ಧಾರವಾಡ

ಬೆಂಬಲ ಬೆಲೆ ನಿಗದಿಪಡಿಸಲು ಒತ್ತಾಯ

Published On :

ಕಲಘಟಗಿ:  ಪ್ರತಿಟನ್ ಕಬ್ಬಿಗೆ ರು. 3 ಸಾವಿರ ನಿಗದಿ ಪಡಿಸಬೇಕೆಂದು ಧಾರವಾಡ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಎಸ್.ಎನ್. ಬಣವಣ್ಣವರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2012/13 ಸಾಲಿನ ಕಬ್ಬಿನ ಬೆಲೆಯನ್ನು ಪ್ರತಿಟನ್‌ಗೆ ರು. 3 ಸಾವಿರ ಎಂದಿದ್ದ ಸರ್ಕಾರ ಹಾಗೂ ಕಾರ್ಖಾನೆ ಮಾಲೀಕರ ಸಮ್ಮುಖದ ಸಭೆಯಲ್ಲಿ ನಿರ್ಣಯವನ್ನು ಮರೆತು ರು. 2500 ನೀಡಿದೆ. ಕೂಡಲೇ ಬಾಕಿ ಹಣ ಪಾವತಿಸಬೇಕೆಂದು ಬಣವಣ್ಣವರ ಆಗ್ರಹಿಸಿದರು.
ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಹೆಸ್ಕಾಂ ಸಮರ್ಪಕವಾಗಿ ವಿದ್ಯುತ್ ನೀಡುತ್ತಿಲ್ಲ. ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ವಿವರಿಸಿದ ರೈತ ಉಳವಪ್ಪ ಬಳಿಗೇರ ಹೆಸ್ಕಾಂ ಅವ್ಯವಸ್ಥೆ ವಿರುದ್ಧ ಪ್ರತಿಭಟಿಸಲು ಕೂಡಲೇ ದಿನಾಂಕ ನಿಗದಿಪಡಿಸುವುದಾಗಿ ಹೇಳಿದರು. ಅಲ್ಲದೆ, ಹೆಸ್ಕಾಂನವರು ಉಪಯೋಗಿಸುವ ವಿದ್ಯುತ್ ಸಲಕರಣೆಗಲು ಕಳಪೆ ಮಟ್ಟದ್ದಾಗಿವೆ ಎಂದು ಆರೋಪಿಸಿದರು.
ಅಭಿನಂದನೆ: ರಾಜ್ಯ ಕಬ್ಬು ಬೆಳೆಗಾರರ ಬೇಡಿಕೆಯಂತೆ ಸರ್ಕಾರ ಶಾಸನ ಬದ್ಧ ಕಾನೂನು ರೂಪಿಸಿ (ಎಸ್‌ಎಪಿ) ಬಹುದಿನಗಳ ಬೇಡಿಕೆಯನ್ನು ಇಡೇರಿಸಿದ್ದಕ್ಕೆ ತಾಲೂಕು ಕಬ್ಬು ಬೆಳೆಗಾರ ಸಂಘ ರಾಜ್ಯ ಸರ್ಕಾರವನ್ನು ಅಭಿನಂದಿಸಿದೆ. ಬೆಳಗಾವಿ ಸುವರ್ಣ ಸೌಧದಲ್ಲಿ ಈ ಬೇಡಿಕೆಯನ್ನು ಕಬ್ಬು ಬೆಳೆಗಾರರು ಸರ್ಕಾರಕ್ಕೆ ನೀಡಿದ್ದರು ಎಂದು ಎಸ್.ಎನ್. ಬಣವಣ್ಣವರ ಹೇಳಿದರು. ರೈತರಾದ ಮೋಹನ ಪಂಡಿತ, ಉಮೆಶ ಕೊಪ್ಪದ, ಸಹದೇವ ಉಗ್ನಿಕೇರಿ, ರಾಚನಗೌಡ ಪಾಟೀಲ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.