ಧಾರವಾಡ

ಇಂದು ಹುಬ್ಬಳ್ಳಿಗೆ ಸಿಎಂ

Published On :

ಹುಬ್ಬಳ್ಳಿ: ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾ. 17ರಂದು ಬೆಳಗ್ಗೆ 11ಕ್ಕೆ ವಿಶೇಷ ವಿಮಾನದ ಮೂಲಕ ನಗರಕ್ಕೆ ಆಗಮಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಮಹಾನಗರ ಪಾಲಿಕೆ ವತಿಯಿಂದ ನೆಹರು ಮೈದಾನದಲ್ಲಿ ನಿರ್ಮಿಸಲಾಗಿರುವ ಶೆಟಲ್ ಬ್ಯಾಡ್ಮಿಂಟನ್ ಹಾಲ್ (ಒಳಾಂಗಣ) ಉದ್ಘಾಟನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 12ಕ್ಕೆ ಪಾಲಿಕೆಯ ನವೀಕೃತ ಈಜುಗೋಳಕ್ಕೆ ಚಾಲನೆ ನೀಡುವರು. 12.30ಕ್ಕೆ ತೋಳನಕೆರೆ ಉದ್ಯಾನ ಉದ್ಘಾಟನೆ ಹಾಗೂ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ಶೆಟ್ಟರ್ ಪಾಲ್ಗೊಳ್ಳಲಿದ್ದಾರೆ. ಸಂಜೆ 4.30ಕ್ಕೆ ರಾಜನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅನಂತರ ಅಲ್ಲಿಂದ ರಾಯಾಪುರ ಹಾಗೂ ಧಾರವಾಡಕ್ಕೆ ತೆರಳಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ರಾತ್ರಿ ಹುಬ್ಬಳ್ಳಿ ಕೇಶ್ವಾಪುರದಲ್ಲಿರುವ ತಮ್ಮ ನಿವಾಸದಲ್ಲಿ ವಾಸ್ತವ್ಯ ಮಾಡಲಿರುವ ಜಗದೀಶ ಶೆಟ್ಟರ್, ಭಾನುವಾರ ಬೆಳಗ್ಗೆ ಮಂಗಳೂರಿಗೆ ಪ್ರಯಾಣಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಕಸಾಪ ದತ್ತಿ ಉಪನ್ಯಾಸ
ಧಾರವಾಡ: ಕುಂದಗೋಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಯುವಜನ ಹಾಗೂ ಸಂಸ್ಕೃತಿ ಅಭಿವೃದ್ಧಿ ಕೇಂದ್ರ ಮತ್ತು ಮಹಿಳಾ ಸ್ವಸಹಾಯ ಸಂಘ ಇವುಗಳ ಆಶ್ರಯದಲ್ಲಿ ಯಮನಮ್ಮ ಅನಂತಪ್ಪ ಹಡಗಲಿ (ಹರ್ಲಾಪುರ) ಹಾಗೂ ಬಸನಗೌಡ್ರು ನಿಂ. ಪಾಟೀಲ (ಮಂಡಿಗನಾಳ) ದತ್ತಿ ಕಾರ್ಯಕ್ರಮ ಮಾ. 17ರಂದು ಸಂಜೆ 4.30ಕ್ಕೆ ಕುಂದಗೋಳ ತಾಲೂಕಿನ ಹರ್ಲಾಪುರ ಗ್ರಾಪಂ ನೂತನ ಸಭಾಭವನದಲ್ಲಿ ಆಯೋಜಿಸಲಾಗಿದೆ. ಕಸಾಪ ಜಿಲ್ಲಾಧ್ಯಕ್ಷ ಡಾ೤ ಲಿಂಗರಾಜ ಅಂಗಡಿ ಉದ್ಘಾಟಿಸಲಿದ್ದು, ಕನ್ನಡ ಸಾಹಿತ್ಯಕ್ಕೆ ಅತ್ತಿಮಬ್ಬೆಯ ಕೊಡುಗೆ ಕುರಿತು ಡಾ೤ ಬಿ.ಜಿ. ಬಿರಾದಾರ, ಶರಣ ಸಾಹಿತ್ಯ ಕುರಿತು ಬಿ.ಎಸ್. ಸೊಪ್ಪಿನ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಡಾ೤ ಜಿನದತ್ತ ಹಡಗಲಿ, ಎ.ಬಿ. ಉಪ್ಪಿನ, ಪ್ರೊ೤ ಕೆ.ಎಸ್. ಕೌಜಲಗಿ ಆಗಮಿಸಲಿದ್ದಾರೆ. ಇತ್ತೀಚೆಗೆ ನಿವೃತ್ತರಾದ ಧಾರವಾಡ ಜಿಲ್ಲಾ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪಿ.ಎಸ್. ಹಿರೇಮಠ ಹಾಗೂ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಶಶಿಕಲಾ ಡಫಳಿ ಇವರನ್ನು ಸನ್ಮಾನಿಸಲಾಗುವುದು. ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಚಂದ್ರಶೇಖರ ಪಾಟೀಲ ವಹಿಸಲಿದ್ದಾರೆ.
ಇಂದು ನಾಟಕ
ಧಾರವಾಡ: ಟೂರಿಂಗ್ ಟಾಕೀಸ್ ನಾಟಕ ತಂಡದಿಂದ ಹಾಸ್ಯಭರಿತ ನಾಟಕ ಹುಚ್ಚರ ಸಂತೆ ಎಂಬ ನಾಟಕ ಧಾರವಾಡದ ರಂಗಾಯಣ ಬಯಲು ರಂಗಮಂದಿರದಲ್ಲಿ ಮಾ. 17ರ ಸಂಜೆ 6ಕ್ಕೆ ಪ್ರದರ್ಶನಗೊಳ್ಳಲಿದೆ. ಉಮೇಶ ತೇಲಿ ಈ ನಾಟಕವನ್ನು ರಚಿಸಿ, ನಿರ್ದೇಶಿಸಿದ್ದಾರೆ. ಗ್ರೀನ್ ಆರ್ಮಿ ನೇತೃತ್ವದಲ್ಲಿ ಧಾರವಾಡದ ರಂಗಾಯಣ, ತುಳಸಿ ಆಗ್ರೊ ಸರ್ವಿಸಸ್, ನಿರತ ಸೇವಾ ಸಂಸ್ಥೆ, ಸಾಯಿ ಆಟೋ ಕನ್ಸಲ್ಟನ್ಸಿ, ವೈಭವ ರೆಸಿಡೆನ್ಸಿ, ಪುರ ಟ್ರಸ್ಟ್ ಹಾಗೂ ರಡ್ಡಿ ಇಲೆಕ್ಟ್ರಿಕಲ್ಸ್ ಇವರ ಸಹಯೋಗದೊಂದಿಗೆ ಈ ನಾಟಕ ಪ್ರದರ್ಶನಗೊಳ್ಳಲಿದೆ. ಪ್ರವೇಶ ಉಚಿತವಾಗಿದ್ದು, ರಂಗಾಸಕ್ತರು ಪ್ರೋತ್ಸಾಹಿಸಬೇಕೆಂದು ಗ್ರೀನ್ ಆರ್ಮಿ ಅಧ್ಯಕ್ಷ ಪ್ರಕಾಶ ಗೌಡರ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.