ಧಾರವಾಡ

ಮಾನವೀಯತೆಯ ದರ್ಶನಮಾಡಿಸುವ ಬೇಂದ್ರೆ ಕೃತಿಗಳು

Published On :

ಹುಬ್ಬಳ್ಳಿ: ಬೇಂದ್ರೆಯವರ ದರ್ಶನ ಹಾಗೂ ಸಾಹಿತ್ಯ ಬೃಹದುತ್ಪತ್ತಿಯು ಮಾನವೀಯತೆಯ ದರ್ಶನ ಮಾಡಿಸುತ್ತದೆ ಎಂದು ಅಂಬಿಕಾತನಯದತ್ತ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಕೆ. ರಾಘವೇಂದ್ರರಾವ್ ಹೇಳಿದರು.
ನಗರದಲ್ಲಿ ಇತ್ತೀಚೆಗೆ ಬೇಂದ್ರೆ ಸಂಶೋಧನ ಸಂಸ್ಥೆ ಏರ್ಪಡಿಸಿದ್ದ 'ದ.ರಾ.ಬೇಂದ್ರೆ ಸಂಸ್ಮರಣೆ-33' ಕಾರ್ಯಕ್ರಮದಲ್ಲಿ 'ಬೇಂದ್ರೆ ಹಾಗೂ ಮಾನವೀಯತೆಯ ದರ್ಶನ' ವಿಷಯ ಕುರಿತು ಮಾತನಾಡಿದ ಅವರು, ಬೇಂದ್ರೆಯವರ ಜಾಗತಿಕ ದೃಷ್ಟಿಕೋನ ಹಾಗೂ ಸಾಹಿತ್ಯಿಕ ಕೃತಿಗಳು ಚಾರಿತ್ರಿಕ ಸಂಘರ್ಷ ಪ್ರತಿನಿಧಿಸುತ್ತ ಮಾನವೀಯತೆಯ ದರ್ಶನದೆಡೆಗೆ ಸಾಗುತ್ತದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ, ಬೇಂದ್ರೆಯವರ ಸಾಹಿತ್ಯ ಜನರ ಬದುಕನ್ನು ಬಿಂಬಿಸುವ ಅಮರ ಸಾಹಿತ್ಯ. ಮಾನವೀಯ ಮೌಲ್ಯಗಳನ್ನು ಬಿಂಬಿಸುವ ಈ ಸಾಹಿತ್ಯವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡುವ ಮೂಲಕ ಮಾನವೀಯ ಸಮಾಜ ರಚನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಬೇಂದ್ರೆಯವರ ಪ್ರಗತಿಪರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಜಿಲ್ಲಾ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ತಿಳಿಸಿದರು. ಬೇಂದ್ರೆಯವರ ಆಯ್ದ ಒಲವಿನ ಕವನಗಳ ಸಂಗ್ರಹ 'ಒಲವೇ ನಮ್ಮ ಬದುಕು' ಕೃತಿಯ ಸಾಂಕೇತಿಕ ಬಿಡುಗಡೆ ಇದೇ ಸಂದರ್ಭ ನೆರವೇರಿತು. ಬೇಂದ್ರೆ ಸಂಶೋಧನ ಸಂಸ್ಥೆಯ ನಿರ್ದೇಶಕ ಡಾ. ಕೆ.ಎಸ್. ಶರ್ಮಾ ಪ್ರಾಸ್ತಾವಿಕ ಮಾತನಾಡಿದರು.
ಸಂಸ್ಥೆಯ ಸಹ ನಿರ್ದೇಶಕ ಡಾ. ವಾಮನ ಬೇಂದ್ರೆ, ಡಾ. ಶ್ಯಾಮಸುಂದರ ಬಿದರಕುಂದಿ, ಅಮ್ಮೆಂಬಾಳ ಆನಂದ, ಎಂ.ಡಿ. ಗೋಗೇರಿ, ಜಗದೀಶ ಮಂಗಳೂರಮಠ, ವಿಕಾಸ ಸೊಪ್ಪಿನ, ಪ್ರೊ. ಚಂದ್ರಶೇಖರ ಯಾದವಾಡ ಮತ್ತಿತರರು ಹಾಜರಿದ್ದರು. ಪ್ರೊ. ರವೀಂದ್ರ ಶಿರೋಳ್ಕರ ನಿರೂಪಿಸಿ, ಪ್ರೊ. ಸಂಜಯ ತ್ರಾಸದ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.