ಮನಸ್ಸಿನ ಮೇಲೆ ಪ್ರಭುತ್ವ ಸಾಧಿಸಿ
ಧಾರವಾಡ: ಮನಸ್ಸಿನ ಮೇಲೆ ಪ್ರಭುತ್ವ ಸಾಧಿಸಿ, ಧನಾತ್ಮಕ ಚಿಂತನೆಗಳನ್ನು ಹೇರಿದಾಗ ಮನುಷ್ಯ ಯಶಸ್ಸು ಸಾಧಿಸಲು ಸಾಧ್ಯ ಎಂದು ಮನೋವಿಜ್ಞಾನಿ ಡಾ. ಗಿರೀಶ್ ಪುತ್ತೂರ ಹೇಳಿದರು. ಇಲ್ಲಿನ ವೈ.ಬಿ. ಅಣ್ಣಿಗೇರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವ್ಯಕ್ತಿತ್ವ ವಿಕಸನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವ್ಯಕ್ತಿ ಮನಸ್ಸು ಹಾಗೂ ನೆನಪಿನ ಶಕ್ತಿಯನ್ನು ಉನ್ನತಗೊಳಿಸಲು ಸಕಾರಾತ್ಮಕ ವಿಚಾರ ಧಾರೆಗಳನ್ನು ಚಿಂತನೆಗೆ ಒಳಪಡಿಸಬೇಕು. ಅಲ್ಲದೆ, ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವ ವಿಧಾನ, ಹದಿ ಹರೆಯದ ಮನ-ಶಾಸ್ತ್ರದ ವಿಚಾರಗಳ ಕುರಿತಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಸಂಸ್ಥೆಯ ಅಧ್ಯಕ್ಷ ಪ್ರೊ. ನಾಗೇಶ ಅಣ್ಣಿಗೇರಿ, ಪ್ರಾಚಾರ್ಯ ಪ್ರೊ.ವಿ.ಕೆ. ಕುಂಬಿ, ಪ್ರೊ. ಶಿವಶಂಕರರಾವ್, ಪ್ರೊ. ಶಂಕರ ಕುಂಬಾರ, ಪ್ರೊ. ಬಸವರಾಜ ಉಡಕೇರಿ, ಪ್ರೊ. ಉದಯ ಹಿರೇಮಠ, ಎಂ.ಪಿ. ಯಡಳ್ಳಿ, ಎಂ.ಡಿ. ದೇಶಪಾಂಡೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

