ಸುದ್ದಿ ಸಂಕ್ಷೇಪ
24ರಿಂದ ಶ್ರೀರಾಮಕಥಾ ಪ್ರವಚನ ಪ್ರಾರಂಭ
ಹುಬ್ಬಳ್ಳಿ: ರಾಮಚಂದ್ರಾಪುರ ಮಹಾಸಂಸ್ಥಾನದ ಶ್ರೀಮಜ್ಜಗದ್ಗುರು ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರಿಂದ ಮೇ 24ರಿಂದ 28ರ ವರೆಗೆ ನಗರದಲ್ಲಿ ಶ್ರೀರಾಮಕಥಾ ಪ್ರವಚನ ಆಯೋಜಿಸಲಾಗಿದೆ. ಹೊಸ ಬಸ್ ನಿಲ್ದಾಣ ಬಳಿ ಇರುವ ಗೋಕುಲ ಗಾರ್ಡನ್ನಲ್ಲಿ ಐದು ದಿನಗಳವರೆಗೆ ನಿತ್ಯ ಸಂಜೆ 6ಕ್ಕೆ ಪ್ರವಚನ ನಡೆಯಲಿದೆ. ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಹಿತಿಗೆ ರಾಮಕಥಾ ಸಂಚಾಲನ ಸಮಿತಿ ಪ್ರಧಾನ ಸಂಚಾಲಕ ಪ್ರಮೋದ ಪಂಡಿತ (ಮೊ.ಸಂ. 94483 09873) ಅಥವಾ ಉಪಾಧ್ಯಕ್ಷ ಎನ್.ಎಂ. ಹೆಗಡೆ (93434 03650) ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ನಾಳೆ ಶ್ರದ್ಧಾ ಸಮರ್ಪಣ
ಹುಬ್ಬಳ್ಳಿ: ಸ್ವಾತಂತ್ರ್ಯ ಹೋರಾಟಗಾರ, ಸಾಹಿತಿ ಹಾಗೂ ಡಾ. ಕೆ.ಎಸ್. ಶರ್ಮಾ ಅವರ ತಂದೆ ದಿ. ಎಂಬಾರ್ ಭಾಷ್ಯಾಚಾರ್ಯ ಶ್ರದ್ಧಾ ಸಮರ್ಪಣ ದಿನಾಚರಣೆಯನ್ನು ಮೇ 18ರಂದು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 11ಕ್ಕೆ ಗೋಕುಲ ರಸ್ತೆ ಬಸವೇಶ್ವರ ನಗರದ ವಿಶ್ವಶ್ರಮ ಚೇತನ ಆವರಣದಲ್ಲಿರುವ ಭಾಷ್ಯಾಚಾರ್ಯ ಸಭಾಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.ಡಾ. ಕೆ. ರಾಘವೇಂದ್ರ ರಾವ್ ರಚಿಸಿದ ಸಿಂಗಲ್ ಫಿಗ್ ಟ್ರೀ ಹಾಗೂ ಪ್ರಕಾಶ ಪ್ರಭು ಸಂಪಾದಕತ್ವದ ವನಸುಮ ಕೃತಿಗಳು ಇದೇ ಸಂದರ್ಭದಲ್ಲಿ ಬಿಡುಗಡೆಗೊಳ್ಳುವವು. ಸ್ವಾತಂತ್ರ್ಯಾ ನಂತರದ ಭಾರತದ ಸ್ಥಿತಿ-ಗತಿ: ಒಂದು ವಿಚಾರ ಮಂಥನ ಕುರಿತ ವಿಚಾರ ಸಂಕಿರಣ ನಡೆಯಲಿದೆ. ನಗರದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಮಾರ್ಕ್ಸಿಸ್ಟ್ ಥಿಯರಿ ಮತ್ತು ಪ್ರಾಕ್ಟಿಸ್ನ ಗೌರವ ನಿದೇರ್ಶಕ ಡಾ. ಕೆ. ರಾಘವೇಂದ್ರ ರಾವ್, ಬೇಂದ್ರೆ ಸಂಶೋಧನ ಸಂಸ್ಥೆಯ ಸಹ ನಿರ್ದೇಶಕ ಡಾ. ವಾಮನ ಬೇಂದ್ರೆ, ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಬಿ. ಕೃಷ್ಣಮೂರ್ತಿ ಅತಿಥಿಗಳಾಗಿ ಪಾಲ್ಗೊಳ್ಳುವರು.
ಫೆಲೋಶಿಪ್ಗೆ ಆಹ್ವಾನ
ಹುಬ್ಬಳ್ಳಿ: ನಗರದ ದೇಶಪಾಂಡೆ ಎಜುಕೇಶನಲ್ ಟ್ರಸ್ಟ್ 2013-14ನೇ ಸಾಲಿನ ವಿವಿಧ ಫೆಲೋಶಿಪ್ಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ಎಸ್ಎಸ್ಎಲ್ಸಿ, ಪಿಯುಸಿ, ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರೈಸಿರಬೇಕು. 18ರಿಂದ 30 ವರ್ಷದವರಾಗಿರಬೇಕು. ಆಸಕ್ತರು ಜೂ. 8ರೊಳಗೆ ಅರ್ಜಿ ಸಲ್ಲಿಸಬೇಕು. ಮಾಹಿತಿಗೆ ಗುರನಗೌಡ ಕೆ., ಪ್ರೋಗ್ರಾಮ್ ಮ್ಯಾನೇಜರ್, ದೇಶಪಾಂಡೆ ಎಜುಕೇಶನಲ್ ಟ್ರಸ್ಟ್, ಡಿಸಿಎಸಿಇ ಬಿಲ್ಡಿಂಗ್, ಬಿವಿಬಿ ಕಾಲೇಜ್ ಆವರಣ, ವಿದ್ಯಾನಗರ, ಹುಬ್ಬಳ್ಳಿ-580031 (ಮೊ.ಸಂ.-7760965494 ಅಥವಾ 7760965491) ಸಂಪರ್ಕಿಸಲು ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

