ಧಾರವಾಡ

ಪೋಷಕಾಂಶ ಕೊರತೆ ನಿವಾರಿಸಲು ಸಲಹೆ

Published On :

ಧಾರವಾಡ:  ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಗೋವಿನಜೋಳದ ಬೆಳೆಯಲ್ಲಿ ಶಿಫಾರಸು ಮಾಡಿದ ಪ್ರಮಾಣದಲ್ಲಿ ರಸಗೊಬ್ಬರ ಉಪಯೋಗಿಸದ ಹೊಲಗಳಲ್ಲಿ ಕಾಣುತ್ತಿರುವ ಪೋಷಕಾಂಶಗಳ ಕೊರತೆ ನಿವಾರಣೆಗೆ ಕೃಷಿ ವಿಶ್ವವಿದ್ಯಾಲಯ ಸಲಹೆ ನೀಡಿದೆ.  ರಂಜಕದ ಕೊರತೆಯಿಂದ ಸಸಿಯ ಕೆಳಭಾಗದ ಕಾಂಡ ಮತ್ತು ಎಲೆಗಳು ಕಂದು ಬಣ್ಣಕ್ಕೆ ತಿರುಗುವುದು. ಪೊಟ್ಯಾಷ್ ಕೊರತೆಯಿಂದ ಕೆಳಗಿನ ಎಲೆಗಳು ತುದಿಯಿಂದ ಒಣಗಲು ಪ್ರಾರಂಭವಾಗಿ ಅಂಚುಗಳನ್ನು ಆವರಿಸುವುದು. ಸತುವಿನ ಕೊರತೆಯಿಂದ ತುದಿಯಿಂದ 2ನೇ ಅಥವಾ ಮೂರನೇ ಬಲಿತ ಎಲೆಗಳ ನರಗಳ ಮಧ್ಯ ಭಾಗ ಹಳದಿಯಾಗಿ ಬಿಳಿಚಿಕೊಳ್ಳುವುದು. ಈ ಕೊರತೆ ಲಕ್ಷಣ್ನ ನಿರ್ವಹಿಸಲು ಶಿಫಾರಿತ ಪ್ರಮಾಣದ ಸಾರಜನಕ (100 ಕೆಜಿ), ರಂಜಕ (50 ಕೆಜಿ) ಪೊಟ್ಯಾಷ್ (25 ಕೆಜಿ) ಮತ್ತು ಸತುವಿನ ಸಲ್ಫೇಟ್ (10 ಕೆಜಿ) ಪ್ರತಿ ಹೆಕ್ಟೇರಿಗೆ ಉಪಯೋಗಿಸಬೇಕು.  ಸತುವಿನ ಸಲ್ಫೇಟನ್ನು ಸಾವಯವ ಗೊಬ್ಬರದ ಜೊತೆ ಮಿಶ್ರಣ ಮಾಡಿ ಹೊಲಕ್ಕೆ ಹಾಕಬೇಕು. ಬಿತ್ತನೆಯಾದ 30 ದಿವಸಗಳಲ್ಲಿ ಶೇ. 50ರಷ್ಟು ಸಾರಜನಕವನ್ನು ಮೇಲುಗೊಬ್ಬರವಾಗಿ ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿರುವಾಗ ಒದಗಿಸಬೇಕು. ಹಲವು ಕಡೆಗಳಲ್ಲಿ ಕಾಂಡಕೊರಕದ ಬಾಧೆ ಕಂಡು ಬಂದಿದ್ದು ಇದರ ನಿರ್ವಹಣಿಗೆ ಕಾರ್ಬೊಪ್ಯೂರಾನ್ 3ಜಿ 3-4 ಹರಳುಗಳನ್ನು ಸುಳಿಯಲ್ಲಿ ಹಾಕಿ ಕೀಟ ನಿರ್ವಹಣೆ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ವಿವಿ ವಿಸ್ತರಣಾ ಶಿಕ್ಷಣ ಘಟಕದ ಪ್ರಾಧ್ಯಾಪಕರು ಹಾಗೂ ವಿಸ್ತರಣಾ ಮುಂದಾಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.