ಧಾರವಾಡ

ಸಕ್ಕರೆ ಕಾರ್ಖಾನೆ ಶೀಘ್ರ ಆರಂಭಿಸಿ

Published On :

ಕನ್ನಡಪ್ರಭ ವಾರ್ತೆ, ಕಲಘಟಗಿ, ಜು. 17
ತಾಲೂಕಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸಕ್ಕರೆ ಕಾರ್ಖಾನೆ ಶೀಘ್ರ ಕಾರ್ಯಾರಂಭ ಮಾಡಬೇಕೆಂದು ಧಾರವಾಡ ಜಿಲ್ಲಾ ಕಬ್ಬು ಬೆಳೆಗಾರರ ಸಂಘ ಸರ್ಕಾರವನ್ನು ಆಗ್ರಹಿಸಿದೆ.
ಮಂಗಳವಾರ ಎಪಿಎಂಸಿಯಲ್ಲಿ ಜರುಗಿದ ಕಬ್ಬು ಬೆಳೆಗಾರರ ಸಂಘದ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಎಸ್.ಎನ್. ಬನವಣ್ಣವರ, ರಾಜ್ಯ ಕಾರ್ಯದರ್ಶಿ ನಿಜಗುಣಿ ಕೆಲಗೇರಿ, ಮಹತ್ವಾಕಾಂಕ್ಷೆಯ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಉಂಟಾಗಿರುವ ಕಾನೂನು ತೊಡಕನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರಳಗೊಳಿಸಿ ಸಕ್ಕರೆ ಕಾರ್ಖಾನೆ ನಿರ್ಮಿಸಲು ಅನುಕೂಲ ಮಾಡಿಕೊಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ನೀಡಲು ಸಭೆ ನಿರ್ಧರಿಸಿತು.
ತಾರತಮ್ಯ ಬೇಡ: ಕಳೆದ ಸಾಲಿನಲ್ಲಿ ಹಳ್ಯಾಳ ಪ್ಯಾರಿ ಶುಗರ್ ಕಾರ್ಖಾನೆ ಪೂರೈಸಿದ ಪ್ರತಿ ಟನ್ ಕಬ್ಬಿಗೆ ರು. 2500ಗಳನ್ನು ರೈತರಿಗೆ ನೀಡಿದ್ದು ಬಾಕಿ ಇರುವ ಪ್ರತಿ ಟನ್‌ಗೆ ರು. 500ಗಳಂತೆ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಬೆಳೆ ವಿಮೆ ಮಂಜೂರಾತಿಯಲ್ಲಿ ತಾರತಮ್ಯ ಮಾಡುತ್ತಿರುವುದನ್ನು ಸಂಬಂಧಿಸಿದ ಇಲಾಖೆಯವರು ಕೈ ಬಿಟ್ಟು ಕಳೆದ ಸಾಲಿನ ರಾಷ್ಟ್ರೀಯ ವಿಮಾ ಮಂಜೂರಾಗಿದ್ದರೂ ಅಧಿಕೃತವಾಗಿ ರೈತರಿಗೆ ತಿಳಿಸಿಲ್ಲ. ಇದಕ್ಕಾಗಿ ಗ್ರಾಹಕರ ಮೊರೆ ಹೋಗುವುದಾಗಿ ರೈತ ಮೋಹನ ಪಂಡಿತ, ಉಳವಪ್ಪ ಬಳಿಗೇರ ಹೇಳಿದರು.
ತಾಲೂಕಿನ ಸಹಕಾರಿ ಸಂಘಗಳಲ್ಲಿ ಸಾಲಮನ್ನಾ ಆದ ರೈತರು ಮರು ಸಾಲ ಪಡೆಯುವಾಗ ಸಹಕಾರಿ ಸಂಘದವರು ಠೇವಣಿ ಹಣ ಪಡೆಯುತ್ತಿದ್ದು ಅವುಗಳಿಗೆ ಯೋಗ್ಯ ದಾಖಲೆ ಕೊಡಬೇಕು. ಇದರ ಬಗ್ಗೆ ಕೆಸಿಸಿ ಬ್ಯಾಂಕ್ ಹಾಗೂ ಸಹಕಾರಿ ಇಲಾಖೆ ಅಧಿಕಾರಿಗಳು ಇದರತ್ತ ಗಮನ ಹರಿಸಿ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂಬ ವಿಷಯಗಳ ಕುರಿತು ಚರ್ಚಿಸಲಾಯಿತು. ರೈತರಾದ ಉಮೇಶ ಕೊಪ್ಪದ, ಬಸವರಾಜ ಆಲದಕಟ್ಟಿ, ನಿಜಲಿಂಗಪ್ಪ ಹುಲಮನಿ, ಸುರೇಶ ಅರ್ಕಸಾಲಿ, ನಾಗನಗೌಡ ಪಾಟೀಲ, ಅಜ್ಜಯ್ಯ ಹಿರೇಮಠ, ಮಂಜುನಾಥ ಹುಲ್ಲಂಬಿ, ವಸಂತ ಡಾಕಪ್ಪನವರ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.