ಧಾರವಾಡ

ಸುದ್ದಿ ಸಂಕ್ಷೇಪ

Published On :

ಇಂದಿನಿಂದ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ
ಹುಬ್ಬಳ್ಳಿ
: ಸಮೀಪದ ಅಮರಗೋಳದಲ್ಲಿ ನವನಿರ್ಮಿತ ಜಿನಮಂದಿರದಲ್ಲಿ ಮೇ 15ರಿಂದ 19ರ ವರೆಗೆ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ. ಭಗವಾನ್ ಶ್ರೀ ಪಾರ್ಶ್ವನಾಥ ಜಿನಬಿಂಬ, ನೂತನ ಮಾನಸ್ಥಂಭದಲ್ಲಿ ಚತುರ್ಮುಖ ಜಿನಬಿಂಬ ಹಾಗೂ ಶಿಖರದಲ್ಲಿ ಭಗವಾನ್ ಮಹಾವೀರ ಜಿನಬಿಂಬ ಪ್ರತಿಷ್ಠಾಪಿಸಲಾಗುವುದು. ಶ್ರೀ ಪುಣ್ಯಸಾಗರ ಮಹಾರಾಜರು ಸಾನ್ನಿಧ್ಯ ವಹಿಸಲಿದ್ದು, ಬ್ರಹ್ಮಚಾರಿ ಸೋಮದೇವಜಿ ಉಪಸ್ಥಿತರಿರುವರು. ಮೇ 15ರಂದು ಗರ್ಭಕಲ್ಯಾಣ, ಮೇ 16ರಂದು ಜನ್ಮಕಲ್ಯಾಣ, 17ರಂದು ದೀಕ್ಷಾಕಲ್ಯಾಣ, 18ರಂದು ಕೇವಲ ಜ್ಞಾನ ಕಲ್ಯಾಣ, 19ಕ್ಕೆ ಮೋಕ್ಷಕಲ್ಯಾಣಗಳು ನಡೆಯಲಿವೆ.
ಲಕ್ಷ್ಮಿದೇವಿ ಪಾಟೀಲ
ಹುಬ್ಬಳ್ಳಿ
: ವಿವೇಕಾನಂದ ಕಾಲನಿ ನಿವಾಸಿ ಯಾದ ಲಕ್ಷ್ಮಿದೇವಿನಾರಾಯಣ ಪಾಟೀಲ (60)ಮಂಗಳವಾರ ನಿಧನರಾದರು. ಮೃತರು ಪತಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ.
ಐರೀನ್ ಝಳ್ಕಿ ನಿಧನ
ಧಾರವಾಡ
: ಇಲ್ಲಿನ ಸೈದಾಪುರ ನಿವಾಯಾಗಿದ್ದ ಐರೀನ ಉರ್ಫ್ ಅವೇಲಿನ್‌ಬಾಯಿ ಕಾಮಿಲ್ ಝಳ್ಕಿ(82) ಮಂಗಳವಾರ ನಿಧನರಾದರು. ಮೃತರಿಗೆ ಆರು ಮಕ್ಕಳು ಹಾಗೂ ಅಪಾರ ಬಂಧು-ಬಳಗ ಇದ್ದಾರೆ. ಅಂತ್ಯಕ್ರಿಯೆ ಮೇ 15ರ ಬೆಳಗ್ಗೆ 9ಕ್ಕೆ ಹೋಲಿಕ್ರಾಸ್ ಚರ್ಚನಲ್ಲಿ ಪೂಜೆ ಸಲ್ಲಿಸಿ ಕೆಥೋಲಿಕ್ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಝಳ್ಕಿ ಕುಟುಂಬ ಮೂಲಗಳು ತಿಳಿಸಿವೆ.
ಛತ್ರಪತಿ ಶಿವಾಜಿ ಪುತ್ಥಳಿಗೆ ಗಣ್ಯರ ಮಾಲಾರ್ಪಣೆ
ಧಾರವಾಡ:
ಛತ್ರಪತಿ ಶಿವಾಜಿ ಜಯಂತಿ ನಿಮಿತ್ತ ಇಲ್ಲಿನ ರಾಜೀವ್‌ಗಾಂಧಿ ಬ್ರಿಗೇಡ್ ದಿಂದ ಜಿಲ್ಲಾಧ್ಯಕ್ಷ ಮಂಜುನಾಥ ಹೂಗಾರ ನೇತೃತ್ವದಲ್ಲಿ ಮರಾಠಾ ಕಾಲನಿ ವೃತ್ತದಲ್ಲಿರುವ ಛತ್ರಪತಿ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಮುಖಂಡರಾದ ಈಶ್ವರ ಹಿರೇಮಠ, ಶರಣು, ಚೇತನ ಹೂಗಾರ, ಸಂದೇಶ ಅಬೋಲೆ, ಸಮೀರಖಾನ್ ಹವಾಲ್ದಾರ, ಆತ್ಮಾನಂದ ಪಾಟೀಲ, ಹನುಮಂತ ಬಂಗಾರಿ, ಗಿರೀಶ ಕಾಯಕದ, ಗಂಗಾಧರ ಗಾಯಕವಾಡ, ಅಜ್ಜಯ್ಯ ಚಿಕ್ಕಮಠ, ಬಸವರಾಜ ಹೂಗಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.