ಧಾರವಾಡ

ಖೊಟ್ಟಿ ಪಡಿತರ ಮತ್ತೊಮ್ಮೆ ಪರಿಶೀಲನೆ

Published On :

ಕಲಘಟಗಿ: ತಾಲೂಕಿನಲ್ಲಿ 7222 ಖೊಟ್ಟಿ ಪಡಿತರ ಚೀಟಿ ಇದ್ದು ಅವುಗಳನ್ನು ಮತ್ತೊಮ್ಮೆ ಪರಿಶೀಲಿಸಿ ರದ್ದುಪಡಿಸಲಾಗುವುದೆಂದು ಪಡಿತರ ಆಹಾರ ನಿರೀಕ್ಷಕ ವಿ.ಜಿ. ಶೆಟ್ಟೆಪ್ಪನವರ ತಿಳಿಸಿದರು. ಬುಧವಾರ ತಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಪಂ ಅಧ್ಯಕ್ಷ ಬಸವಣ್ಣಯ್ಯ ಹಿರೇಮಠ ಅವರು ಪಡಿತರದಾರರ ದೂರುಗಳ ಕುರಿತು ಗಮನ ಸೆಳೆದ ಪ್ರಶ್ನೆಗೆ ವಿವರಣೆ ನೀಡಿದರು. ನೂತನ ಪಡಿತರ ಚೀಟಿಗಳನ್ನು ವಿತರಿಸಲು ವಿಳಂಬವಾಗುತ್ತಿರುವ ತಾಂತ್ರಿಕ ಅಡತಡೆಗಳನ್ನು ಸರಿಪಡಿಸಲಾಗುವುದೆಂದು ಹೇಳಿದರು. ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿನ ಶಾಶ್ವತ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಲು ಮರು ಟೆಂಡರ್ ಕರೆಯಲಾಗಿದ್ದು ಪ್ರಸಕ್ತ ಸಾಲಿನಲ್ಲಿ ಮುಗಿಯಲಿದೆ ಎಂದು ಜಿಪಂ ಕಾರ್ಯನಿರ್ವಾಹಕ ಅಭಿಯಂತರ ಪ್ರಭು ಕನವಳ್ಳಿ ಅವರು ತಾಪಂ ಸಭೆಯಲ್ಲಿ ತಿಳಿಸಿದರು. ಸಮಾಜ ಕಲ್ಯಾಣ ಅಧಿಕಾರಿ ಎಸ್.ಎಂ. ಸೂರಣಗಿ, ತಾಲೂಕು ವೈದ್ಯಾಧಿಕಾರಿ ಡಾ. ಎಂ.ಆರ್. ನೂಲ್ವಿ ಅವರು ಮಾತನಾಡಿದರು. ವಲಯ ಅರಣ್ಯಾಧಿಕಾರಿ ಎಸ್.ಆರ್. ಚಿಕ್ಕಮಠ, ಆರ್.ಜಿ. ಕಡೆಮನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಲಾನಯನ ಇಲಾಖೆ ಅಧಿಕಾರಿಗಳು ಅಭಿವೃದ್ಧಿ ಕುರಿತು ಸಭೆ ವಿವರಿಸಿದರು. ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ರಜಪೂತ, ತಾಪಂ ಯೋಜನಾಧಿಕಾರಿ ವಿ.ಎಂ. ಬದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.