'ಚಿಕ್ಕಮಗಳೂರು: 20 ಎಕರೆ ಅರಣ್ಯ ಅತಿಕ್ರಮಣ'
ಧಾರವಾಡ: ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕಸಬಾ ಹೋಬಳಿಯ ಸಾಲೂರು ಹಾಗೂ ಬಿಳಾಲಕೊಪ್ಪ ಸುತ್ತಲಿನ 20 ಎಕರೆ ಹಸಿರು ಅರಣ್ಯ ಪ್ರದೇಶವು ಅರಣ್ಯ ಇಲಾಖೆ ಅಧಿಕಾರಗಳ ನಿರ್ಲಕ್ಷ್ಯ ಹಾಗೂ ರಾಜಕೀಯ ಮುಖಂಡರ ಕೈವಾಡದಿಂದ ಒತ್ತುವರಿಯಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಆರೋಪಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಲೂರು ಗ್ರಾಮದ ಸರ್ವೆ ನಂ.105ರಲ್ಲಿ ರುಕ್ಮಿಣಿಯಮ್ಮ ಎಂಬವರ ಹೆಸರಲ್ಲಿ 1.4 ಎಕರೆ ಜಾಗವಿದೆ. ಆದರೆ, ಈ ಜಾಗದ ಸುತ್ತಮುತ್ತಲಿನ 20 ಎಕರೆ ಮೀಸಲು ಅರಣ್ಯ ಪ್ರದೇಶವನ್ನು ಅಲ್ಲಿನ ಎಚ್.ಎಂ. ಮಂಜಪ್ಪಗೌಡ ಎಂಬವರು ಕಳೆದ 3 ತಿಂಗಳ ಹಿಂದೆ ಅತಿಕ್ರಮಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿನ ಮತ್ತಿ ಮರಗಳನ್ನು ಕಡಿಯಲಾಗಿದ್ದು, ಅಂದಾಜು 10 ಕೋಟಿ ಬೆಲೆ ಬಾಳುವ 50ಕ್ಕೂ ಹೆಚ್ಚು ಮತ್ತಿಕಟ್ಟಿಗೆ ಮಾರಲಾಗಿದೆ ಎಂದು ದೂರಿದರು.
ಅರಣ್ಯ ಪ್ರದೇಶ ಅತಿಕ್ರಮಣದ ಬೆಂಗಾವಲಾಗಿ ಬಿಜೆಪಿಯ ಮುಖಂಡ ಡಿ.ಎನ್. ಜೀವರಾಜ್ ಕಾರ್ಯನಿರ್ವಹಿಸಿದ್ದಾರೆ ಎಂದು ಆರೋಪಿಸಿದ ಅವರು, ಅತಿಕ್ರಮಣದ ಕುರಿತಂತೆ ಸಾಲೂರು ಹಾಗೂ ಬಿಳಾಲಕೊಪ್ಪ ಗ್ರಾಮದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಎರಡು ಪುಟಗಳ ಲಿಖಿತ ದೂರು ನೀಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.
ಬದಲಾಗಿ ಗ್ರಾಮಸ್ಥರಿಗೆ ಅರಣ್ಯ ಇಲಾಖೆ, ಅಲ್ಲಿನ ತಹಸೀಲ್ದಾರ್ ಹಾಗೂ ರಾಜಕೀಯ ಮುಖಂಡರು ಬೆದರಿಕೆ ಹಾಕಲಾಗಿದೆ. ಅಲ್ಲದೇ, ಗ್ರಾಮಸ್ಥರಿಗೆ ನ್ಯಾಯ ಒದಗಿಸಿಕೊಡಬೇಕಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರನ್ನು ಸಮಾಧಾನ ಪಡಿಸುವ ತಂತ್ರ ನಡೆಸಿದ್ದಲ್ಲದೇ, ಕೆಲವರ ಮೇಲೆ ಸಣ್ಣ ಪುಟ್ಟ ಕೇಸುಗಳ ನೆಪದಲ್ಲಿ ಕಾನೂನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಎಸ್.ಆರ್. ಹಿರೇಮಠ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

