ಧಾರವಾಡ

ದೂರ ಸಂಪರ್ಕ ಉಪಗ್ರಹ ಆಧಾರಿತ ಕಾರ್ಯಕ್ರಮ

Published On :

ಕನ್ನಡಪ್ರಭ ವಾರ್ತೆ, ಗದಗ, ಜೂ. 12
2013-14ನೇ ಶೈಕ್ಷಣಿಕ ಸಾಲಿನಿಂದ ಪ್ರಥಮ ಪಿಯುಸಿಗೆ ಜಾರಿಗೊಳ್ಳಲಿರುವ ಪರಿಷ್ಕೃತ ಪಠ್ಯಕ್ರಮವನ್ನು ಆಧರಿಸಿ ಉಪನ್ಯಾಸಕರಿಗೆ ದೂರ ಸಂಪರ್ಕ ಉಪಗ್ರಹ ಆಧಾರಿತ ಕಾರ್ಯಕ್ರಮವನ್ನು ಜು. 12 ರಿಂದ 28ರ ವರೆಗೆ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ದಿನಾಂಕಗಳು ಕೆಳಗಿನಂತೆ ಪರಿಷ್ಕೃತಗೊಂಡಿರುತ್ತವೆ. ತರಬೇತಿ ಸ್ಥಳವು ಬಿ.ಆರ್.ಸಿ. ಗದಗ (ಕೋರ್ಟ್ ಹತ್ತಿರ) ಆಗಿದ್ದು,  ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯ ವರೆಗೆ ಜೂ. 24ರಂದು ಕನ್ನಡ, 25 ರಂದು ಇಂಗ್ಲೀಷ, 26 ರಂದು ಇತಿಹಾಸ, 27 ರಂದು ಅರ್ಥಶಾಸ್ತ್ರ, 28 ರಂದು ರಾಜ್ಯಶಾಸ್ತ್ರ, 29 ರಂದು ಸಮಾಜಶಾಸ್ತ್ರ, ಜುಲೈ 1 ರಂದು ಭೌತಶಾಸ್ತ್ರ, 2 ರಂದು ರಸಾಯನಶಾಸ್ತ್ರ, ಜುಲೈ 15 ರಂದು ಗಣಿತಶಾಸ್ತ್ರ, 16 ರಂದು ಜೀವಶಾಸ್ತ್ರ, 18 ರಂದು ಗಣಕ ವಿಜ್ಞಾನ, 19 ರಂದು ಲೆಕ್ಕಶಾಸ್ತ್ರ, 20 ರಂದು ಭೂಗೋಳಶಾಸ್ತ್ರ, 22 ರಂದು ಶಿಕ್ಷಣ, 23 ರಂದು ವ್ಯವಹಾರ ಅಧ್ಯಯನ, ಜುಲೈ 24 ರಂದು ಹಿಂದಿ ವಿಷಯ ಇರುತ್ತದೆ. ಪ್ರಾಚಾರ್ಯರು ಮತ್ತು ಉಪನ್ಯಾಸಕರು ಗಮನಿಸಲು ಪದವಿ ಪೂರ್ವ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.