ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಇಂದು
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಭಾನುವಾರ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ನಡೆಯಲಿದ್ದು, ತಯಾರಿ ಪೂರ್ಣಗೊಂಡಿದೆ.
ಸಮ್ಮೇಳನಾಧ್ಯಕ್ಷರ ವೈಭವದ ಮೆರವಣಿಗೆ ಈ ಸಮ್ಮೇಳನದಲ್ಲಿಲ್ಲ. ಮಂತ್ರಿಮಹೋದಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ರಾಜಕೀಯ ಸಮಾರಂಭವಾಗಿಸುವ ಉದ್ದೇಶ ಇಲ್ಲಿಲ್ಲ. ಬಂದ ಅತಿಥಿಗಳಿಗೆ ಹಾರತುರಾಯಿ ಹಾಕಿ ಸಂಭ್ರಮಿಸುವ ದೃಶ್ಯವೂ ಇಲ್ಲ.
ತಾಲೂಕು ಸಮ್ಮೇಳನದಲ್ಲಿ ಅರ್ಥಪೂರ್ಣ ಗೋಷ್ಠಿ ಆಯೋಜಿಸಿದೆ. ಸಮಗ್ರ ಕನ್ನಡ ಸಾಹಿತ್ಯ, ಪರಂಪರೆ ಅರಿಯುವ ಬದಲಾಗಿ ತಾಲೂಕಿನ ಸಾಹಿತ್ಯ ಸಂಭ್ರಮ ಅರಿಯುವ ಪ್ರಯತ್ನ ಮಾಡಲಾಗಿದೆ. ಹುಬ್ಬಳ್ಳಿ ಸಾಹಿತ್ಯ ವಲಯ, ಆ ಕಾಲದ ಹುಬ್ಬಳ್ಳಿ, ಹುಬ್ಬಳ್ಳಿಯ ರಾಜಕೀಯ ದಿಕ್ಕು ದೆಸೆ, ವಾಣಿಜ್ಯ ಕೇಂದ್ರವಾಗಿ ಹುಬ್ಬಳ್ಳಿ, ಹುಬ್ಬಳ್ಳಿಯ ನಾಟಕ ಕ್ಷೇತ್ರ, ಹುಬ್ಬಳ್ಳಿಯಲ್ಲಿ ಕ್ರೀಡೆ: ಹಿಂದು, ಇಂದು, ಮುಂದು, ಸುತ್ತ ಈ ತರನಾದ ವಿಷಯವನ್ನು ಗೋಷ್ಠಿಯಲ್ಲಿ ಆಯ್ದುಕೊಳ್ಳಲಾಗಿದೆ. ಗೋಷ್ಠಿಗೆ ಯಾರೂ ಅಧ್ಯಕ್ಷರಿರುವುದಿಲ್ಲ. ನೆರೆದ ಸಾಹಿತ್ಯಾಸಕ್ತರಿಗೆ ಪ್ರಸ್ತುತ ಪಡಿಸಿದ ವಿಷಯದ ಬಗ್ಗೆ ಮಾಹಿತಿ ಬೇಕಿದ್ದಲ್ಲಿ 'ಕೆದಕು-ಕೇಳು' ಎಂಬ ಪ್ರಶ್ನೋತ್ತರ ಕಾರ್ಯಕ್ರಮ ಏರ್ಪಡಿಸಿದೆ. ಕವಿ ಕಾವ್ಯ ಲಹರಿ ಗೋಷ್ಠಿಯಲ್ಲಿ ಕವಿಗಳು ಕವನ ವಾಚಿಸುವರು. ನನ್ನ ಬರವಣಿಗೆ ಗೋಷ್ಠಿಯಲ್ಲಿ ಕತೆ, ಕಾದಂಬರಿ, ಪ್ರಬಂಧ, ಕವಿತೆಗಳ ಬಗ್ಗೆ ಮಾತನಾಡುವರು. ಸಾಧಕರಿಗೆ ಸನ್ಮಾನ, ಪುಸ್ತಕ ಬಿಡುಗಡೆ, ಪ್ರಹಸನ ನೃತ್ಯ, ಹಾಸ್ಯ, ಕೋಲಾಟ, ರಸಮಂಜರಿ ಕಾರ್ಯಕ್ರಮಗಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

