ಐಡಿಯಾ ಗ್ರಾಹಕರಿಗೆ 'ರಿಚಾರ್ಜ್ ಪ್ರತಿದಿನ ಗೆಲ್ಲಿ'
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂ. 5
ಫೆಬ್ರವರಿಯಲ್ಲಿ ಐಡಿಯಾ ಸೆಲ್ಯೂಲರ್ ಸರ್ವೀಸ್ ನಡೆಸಿದ್ದ 'ರಿಚಾರ್ಜ್ ಪ್ರತಿದಿನ ಗೆಲ್ಲಿ' ಯೋಜನೆಯಡಿ ಬಹುಮಾನ ಪಡೆದ ಐಡಿಯಾ ಗ್ರಾಹಕರಿಗೆ ಗುರುವಾರ ಕಾರು, ಬೈಕ್ ಸೇರಿದಂತೆ ವಿವಿಧ ಉಡುಗೊರೆ ವಿತರಿಸಲಾಯಿತು.
ಧಾರವಾಡ, ಬಳ್ಳಾರಿ ಮತ್ತು ರಾಯಚೂರು ವಲಯದಲ್ಲಿ ರಿಚಾರ್ಜ್ ಮಾಡಿ ಪ್ರತಿದಿನ ಗೆಲ್ಲಿ ಕೊಡುಗೆಯಲ್ಲಿ ನಾಲ್ಕು ಬೈಕ್ ಮತ್ತು ಎರಡು ಕಾರುಗಳನ್ನು ಈ ವ್ಯಾಪ್ತಿಯ ಐಡಿಯಾ ಗ್ರಾಹಕರು ಗೆದ್ದುಕೊಂಡಿದ್ದಾರೆ.
ಹುಬ್ಬಳ್ಳಿಯ ಯಲ್ಲಪ್ಪ ಮಳಲಿ, ಬಳ್ಳಾರಿ ಜಿಲ್ಲೆಯ ಶ್ರೀನಿವಾಸ ಜೋಶಿ ಬೈಕ್ಗಳನ್ನು ಗೆದ್ದುಕೊಂಡಿದ್ದರೆ, ಹುಬ್ಬಳ್ಳಿಯ ಇನ್ನೋರ್ವ ಐಡಿಯಾ ಗ್ರಾಹಕ ವಾಷಿಮ್ಗೆ ವಾಷಿಂಗ್ ಮಷಿನ್ ಲಭಿಸಿದೆ. ಬಹುಮಾನ ವಿತರಣೆ ವೇಳೆ ಐಡಿಯಾ ಸೆಲ್ಯೂಲರ್ ಮುಖ್ಯ ನಿರ್ವಾಹಕ ಅಧಿಕಾರಿ ಶಿವ ಗಣಪತಿ, ಕರ್ನಾಟಕದ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ರಾಜೇಶ ನಾಯರ್, ಮಾರಾಟ ವಿಭಾಗದ ಮುಖ್ಯಸ್ಥ ರಾಜೇಶ ಎನ್.ಜಿ ಮತ್ತು ಹುಬ್ಬಳ್ಳಿ ವಿಭಾಗದ ಮುಖ್ಯಸ್ಥ ಪ್ರದೀಪ್ ಗಾಯಕವಾಡ ಇದ್ದರು.
ಬಹುಮಾನಕ್ಕೂ ಟಿಡಿಎಸ್ಸಾ?
ಬಹುಮಾನ ರೂಪದಲ್ಲಿ ಪಡೆದ ವಸ್ತುಗಳಿಗೆ ಗ್ರಾಹಕರಿಂದ ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್) ಎಂದು ಐಡಿಯಾ ಸೆಲ್ಯೂಲರ್ ಕಂಪನಿ ಹಣ ಪಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಕಂಪನಿ ಅಧಿಕಾರಿಗಳು ತಡಬಡಾಯಿಸಬೇಕಾಯಿತು. 32 ಇಂಚಿನ ಎಲ್ಸಿಡಿಯನ್ನು ಬಹುಮಾನವಾಗಿ ಪಡೆದ ಗ್ರಾಹಕರಿಂದ ಐಡಿಯಾ ಕಂಪನಿ 16 ಸಾವಿರ ತೆರಿಗೆ ಎಂದು ಪಾವತಿಸಿಕೊಂಡಿದೆ. ಮಾರುಕಟ್ಟೆಯಲ್ಲಿ ಸರಾಸರಿ 25ರಿಂದ 26 ಸಾವಿರಕ್ಕೆ ದೊರೆಯುವ 32 ಇಂಚಿನ ಎಲ್ಸಿಡಿ ಟಿವಿಯನ್ನು ಐಡಿಯಾ ಬಹುಮಾನ ರೂಪದಲ್ಲಿ ನೀಡಿದೆ. ಆದರೆ ವಾಸ್ತವದಲ್ಲಿ ಆದಾಯ ತೆರಿಗೆ ನಿಯಮಾವಳಿ ಪ್ರಕಾರ ಬಹುಮಾನ ನಗದು ರೂಪದಲ್ಲಿದ್ದರೆ ಮಾತ್ರ ತೆರಿಗೆ ಅನ್ವಯವಾಗುತ್ತದೆ ವಿನಃ ವಸ್ತುಗಳ ರೂಪದಲ್ಲಿರುವ ಬಹುಮಾನಕ್ಕೆ ಟಿಡಿಎಸ್ ಅನ್ವಯವಾಗುವುದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

