ಧಾರವಾಡ

ವೀರಶೈವ ಧರ್ಮದಿಂದ ನವ ಸಮಾಜ ರಚನೆ

Published On :

ಧಾರವಾಡ: ಸಮೂಹ ನಾಯಕತ್ವ ವಹಿಸಿದ ಬಸವಣ್ಣನವರು ವೀರಶೈವ ಧರ್ಮವನ್ನು ಜಂಗಮತ್ವದಡಿಯಲ್ಲಿ ಸ್ಥಾಪಿಸಿದರು. ಅಂಥ ವೀರಶೈವ ಧರ್ಮದಿಂದ ನವ ಸಮಾಜದ ನಿರ್ಮಾಣ ಸಾಧ್ಯವೆಂದು ಚಿಂತಕ ರಂಜಾನ ದರ್ಗಾ ಅಭಿಪ್ರಾಯಿಸಿದರು.
ಇಲ್ಲಿನ ಮುರುಘಾಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಶುಕ್ರವಾರ ನಡೆದ ಮಹಾಂತಪ್ಪಗಳ ದತ್ತಿ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಸಮಾನತೆಯೊಂದೇ ಶರಣರ ಗುರಿಯಾಗಿತ್ತು. ಜಗತ್ತಿನ ಬಹುತೇಕ ಸಮಸ್ಯೆಗಳಿಗೆ ವಚನ ಸಾಹಿತ್ಯದಲ್ಲಿ ಪರಿಹಾರವಿದೆ. ಹಾಗಾಗಿ ಶರಣರು ಇಂದಿಗೂ ಪ್ರಸ್ತುತರಾಗಿದ್ದಾರೆ. ಜಾತಿ-ಮತ-ಪಂಥ-ಭಾಷೆ-ಪ್ರದೇಶಗಳನ್ನು ಮೀರಿ ನಿಂತ ಲಿಂಗಾಯತ ಧರ್ಮ ಏಕೈಕ ಮಾರ್ಗದರ್ಶಕ. ಇಷ್ಟಲಿಂಗ ಅರಿವಿನ ಕುರುಹಾಗಿದ್ದು, ಅದು ಎಲ್ಲ ವ್ಯತ್ಯಾಸಗಳನ್ನು ಕಿತ್ತೊಗೆಯುವ ಶಕ್ತಿ ಹೊಂದಿದೆ. ಆದರೆ, ಇಂದು ಲಿಂಗಾಯತ ಧರ್ಮ ಒಡೆದು ಅನೇಕ ಪಂಗಡಗಳಾಗಿ, ಅದರಲ್ಲಿ ಬಸವಣ್ಣ ಕಳೆದು ಹೋಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಮಹಾದೇವ ಹೊರಟ್ಟಿಯವರು ಮಾತನಾಡಿ, ಪ್ರೀತಿ-ಪ್ರೇಮ, ಪರಸ್ಪರ ವಿಶ್ವಾಸ, ಸಹಕಾರ ಹೀಗೆ ಬದುಕಿನ ಮೌಲ್ಯಗಳನ್ನು ಕಲಿಸಿದವರೇ ಶರಣರು ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ. ವೀರಣ್ಣ ರಾಜೂರ, ಕನ್ನಡ ಭಾಷೆ-ಸಾಹಿತ್ಯ-ಸಂಸ್ಕೃತಿಯ ಸಾಕ್ಷಿಪ್ರಜ್ಞೆಯೇ ವಚನ ಸಾಹಿತ್ಯ. ವಚನ ಸಾಹಿತ್ಯ ಸಂಸ್ಕೃತಿಯ ಕುರಿತಾದ ಅಧ್ಯಯನ ನಡೆಯಬೇಕೆಂದರು.
ಪ್ರಾಸ್ತಾವಿಕ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿದರು. ಅರ್ಜುನ ವಠಾರ ಹಾಗೂ ಸಂಗಡಿಗರು ವಚನ ಗಾಯನ ನಡೆಸಿಕೊಟ್ಟರು. ಬಸವ ಕೇಂದ್ರದ ಅಧ್ಯಕ್ಷ ಪ್ರೊ. ಆನಂದಕುಮಾರ ಜಕ್ಕಣ್ಣವರ ಮುಂತಾದವರು ಉಪಸ್ಥಿತರಿದ್ದರು. ಡಾ.ವೈ.ಎಂ. ಭಜಂತ್ರಿ ನಿರೂಪಿಸಿದರು, ಅನಿಲ ದೇಸಾಯಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.