ಸಿದ್ದಿ ಜನಾಂಗದ ಬೇಡಿಕೆ ಈಡೇರಿಸಿ
ಕಲಘಟಗಿ: ತಾಲೂಕಿನ ಬೈಚವಾಡ, ಮಸಳಿಕಟ್ಟಿ ಇನ್ನಿತರೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಗ್ರಾಮಗಳಲ್ಲಿ ವಾಸವಾಗಿರುವ ಸಿದ್ದಿ ಬುಡಕಟ್ಟಿ ಜನಾಂಗವನ್ನು ಪ.ಪಂಗಡಕ್ಕೆ ಸೇರಿಸಬೇಕು ಮತ್ತು ಸಾಗುವಳಿ ಮಾಡುತ್ತಿದ್ದ ಜಮೀನನ್ನು ಸಕ್ರಮಗೊಳಿಸಬೇಕೆಂದು ಸೋಮವಾರ ತಹಸೀಲ್ದಾರ್ ಮೂಲಕ ಡಿಸಿಗೆ ಮನವಿ ನೀಡಿ ಆಗ್ರಹಿಸಿದರು.
ತಾಲೂಕು ಸಿದ್ದಿ, ಶಾವಲಿ ಬುಡಕಟ್ಟು ಜನಾಂಗದ ಹಿತ ಹೋರಾಟ ಸಮಿತಿ ಇಬ್ರಾಹಿಂ ಎಂ. ಗುಂಜಾವತಿ, ಗ್ರೀನ್ ಇಂಡಿಯಾ ಟ್ರಸ್ಟ್ಯಲ್ಲಾಪುರ ಸಂಯೋಜಕ ಇಮಾಮ ಎ.ಕೆ. ಸಿದ್ದಿ, ಬೈಚವಾಡದ ಗೌಸುಸಾಬ ಗುಂಜಾವತಿ, ಶಬಾನಿ ಕಾರ್ಯೆಕರ, ಭಯಾಬಜ ಕಿರಾತ ಮತ್ತಿತರರು ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಸರ್ಕಾರ ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಜನಾಂಗವನ್ನು ಮಾತ್ರ ಪ.ಜಾತಿ ಪಂಗಡಕ್ಕೆ ಸೇರಿಸಿದ್ದು, ನಮ್ಮನ್ನು ಕಡೆಗಣಿಸಿ ಅನ್ಯಾಯ ಮಾಡಿದೆ. ಅಂದಿನಿಂದ ಇಂದಿನವರೆಗೂ ಹೋರಾಟ ಮಾಡುತ್ತ ಸರ್ಕಾರದ ಗಮನ ಸೆಳೆಯುತ್ತ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಹಸೀಲ್ದಾರ್ ಮುಂದೆ ಹೇಳಿಕೊಂಡರು.
ನಂತರ ತಹಸೀಲ್ದಾರ್ ಕೆ.ಆರ್. ಕುಲಕರ್ಣಿ, ವಿ.ಜಿ. ಗುಳಗುಳೆಯವರು ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳಿಗೆ ತಲುಪಿಸುವುದಾಗಿ ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

