ಧಾರವಾಡ

ಪಡಿತರ, ಸೀಮೆ ಎಣ್ಣೆ ಸರಿಯಾಗಿ ವಿತರಿಸುತ್ತಿಲ್ಲ: ರಾಜರತ್ನ ಹುಲಗೂರ

Published On :

ಲಕ್ಷ್ಮೇಶ್ವರ: ಸೀಮೆ ಎಣ್ಣೆ ವಿತರಕರು ತಿಂಗಳಲ್ಲಿ 2-3 ದಿನಗಳವರೆಗೆ ಮಾತ್ರ ಸೀಮೆ ಎಣ್ಣೆ ವಿತರಿಸಿ, ನಂತರ ವಿತರಿಸಲು ನಿರಾಕರಿಸುತ್ತಾರೆ. ಹಣವಿದ್ದವರು ವಿತರಕರು ನೀಡಿದ ಗಡುವಿನೊಳಗೆ ಖರೀಧಿ ಮಾಡುತ್ತಾರೆ. ಬಡವರಿಗೆ ಇದರಿಂದ ತೊಂದರೆಯಾಗುತ್ತಿದೆ ಎಂದು ತಾಪಂ ಮಾಜಿ ಸದಸ್ಯ ರಾಜರತ್ನ ಹುಲಗೂರ ಆರೋಪಿಸಿದರು.
ಅವರು ಶನಿವಾರ ಸಮೀಪದ ಶಿಗ್ಲಿ ಗ್ರಾಪಂನ ಸಭಾಭವನದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು. ಪಡಿತರ ದಾನ್ಯ ಹಾಗೂ ಸೀಮೆ ಎಣ್ಣೆ ವಿತರಕರು ಸರಿಯಾಗಿ ಪಡಿತರವನ್ನು ವಿತರಣೆ ಮಾಡುತ್ತಿಲ್ಲ. ಅದಕ್ಕಾಗಿ ತಾಲೂಕಿನ ದಂಡಾಧಿಕಾರಿಗಳು ಅವರಿಗೆ ಸರಿಯಾದ ರೀತಿಯಲ್ಲಿ ಪಡಿತರ ನೀಡುವಂತೆ ತಾಕೀತು ಮಾಡಬೇಕು ಎಂದರು. ಇದಕ್ಕೆ ಉತ್ತರಿಸಿದ ಶಿರಹಟ್ಟಿ ತಾಲೂಕು ದಂಡಾಧಿಕಾರಿ ಆರ್.ಡಿ. ಉಪ್ಪಿನ ಪಡಿತರ ದಾನ್ಯ ವಿತರಣೆಯಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ. ಆದರೆ ಪಡಿತರ, ಸೀಮೆ ಎಣ್ಣೆ ವಿತರಣೆಯಲ್ಲಿ ಆಗುತ್ತಿರುವ ಗೊಂದಲ ನಿವಾರಿಸಿ, ವಿತರಿಕರಿಗೆ ಸೂಚನೆ ನೀಡಿ, ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ತಲುಪಿಸುವಂತೆ ಮಾಡುತ್ತೇವೆ.
ಸರ್ಕಾರವು ಜನ ಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರ ನಿಮಿತ್ತ ಈ ಜನಸಂಪರ್ಕ ಸಭೆಯಲ್ಲಿ ತಮ್ಮ ಸಮಸ್ಯೆಗಳಿಗೆ ನೆರವಾಗಿ ಪರಿಹಾರ ಅಥವಾ ಮಾಹಿತಿಯನ್ನು ನೀಡಿ ಜನ ಸಾಮಾನ್ಯರ ಸಮಸ್ಯೆಗಳನ್ನು ಹೋಗಲಾಡಿಸುವ ಪ್ರಯತ್ನ ಮಾಡಲಾಗುತ್ತದೆ ಎಂದರು. ಕಲ್ಲಪ್ಪ ಗುಂಜಳ ತಾಪಂ ಅಧ್ಯಕ್ಷೆ ಸುನಂದಮ್ಮ ಬಿದರಳ್ಳಿ, ಗ್ರಾಪಂ ಅಧ್ಯಕ್ಷ ಡಿ.ವೈ. ಹುನಗುಂದ, ಉಪಾಧ್ಯಕ್ಷ ಮನೋಹರ ಕರ್ಜಗಿ, ಉಪತಹಸೀಲ್ದಾರ್ ಮೋಹನ ಕಟ್ಟಿಮನಿ, ಕಂದಾಯ ನಿರೀಕ್ಷಕ ಎಫ್.ಎನ್. ಹುಬ್ಬಳ್ಳಿ ಸೇರಿದಂತೆ ತಾಲೂಕಿನ ಎಲ್ಲ ಅಧಿಕಾರಿಗಳು, ಗ್ರಾಪಂ ಸದಸ್ಯರು, ಬಸಣ್ಣ ಕಳಸದ, ಯಲ್ಲಪ್ಪ ತಳವಾರ. ಕೇಶವ ಗುಲಗಂಜಿ, ಮಂಜುನಾಥ ಬದಿ ಇದ್ದರು. ಪಿಡಿಓ ಅಮ್ಮನವರ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.