ಗ್ರಾಪಂ ಸಭೆ: ಅಧಿಕಾರಿಗಳಿಗೆ ದಿಗ್ಭಂದನ
ಕಲಘಟಗಿ: ತಾಲೂಕಿನ ದೇವಿಕೊಪ್ಪ ಗ್ರಾಪಂ ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು ಸಭಾಭವನಕ್ಕೆ ಬೀಗ ಜಡಿದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ದಿಗ್ಬಂಧನವಿರಿಸಿ ಪ್ರತಿಭಟಿಸಿದರು.
ಶುಕ್ರವಾರ ಗ್ರಾಮದ ಶ್ರೀ ರಾಮಲಿಂಗೇಶ್ವರ ಸಭಾಭವನದಲ್ಲಿ ಗ್ರಾಪಂ ಅಧ್ಯಕ್ಷೆ ಶಂಕ್ರವ್ವ ಕರೆಪೂಜಾರ, ತಾಪಂ ಕಾರ್ಯನಿರ್ವಾಹಣಾಧಿಕಾರಿ ಎಸ್.ಆರ್. ವೀರಕರ, ನೊಡಲ್ ಅಧಿಕಾರಿ ವಿಶಾಲ ಅಡಾಳಕರ ಅವರ ಸಮ್ಮುಖದಲ್ಲಿ ಸಭೆ ಜರುಗಿತ್ತು.
ಸಭೆಗೆ ನಿರಂತರವಾಗಿ ಗೈರಾಗಿ ಸಾರ್ವಜನಿಕರಿಗೆ ಮಾಹಿತಿ ನೀಡದೆ, ದೂರುಗಳಿಗೆ ಸ್ಪಂದಿಸದೆ ಇರುವ ಸಣ್ಣ ನೀರಾವರಿ ಇಲಾಖೆ, ಹೆಸ್ಕಾಂ, ಜಲಾನಯನ ಇಲಾಖೆಯ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಕ್ರಮದ ಭರವಸೆ: ಈ ರೀತಿ ಅಧಿಕಾರಿಗಳು ಗೈರಾದರೆ ಸಭೆ ನಡೆಸುವುದಾದರು ಏಕೆ ಎಂದು ಸಹದೇವಪ್ಪ ಕೆಲಗೇರಿ, ಮಹಾಬಳೇಶ್ವರ ಕ್ಯಾರಿಕೊಪ್ಪ, ಬಸವರಾಜ ಬಾವುಕಾರ, ಶೇಖಪ್ಪ ತುಮರಿಕೊಪ್ಪ ಕಿಡಿ ಕಾರಿದರು. ಇದಕ್ಕೆ ಧ್ವನಿಗೂಡಿಸಿದ ಕೆಲ ರೈತರು ಅನುಷ್ಠಾನಾಧಿಕಾರಿಗಳು ಬರುವವರೆಗೂ ಸಭೆ ನಡೆಸಕೂಡದೆಂದು ಸಭೆಯಿಂದ ಹೊರಬಂದು ಸಭಾಭವನಕ್ಕೆ ಬೀಗ ಹಾಕಿದರು. ಇದರಿಂದ ಕೆಲ ಹೊತ್ತು ಗೊಂದಲಕ್ಕೀಡಾದ ಕೆಲ ಅಧಿಕಾರಿಗಳು ಹಿಂಬಾಗಿಲಿನಿಂದ ಪಲಾಯನಗೈದರು. ನಂತರ ಬೀಗವನ್ನು ತೆರೆಸಿದ ತಾಪಂ ಕಾರ್ಯನಿರ್ವಾಹಣಾಧಿಕಾರಿ ಎಸ್.ಆರ್. ವೀರಕರ, ಸಭೆಯಲ್ಲಿದ್ದ ಜನರ ದೂರುಗಳನ್ನು ಆಲಿಸಿ ಸಭೆಗೆ ಗೈರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಸಭೆ ಮುಂದುವರೆಯಿತು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಂ.ಜಿ. ಅಂಗಡಿ, ಎನ್.ವಿ. ಮೆಣಸಿನಕಾಯಿ, ಗ್ರಾಪಂ ಉಪಾಧ್ಯಕ್ಷ ಎನ್.ಎಂ. ಹೂಗಾರ, ಮಾಜಿ ಅಧ್ಯಕ್ಷರಾದ ಯಲ್ಲಪ್ಪ ಬಾಡದ, ಮಹಾದೇವಪ್ಪ ಭೋವಿ, ರೈತರಾದ ಶಂಕ್ರಪ್ಪ ಕೆಲಗೇರಿ, ನಿಂಗಪ್ಪ ನೂಲ್ವಿ, ಸುಭಾಸ ಮುದಿಗೌಡ್ರ, ದಿನೇಶ ಮಿರ್ಜಿ, ಬನಪ್ಪ ಮಾಳಗಿ, ಹೂಲೆಪ್ಪ ಭೋವಿ, ಬಿ.ವೈ. ಕ್ಯಾರಿಕೊಪ್ಪ, ಎಸ್.ಎಸ್. ನೂಲ್ವಿ, ಬಸವರಾಜ ಪರವಾಪುರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

