ಧಾರವಾಡ

ರಾಕ್ ಶೈಲಿ ವಚನಗಳು: ಅಲ್ಬಂ ಬಿಡುಗಡೆ

Published On :

ಹುಬ್ಬಳ್ಳಿ: ಹುಬ್ಬಳ್ಳಿ ಮೂಲದ ಸದ್ಯ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ದ್ವಿತೀಯ ಪಿಯು ವಿದ್ಯಾರ್ಥಿನಿ ಅಮ್ರಪಾಲಿ ಶಿಂಧೆ ಅವರು ರಾಕ್ ಶೈಲಿಯಲ್ಲಿ ಹಾಡಿದ ವಚನಗಳ ಸಿಡಿ ಅಲ್ಬಂ 'ಬಸವಾ ಇನ್ ಯೂ' ಈಚೆಗೆ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು.
ಬಸವ ಸಮಿತಿ ಆಶ್ರಯದಲ್ಲಿ ಜರುಗಿದ 'ಬಸವಾ ಇನ್ ಯೂ' ಸಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಕೊಲ್ಹಾಪುರ ಐಎಎಸ್ ಅಧಿಕಾರಿ ವಿಜಯಲಕ್ಷ್ಮಿ ಬಿದರಿ, ನಿವೃತ್ತ ಐಎಎಸ್ ಅಧಿಕಾರಿ ಜಯರಾಜ್, ಕೇಂದ್ರದ ಮಾಜಿ ಸಚಿವ ರಾಜಶೇಖರನ್, ಜೆಡಿಎಸ್ ಮುಖಂಡ ತಿಪ್ಪಣ್ಣ, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಸಾಹಿತಿ ಕೊ. ಚನ್ನಬಸಪ್ಪ, ನ್ಯಾಯಮೂರ್ತಿ ವಿ.ಎಸ್. ಮಳಿಮಠ, ಪ್ರಕಾಶಕ ಚನ್ನಬಸವಣ್ಣ ಇದ್ದರು. ಬೇಲಿಮಠದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ರಾಕ್ ಶೈಲಿಯಲ್ಲಿ ವಚನಗಳನ್ನು ಪ್ರಸ್ತುತಪಡಿಸಿರುವ ಆಮ್ರಪಾಲಿ ಅವರಿಗೆ ಹುಬ್ಬಳ್ಳಿಯ ರಾಮಕುಮಾರ್ ಶಿಂಧೆ ಮಾರ್ಗದರ್ಶನ ಲಭಿಸಿದ್ದು, ವಿಕ್ಟರ್ ಸಂಗೀತ ನೀಡಿದ್ದಾರೆ. ಪಾಶ್ಚಿಮಾತ್ಯ ರಾಕ್ ಶೈಲಿಯಲ್ಲಿ ದಯವಿಲ್ಲದ ಧರ್ಮ ಅದಾಹುದಯ್ಯ, ಕಳಬೇಡ ಕೊಲಬೇಡ, ಲೋಕದ ಡೊಂಕು ನೀವೇಕೆ ತಿದ್ದುವಿರಿ, ಚಕೋರಂಗೆ ಚಂದ್ರಮನ ಸೇರಿದಂತೆ ಇನ್ನಿತರ ಬಸವಣ್ಣನವರ ವಚನಗಳನ್ನು ಪಾಶ್ಚಾತ್ಯ ಶೈಲಿಯಲ್ಲಿ ಆಮ್ರಪಾಲಿ ಹಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.