವಿ  ಕೊನೆ ಗೋಷ್ಠಿಯಲ್ಲಿ ಈ ಇಬ್ಬರು ಹಿರಿಯ ಕವಿಗಳು ಮೈನವಿರೇಳುವ ಕವನಗಳನ್ನು ಹೇಳಿ ಇಡೀ ಸಾಹಿತ್ಯ ಸಂಭ್ರಮಕ್ಕೆ ಕಳೆ ತಂದಿಟ್ಟರು. ತಾವು ಹುಟ್ಟಿದ ಹಾವೇರಿ ಜಿಲ್ಲೆಯ ಹೊಂಬಳ, ಬೆಳೆದ ಶಿರುಂದ ಗ್ರಾಮದ ಪ್ರತಿ ಇಂಚಿಂಚನ್ನೂ ಕವಿ ಕಣವಿ ಕಾವ್ಯಗಳ ಮೂಲಕ  ಹೊರತೆಗೆದು, ಆಗಿನ ಹಳ್ಳಿ ಬದುಕು, ಭಾಷೆ, ವಾತಾವರಣ, ಕುಂಬಾರಿಕೆ, ಕಮ್ಮಾರಿಕೆ ಅದನ್ನು ನೋಡಿ ತಮಗಾಗುತ್ತಿದ್ದ ಅಚ್ಚರಿ, ವಿಸ್ಮಯಗಳೇ ಕಾವ್ಯಗಳಾದವು ಎಂದರು. ತಾವು ಹುಟ್ಟಿದ ಹೊದಿಗ್ಗೆರೆ. ಇತ್ತ ಮಲೆನಾಡು ಅಲ್ಲದ, ಬಯಲುಸೀಮೆಯೂ ಆಗದ ಪ್ರದೇಶ ತಾವು ಕಂಡ ಮಲೆನಾಡು, ಬಯಲು ಸೀಮೆಗಳ ದೃಶ್ಯಾವಳಿ, ಅಲ್ಲಿನ ಜನರ ಸ್ಥಿತಿಗತಿಗಳ ಪರಿಚಯವನ್ನು ಎಚ್‌ಎಸ್ವಿ ಮಾಡಿಕೊಟ್ಟರಷ್ಟೇ ಅಲ್ಲ ಗೋಷ್ಠಿಯ ಕೊನೆಗೆ ತಮ್ಮದೇ ಊರಿನ ರಂಗನಾಥ ದೇವಾಲಯ ಕುರಿತ ಒಂದು ಕವನ ವಾಚಿಸಿದರು. ಗೋಷ್ಠಿಯನ್ನು ಕವಿ ಆನಂದ ಜಂಝರವಾಡ ನಿರ್ದೇಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.