ರಾಜ್ಯ ಕಾರ್ಯದರ್ಶಿಯಾಗಿ ಕಲಂದರ ಮುಲ್ಲಾ ನೇಮಕ
ಧಾರವಾಡ: ಭಾರತೀಯ ಜನತಾ ಪಕ್ಷದ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿ ಮುಖಂಡ ಕಲಂದರ ಮುಲ್ಲಾ ನೇಮಕವಾಗಿದ್ದಾರೆ. ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಅಧ್ಯಕ್ಷ ಡಾ.ಎನ್.ಎಫ್. ಮೋಹಿಸಿನ್ ಅವರು ಕಲಂದರ ಮುಲ್ಲಾ ಅವರನ್ನು ನೇಮಿಸಿ, ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಜವಾಬ್ದಾರಿ ನಿರ್ವಹಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ಅಭಿನಂದನೆ
ಅಣ್ಣಿಗೇರಿ: ಸ್ಥಳೀಯ ಪುರಸಭೆಯ ಮಾಜಿ ಸ್ಥಾಯಿ ಸಮಿತಿ ಚೇರ್ ಮನ್ ಶಿವಾನಂದ ಹಾಳದೋಟರ ಧಾರವಾಡ ಜಿಲ್ಲಾ ಯುವ ಮೋರ್ಚಾ ಬಿಜೆಪಿ ಪಕ್ಷದ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕ ಅಧ್ಯಕ್ಷ ಷಣ್ಮುಖ ಗುರಿಕಾರ ಹಾಗೂ ಅಣ್ಣಿಗೇರಿ ಘಟಕದ ಬಿಜೆಪಿ ಅಧ್ಯಕ್ಷರು ಕಾರ್ಯಕರ್ತರು ಹಾಳದೋಟರ ಓಣಿಯ ಗೆಳೆಯರ ಬಳಗ, ವಿಶ್ವಜ್ಯೋತಿ ಯುವಕ ಮಂಡಳದ ಸದಸ್ಯರು, ಪಟ್ಟಣದ ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ.
ವಸತಿ ರಹಿತರಿಗೆ ಆಶ್ರಯ ಸಂಕೀರ್ಣ ನೀಡಿ
ಹುಬ್ಬಳ್ಳಿ: ಅವಳಿ ನಗರದ ವಸತಿ ರಹಿತ ಜನತೆಗೆ ವಸತಿ ಆಶ್ರಯ ಸಂಕೀರ್ಣ ನಿರ್ಮಿಸಿ ವಿತರಿಸುವಂತೆ ಒತ್ತಾಯಿಸಿ ಸಮತಾ ಸೇನಾ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಆಶ್ರಯ ಮನೆ ನಿರ್ಮಿಸಿ, ಅರ್ಹರಿಗೆ ವಿತರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. ಆಶ್ರಯ ಮನೆ ವಿತರಿಸುವ ನೆಪದಲ್ಲಿ ನಕಲಿ ಅರ್ಜಿಗಳನ್ನು ವಿತರಿಸುವ ಮೂಲಕ ಕೆಲವರು ಬಡವರನ್ನು ದೋಚುತ್ತಿದ್ದಾರೆ. ಸುಮಾರು 7-8 ವರ್ಷಗಳ ಹಿಂದೆ ಗೋಕುಲ, ತಾರಿಹಾಳ, ಮಂಟೂರಗಳಲ್ಲಿ ವಸತಿ ಯೋಜನೆ ಕಲ್ಪಿಸಿದ ಮಹಾನಗರ ಪಾಲಿಕೆ, ಅಲ್ಲಿ ಯಾವುದೇ ಸೌಲಭ್ಯ ಕಲ್ಪಿಸಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಜಂಟಿಯಾಗಿ ಮುಂಬಯಿ ಮಹಾನಗರದ ಮಾದರಿಯಲ್ಲಿ ಬಹುಮಡಿ ವಸತಿ ಸಂಕೀರ್ಣ ಯೋಜನೆ ಅನುಷ್ಠಾನಗೊಳಿಸುವ ಮೂಲಕ ವಸತಿ ರಹಿತರಿಗೆ ಆಶ್ರಯ ಕಲ್ಪಿಸಬೇಕು ಎಂದು ಆಗ್ರಹಿಸಿದರು. ನಂತರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು. ಸೇನಾ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ, ಅಶೋಕ ಕಾಶೇನವರ, ಸೋಮಶೇಖರ ಚಲವಾದಿ, ಲೋಹಿತ್ ಗಾಮನಗಟ್ಟಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

