ಧಾರವಾಡ

ಪರಿಸರ ಸ್ನೇಹಿ ಗಣಪ ಪೂಜಿಸಿ: ಸಾಲಿಮಠ

Published On :

ಹುಬ್ಬಳ್ಳಿ: ಒಂದು ಕಾಲದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಡುತ್ತಿದ್ದ ಗಣೇಶ ಚತುರ್ಥಿಯಲ್ಲೀಗ ಆಡಂಬರವೇ ಪ್ರಮುಖ. ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ತಯಾರಿಸಿದ ಗಣೇಶ ವಿಗ್ರಹಗಳು, ಪಟಾಕಿಯಂತ ಸಿಡಿಮದ್ದಿನಿಂದಾಗಿ ಪರಿಸರ ಹಾನಿಯಾಗುತ್ತಿದೆ.
ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಪರಿಸರಸ್ನೇಹಿ ಗಣೇಶ ಚತುರ್ಥಿ ಆಚರಿಸಬೇಕೆಂದು ಕೋರಿ 'ಮಕ್ಕಳಲ್ಲಿ ಪೌರ ಪ್ರಜ್ಞೆ ಜಾಗ್ರತಾ ಸಮಿತಿ' ನಗರದಲ್ಲಿ ಈಚೆಗೆ ಶಾಲಾ ಮಕ್ಕಳ ಸಹಿತವಾಗಿ ಮೆರವಣಿಗೆ ನಡೆಸಿ ಸಹಿ ಸಂಗ್ರಹಿಸಿತು.
300ಕ್ಕೂ ಹೆಚ್ಚು ಮಕ್ಕಳು ಜಾಗೃತಿ ಮೆರವಣಿಗೆಯಲ್ಲಿ ಪಾಲ್ಗೊಂಡು, ತಾವು ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ತಯಾರಿಸಿದ ಗಣೇಶಮೂರ್ತಿಯನ್ನು ಪೂಜಿಸುವುದಿಲ್ಲ ಹಾಗೂ ಚೌತಿಯಂದು ಪಟಾಕಿ ಹಾರಿಸುವುದಿಲ್ಲ ಎಂದು ಪ್ರತಿಜ್ಞೆ ಗೈದರು. ವಿದ್ಯಾರ್ಥಿಗಳು ಬಿವಿಬಿ ಕಾಲೇಜು ಎದುರು ಮಾನವ ಸರಪಳಿ ರಚಿಸಿದರು.
ಸಮಿತಿಯ ಸಂಚಾಲಕಿ ಗೀತಾ ಸಾಲಿಮಠ ಮಾತನಾಡಿ, ನಗರ ಪ್ರದೇಶದಲ್ಲಿ ಆಚರಿಸಲಾಗುತ್ತಿರುವ ಗಣೇಶ ಹಬ್ಬ ಪರಿಸರಕ್ಕೆ ಹಾನಿಯುಂಟು ಮಾಡುತ್ತಿದೆ. ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ತಯಾರಿಸಿದ ಮೂರ್ತಿಗಳು ಮಣ್ಣಿನಲ್ಲಿ ಕರಗುವುದಿಲ್ಲ, ಇದೇ ವೇಳೆ ಬಣ್ಣದಲ್ಲಿನ ಹಾನಿಕಾರಕ ಪದಾರ್ಥ ನೀರಿನಲ್ಲಿ ಮಿಶ್ರಣವಾಗಿ ಹಾನಿಯಾಗುತ್ತದೆ ಎಂದರು.
ಅಲ್ತಾಫ್ ಕಿತ್ತೂರ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.