ಎಸ್ಸಿ,ಎಸ್ಟಿ ಸಮುದಾಯ ಕೈಗೆ ಬೆಂಬಲ
ಧಾರವಾಡ: ಎಸ್ಸಿ, ಎಸ್ಟಿ ಪಂಗಡದವರಿಗೆ ಬರಬೇಕಿದ್ದ ಸಂವಿಧಾನ ಬದ್ಧ ಅನೇಕ ಹಕ್ಕುಗಳನ್ನು ತಡೆ ಹಿಡಿದ ಬಿಜೆಪಿ ಸರ್ಕಾರಕ್ಕೆ ತಕ್ಕಪಾಠ ಕಲಿಸಲು ಈ ಬಾರಿ ಎಸ್ಟಿ, ಎಸ್ಟಿ ಹಾಗೂ ಅಲ್ಪಸಂಖ್ಯಾತರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ನೀಡಲಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಪಂಗಡದ ರಾಜ್ಯಾಧ್ಯಕ್ಷ ಟಿ. ಈಶ್ವರ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಶ್ರೀರಾಮುಲು ಹೆಸರಿನಲ್ಲಿ ಮತ ಪಡೆದ ಬಿಜೆಪಿ ನಮ್ಮ ಜನಾಂಗಗಳಿಗೆ ಏನೂ ಮಾಡಲಿಲ್ಲ. ಬಳ್ಳಾರಿಯಲ್ಲಿ ಶ್ರೀರಾಮುಲು ಸಹ ಸೋಲುವ ಸ್ಥಿತಿ ಈಗ ಉಂಟಾಗಿದೆ ಎಂದ ಅವರು, ವಾಲ್ಮೀಕಿ ಜಯಂತಿಗೆ ರಜೆ ಘೋಷಣೆ ಮಾಡಿದ್ದೇವೆಂದು ಜಂಬ ಕೊಚ್ಚಿಕೊಳ್ಳುತ್ತಾರೆ. ವಾಲ್ಮೀಕಿ ಅವರು ಒಂದೇ ಸಮುದಾಯಕ್ಕೆ ಸೀಮಿತವಾಗಿಲ್ಲ. ರಾಜ್ಯ, ರಾಷ್ಟ್ರಕ್ಕೆ ಸಿಮೀತ. ರಜೆ ಕೊಟ್ಟಿದ್ದರಲ್ಲೇನು ಸಾಧನೆಯಿಲ್ಲ. ಇನ್ನು, ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ಬಂದಿದ್ದ ಪ್ರತಿಷ್ಟಿತ ಶಾಲಾ ಯೋಜನೆಯನ್ನು ಈ ಬಿಜೆಪಿ ಸರ್ಕಾರ ತಡೆ ಹಿಡಿಯಿತು. ಇದರಿಂದ ಸುಮಾರು 6 ಲಕ್ಷ ಅಲ್ಪಸಂಖ್ಯಾತರು ಹಾಗೂ ಎಸ್ಸಿ, ಎಸ್ಟಿ ಮಕ್ಕಳು ಶಿಕ್ಷಣದಿಂದ ವಂಚಿತರಾದರು. ಇಂತಹ ಬಿಜೆಪಿಗೆ ಬೆಂಬಲ ಬೇಡವೆಂದು ನಮ್ಮ ಸಮುದಾಯಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಶಾಸಕ ಚಂದ್ರಕಾಂತ ಬೆಲ್ಲದ ಅವರು, ಷೋ ರೂಂ ತೆರೆಯುವುದರಲ್ಲಿಯೇ ನಿರತರಾಗಿ ಎಸ್ಸಿ, ಎಸ್ಟಿ ಜನಾಂಗದ ಜನರನ್ನು ಹತ್ತಿರವೇ ಸೇರಿಸಿಕೊಳ್ಳಲಿಲ್ಲ. ಈಗ ಹಣ ಹಾಗೂ ಅಧಿಕಾರದ ಮದದಿಂದ ಮಗ ಅರವಿಂದರನ್ನು ನಿಲ್ಲಿಸಿದ್ದಾರೆ. ಬೆಲ್ಲದ ಅವರಿಗೆ ಇರುವೆ ಮಾತ್ರ ಮೆತ್ತಿಕೊಂಡಿವೆಯೇ ಹೊರತು ಅವು ಮತಗಳಾಗಿ ಪರಿವರ್ತನೆಯಾಗುವುದಿಲ್ಲ. ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಎಸ್.ಆರ್. ಮೋರೆ ಅವರು 15 ಸಾವಿರ ಮತಗಳ ಅಂತರದಿಂದ ಗೆದ್ದು ಬರುವುದು ಗ್ಯಾರಂಟಿ ಎಂದರು.
ಅಂತೆಯೇ, ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ವಿನಯ ಕುಲಕರ್ಣಿ, ಕಲಘಟಗಿಯಲ್ಲಿ ಸಂತೋಷ ಲಾಡ್, ಹುಬ್ಬಳ್ಳಿಯಲ್ಲಿ ಅಬ್ಬಯ್ಯ ಪ್ರಸಾದ, ಕುಂದಗೋಳದಲ್ಲಿ ಸಿ.ಎಸ್. ಶಿವಳ್ಳಿ ಗೆಲವು ನಿಶ್ಚಿತ. ವಿಶೇಷ ಎಂದರೆ ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಒಂದೇ ಮತದಿಂದಾದರೂ ಡಾ. ನಾಲವಾಡ ಸೋಲಿಸುತ್ತಾರೆಂಬ ಭರವಸೆ ಇದೆ. ಒಟ್ಟಿನಲ್ಲಿ ಮೇ 8ರಂದು ಆಶ್ಚರ್ಯಕರ ಫಲಿತಾಂಶ ಹೊರಬೀಳುತ್ತದೆ ಎಂದರು ಟಿ. ಈಶ್ವರ.
ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಬಿಜೆಪಿ ಮಂದಿ ತೀರಾ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ಸಿನ ಪ್ರತಿಯೊಬ್ಬ ಮುಖಂಡನಿಗೂ ಮುಖ್ಯಮಂತ್ರಿ ಆಗುವ ಅರ್ಹತೆ ಇದೆ. ಆದರೆ, ಬಿಜೆಪಿಯಲ್ಲಿ ಜಗದೀಶ ಶೆಟ್ಟರ್, ಕೆಜೆಪಿಯಲ್ಲಿ ಯಡಿಯೂರಪ್ಪ, ಬಿಎಸ್ಸಾರ್ನಲ್ಲಿ ಶ್ರೀರಾಮುಲುರನ್ನು ಬಿಟ್ಟರೆ ಮತ್ತೊಬ್ಬ ಮುಖಂಡನಿಲ್ಲ ಎಂದರು.
ಇತ್ತೀಚೆಗೆ ಧಾರವಾಡದಲ್ಲಿ ನಡೆದ ಎಸ್ಸಿ, ಎಸ್ಟಿ ಸಮಾವೇಶದಲ್ಲಿ ಶಾಸಕ ವೀರಭದ್ರಪ್ಪ ಹಾಲಹರವಿ ಕಾಂಗ್ರೆಸ್ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರನ್ನು ಗುಲಾಮರಂತೆ ಕಂಡಿದೆ ಎಂದು ಹೇಳಿಕೆ ನೀಡಿದ್ದರು. ಸಮಾಜ, ಸಮುದಾಯಕ್ಕೆ ಹಾಲಹರವಿ ಮೋಸ ಮಾಡಿದ್ದಾರೆ. ತಮ್ಮ ಶಾಸಕರ, ಮುಖ್ಯಮಂತ್ರಿಗಳ ಲೆಟರ್ ಹೆಡ್ನ್ನು ಸಾವಿರ ಗೆ ಮಾರಿಕೊಂಡವರು ಹಾಲಹರವಿ. ಹಿಂದುಳಿದ ಜನಾಂಗದ ಶಾಸಕರಾಗಿ ತಮ್ಮ ಜನಾಂಗದ ಮೇಲೆ ಅವರಿಗೆ ಕಾಳಜಿ ಇಲ್ಲ. ಈ ಚುನಾವಣೆಯಲ್ಲಿ ಅವರು ಠೇವಣಿ ಕಳೆದುಕೊಳ್ಳಲಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

