ಧಾರವಾಡ

ಪತ್ರಿಕೋದ್ಯಮ ದಾರಿ ತೋರಿಸುವ ಸಾಧನವಾಗಬೇಕು: ಡಾ. ಪಾಟೀಲ್ ಪುಟ್ಟಪ್ಪ

Published On :





ಧಾರವಾಡ: ಪತ್ರಿಕೋದ್ಯಮ ಎಲ್ಲರಿಗೂ ದಾರಿ ತೋರಿಸುವ ಸಾಧನವಾಗಬೇಕೆ ವಿನಹ ಅದು ದಾರಿ ತಪ್ಪಿಸುವ ಮಾಧ್ಯಮವಾಗಬಾರದು. ಸರ್ಕಾರ ದಾರಿ ತಪ್ಪಿದಾಗ ಅವುಗಳಿಗೆ ದಾರಿ ತೋರಿಸುವ ಕೆಲಸವನ್ನು ಪತ್ರಿಕಾರಂಗ ಮಾಡಬೇಕು ಎಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ತಿಳಿಸಿದರು.
ಕರ್ನಾಟಕ ವಿವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಜಂಟಿಯಾಗಿ ಹಮ್ಮಿಕೊಂಡಿರುವ ಎರಡು ದಿನಗಳ ರೇನ್‌ಬೋ-2013 ಮಾಧ್ಯಮ ಹಬ್ಬ ಮತ್ತು ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು  ಮಾತನಾಡಿದರು.
ಪತ್ರಕರ್ತ ಮಾರಾಟದ ವಸ್ತುವಲ್ಲ. ಆತ ತನ್ನ ಬೆಲೆ ಕಾಯ್ದುಕೊಳ್ಳಬೇಕು. ಇಂದಿನ ಮಾಧ್ಯಮ ಕ್ಷೇತ್ರದಲ್ಲಿ ಜನ ಭ್ರಷ್ಟರೇ ತುಂಬಿಕೊಂಡಿದ್ದಾರೆ. ಈ ವ್ಯವಸ್ಥೆ ಮುಂದೊಂದು ದಿನ ಖಂಡಿತ ಬದಲಾಗುತ್ತದೆ. ವಿದ್ಯಾವಂತರು ಇಂದಿನ ಭ್ರಷ್ಟಾಚಾರಕ್ಕೆ ಮೂಲ ಕಾರಣ ಎಂದರು.
ಕರ್ನಾಟಕ ವಿವಿ ಕುಲಪತಿ ಪ್ರೊ. ಎಚ್.ಬಿ. ವಾಲೀಕಾರ ಮಾತನಾಡಿ, ಪತ್ರಕರ್ತರಿಗೆ ಬಿಡುವು ಎನ್ನುವುದು ಕನಸಿನ ಮಾತಾಗಬೇಕು. ಅವರ ಪ್ರವೃತ್ತಿಯೇ ಅಂತಹದು. ವೃತ್ತಿ ಧರ್ಮ, ಭಾಷಾ ಕೌಶಲ್ಯ ಜೊತೆಗೆ ಎಲ್ಲ ವಿಷಯಗಳ ಜ್ಞಾನ ಬೆಳೆಸಿಕೊಂಡು ಕಾರ್ಯ ನಿರ್ವಹಿಸಬೇಕು ಎಂದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ. ಪೊನ್ನಪ್ಪ ಮಾತನಾಡಿದರು. ವಿಭಾಗದ ಮುಖ್ಯಸ್ಥ ಡಾ.ಎ.ಎಸ್. ಬಾಲಸುಬ್ರಹ್ಮಣ್ಯ ಸ್ವಾಗತಿಸಿದರು. ಸಹದೇವ ಮಾನೆ ಮತ್ತು ಜ್ಯೋತಿ ದಫೆದಾರ್ ನಿರೂಪಿಸಿದರು. ಡಾ. ಎಂ. ಗಂಗಾಧರಪ್ಪ ವಂದಿಸಿದರು. ಡಾ. ಸಂಜಯಕುಮಾರ ಮಾಲಗತ್ತಿ ಇದ್ದರು. ಇದೇ ಸಂದರ್ಭ ಮಾಧ್ಯಮ ಸೌರಭ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.