ಅಧಿಕಾರಕ್ಕಾಗಿ ಶೆಟ್ಟರ್ ಹಪಾಹಪಿ: ಟೀಕೆ
ಧಾರವಾಡ: ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸ್ವಾರ್ಥ ಮತ್ತು ಅಧಿಕಾರಕ್ಕಾಗಿ ಹಪಹಪಿಸುವ ರಾಜಕಾರಣಿ ಎಂದು ಕೆಜೆಪಿ ಮುಖಂಡ ರಾಜೇಂದ್ರ ಸಾವಳಗಿ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರು ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಬೆಂಬಲದಿಂದ ಮುಖ್ಯಮಂತ್ರಿ ಸ್ಥಾನಕ್ಕೇರಿದ ಶೆಟ್ಟರ್, ಇದೀಗ ಯಡಿಯೂರಪ್ಪನವರನ್ನು ಟೀಕಿಸುತ್ತಿದ್ದಾರೆ. ಇದರಿಂದ ಶೆಟ್ಟರ್ ಅವರ ವ್ಯಕ್ತಿತ್ವ ಎಂತಹುದು ಎಂದು ತಿಳಿಸುತ್ತದೆ. ಸದ್ಯ ಬಿಜೆಪಿ ಪಕ್ಷದ ಶಾಸಕರು ಬೇರೆ ಬೇರೆ ಪಕ್ಷಗಳ ಒಡನಾಟ ಹೆಚ್ಚಿಸುತ್ತಿದ್ದಾರೆ. ಅಲ್ಲದೆ, ಬಿಜೆಪಿ ಹಾಳಾದರೂ ಚಿಂತೆಯಿಲ್ಲ ಇನ್ನಷ್ಷು ದಿನ ಅಧಿಕಾರದ ಕುರ್ಚಿಯಲ್ಲಿ ಕುಳಿತುಕೊಂಡರಾಯಿತು ಎಂಬ ಭಾವನೆ ಪಕ್ಷದ ಮುಂಖಡರದ್ದಾಗಿದೆ ಎಂದು ರಾಜೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತದಾನ ದಿನದಂದು ರಜೆ ಘೋಷಣೆ
ಧಾರವಾಡ: ಮಾ. 7ರಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ಕೇಂದ್ರ, ರಾಜ್ಯ ಕಚೇರಿಗಳಿಗೆ, ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ ಶಾಲಾ ಕಾಲೇಜುಗಳಿಗೆ ರಾಜ್ಯ ಸರ್ಕಾರವು ಸಾರ್ವತ್ರಿಕ ರಜೆ ಘೋಷಿಸಿದೆ. ಇದು ತುರ್ತು ಸೇವೆಗಳಿಗೆ ಹಾಗೂ ಚುನಾವಣಾ ಕಾರ್ಯಗಳಿಗೆ ನಿಯೋಜಿಸಲ್ಪಟ್ಟವರಿಗೆ ಅನ್ವಯಿಸುವುದಿಲ್ಲ. ಮತದಾನದ ಪೂರ್ವ ತಯಾರಿಗಾಗಿ ಅಂತಹ ಕಚೇರಿ ಮತ್ತು ಶಾಲೆಗಳಿಗೆ ಬುಧವಾರ ಮಾ. 6ರಂದು ಮತ್ತು ಮತ ಎಣಿಕೆ ದಿನಾಂಕದಂದು ಆ ಕೇಂದ್ರಗಳಲ್ಲಿ ಮಾತ್ರ ಅವಶ್ಯಕತೆ ಇದ್ದಲ್ಲಿ ರಜೆ ಘೋಷಿಸುವ ಕುರಿತು ಸಂಬಂಧಿತ ಚುನಾವಣಾ ಅಧಿಕಾರಿಗಳು ಕ್ರಮ ಕೈಕೊಳ್ಳಲು ಸರ್ಕಾದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

