ಧಾರವಾಡ

ಬಸ್ಪಾಸ್ ವಿಳಂಬ: ಎಐಡಿಎಸ್ಓ ಪ್ರತಿಭಟನೆ

Published On :

ಧಾರವಾಡ:  ಮೇ 30ರಂದು ಶಾಲೆ ಪ್ರಾರಂಭವಾದರೂ ಪಾಸ್ ವಿತರಣೆ ಮಾತ್ರ ವಿಳಂಬವಾಗಿದ್ದು, ಶೀಘ್ರದಲ್ಲಿಯೇ ಎಲ್ಲ ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್ ಪಾಸ್ ನೀಡಬೇಕು ಎಂದು ಒತ್ತಾಯಿಸಿ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ಕಾರ್ಯಕರ್ತರು ಧಾರವಾಡದ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು. ಪಾಸ್ ವಿತರಣೆ ವಿಳಂಬದಿಂದ ಒಂದು ವರ್ಷದ ಪಾಸ್ಗೆ ಕೊಡಬೇಕಾದ ಹಣವನ್ನು ಪಾಸ್ ಸಿಗುವವರೆಗೂ ವಿದ್ಯಾರ್ಥಿಗಳು 15 ದಿನಗಳ ಬಸ್ಚಾರ್ಜ್ಗಾಗಿ ತೆರಬೇಕಾಗಿದೆ. ಹಾಜರಾತಿ ಶೇ. 100ರಷ್ಟು ಇರಲೇಬೇಕು ಎಂದು ಅಧಿಕಾರಿಗಳು ಮಿಂಚಿನ ಸಂಚಾರ ಮಾಡುತ್ತಿದ್ದಾರೆ. ಆದರೆ ಅಲ್ಲಿ ಹಾಜರಾತಿ ನಿರೀಕ್ಷಿಸಿದ ಮಟ್ಟದಲ್ಲಿ ಇಲ್ಲ. ದೂರದಿಂದ ಮತ್ತು ಹಳ್ಳಿಗಳಿಂದ ಬರುವ ಮಕ್ಕಳಿಗೆ ಪಾಸ್ ಸಿಗದಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ ಆರೋಪಿಸಿದರು. ಶಿಕ್ಷಕರು ವಿದ್ಯಾರ್ಥಿಗಳ ಪಾಸ್ಗೆ ಬೇಕಾದ ಎಲ್ಲ ಕಚೇರಿ-ಕೆಲಸವನ್ನು ಮಾಡಿಕೊಂಡು ಹೋದರೂ ಪಾಸ್ ವಿತರಿಸಲು ಸಾರಿಗೆ ಇಲಾಖೆ ದಿನಗಟ್ಟಲೇ ಅಲೆದಾಡಿಸುತ್ತಿದೆ. ಅಲ್ಲದೇ, ಪಾಸ್ ನೀಡುವ ವಿಧಾನವೂ ಸರಳೀಕರಣವಾಗಬೇಕಾದ ಅಗತ್ಯವಿದೆ ಎಂದು ಹೇಳಿದರು. ಬಸ್ ನಿಲ್ದಾಣದಲ್ಲಿ ಮನವಿ ಸ್ವೀಕರಿಸಿದ ಸಾರಿಗೆ ಅಧಿಕಾರಿ (ಎಟಿಎಸ್) ಆರ್.ಎಲ್. ದೊಡಮನಿ, ಮುಂದಿನ ಒಂದು ವಾರದಲ್ಲಿ ಧಾರವಾಡದ ಎಲ್ಲ ಹೈಸ್ಕೂಲ್ಗಳ ಪಾಸ್ ವಿದ್ಯಾರ್ಥಿಗಳಿಗೆ ಪಾಸ್ ವಿತರಿಸಲಾಗುವುದು. ಅಗತ್ಯ ಸಿಬ್ಬಂದಿಯನ್ನು ಪಾಸ್ ಕೌಂಟರ್ನಲ್ಲಿ ನಿಯೋಜಿಸಲಾಗುವುದು. ಬರುವ ವರ್ಷದಿಂದ ಜೂನ್ 1ರ ಒಳಗೇ ಪಾಸ್ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.