ಮಹಿಳೆ ಮೇಲೆ ಹಲ್ಲೆ: ಆರೋಪಿ ಬಂಧನ
ಹುಬ್ಬಳ್ಳಿ: ಉಣಕಲ್ ವಿದ್ಯಾನಗರ ಕ್ರಾಸ್ನಲ್ಲಿ ವಾಸವಾಗಿರುವ ಒಂಟಿ ಮಹಿಳೆ ಮೇಲೆ ಹಲ್ಲೆ ಮಾಡಿ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ ಆರೋಪಿಯನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಉಣಕಲ್ ಕ್ರಾಸ್ನ ಟಿಂಬರ್ ಯಾರ್ಡ್ನ ಕಲ್ಯಾಣ ನಗರ ನಿವಾಸಿ ಲಕ್ಷ್ಮಣ ಬಡಿಗೇರ ಎಂಬ ಆರೋಪಿ ಕೆಲವು ದಿನಗಳ ಹಿಂದೆ ಮನೆಯಲ್ಲಿ ಟಿವಿ ನೋಡುತ್ತ ಕುಳಿತಿದ್ದ ಪ್ರೇಮಾವತಿ ವಡವಡಗಿ ಎಂಬ ಮಹಿಳೆ ಮೇಲೆ ಹಲ್ಲೆ ಮಾಡಿ 1.5 ಲಕ್ಷ ಮೌಲ್ಯದ 70 ಗ್ರಾಂ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದನು. ವಿದ್ಯಾನಗರ ಠಾಣೆ ಇನ್ಸ್ಪೆಕ್ಟರ್ ಗಿರೀಶ ರೋಡಕರ್, ಐ.ಕೆ. ಬೇವಿನಮರದ, ರವಿ ಯಡವಣ್ಣವರ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರವೀಂದ್ರ ಮನುವಾಚಾರ್ಯ
ನವಲಗುಂದ: ಇಲ್ಲಿಯ ಆನೆಗೊಂದಿ ಪ್ಲಾಟ್ ನಿವಾಸಿ, ವಕೀಲ ರವೀಂದ್ರ ಈಶ್ವರಪ್ಪ ಮನುವಾಚಾರ್ಯ (55) ಭಾನುವಾರ ಬೆಳಗ್ಗೆ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಸಹೋದರ, ಸಹೋದರಿಯರು, ತಂದೆ ಹಾಗೂ ಅಪಾರ ಬಂಧು ಬಳಗ ಇದ್ದಾರೆ. ವರದಿಗಾರ ಶ್ರೀಕಾಂತ ಮನುವಾಚಾರ್ಯ ಮೃತರ ಸಹೋದರರಾಗಿದ್ದಾರೆ.
ಸಂತಾಪ: ರವೀಂದ್ರ ಮನುವಾಚಾರ್ಯ ನಿಧನಕ್ಕೆ ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಸಚಿವ ಕೆ.ಎನ್. ಗಡ್ಡಿ, ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಡಾ. ಆರ್.ಬಿ. ಶಿರಿಯಣ್ಣವರ, ಪಂಚಗೃಹ ಹಿರೇಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯರು, ಗವಿಮಠದ ಶ್ರೀ ಬಸವಲಿಂಗ ಮಹಾಸ್ವಾಮೀಜಿ, ನಾಗಲಿಂಗಸ್ವಾಮಿ ಮಠದ ಶ್ರೀ ವೀರಯ್ಯ ಸ್ವಾಮೀಜಿ, ವಿಶ್ವಕರ್ಮ ಸಮಾಜ ಬಾಂಧವರು, ಪುರಸಭೆ ಮಾಜಿ ಅಧ್ಯಕ್ಷ ನಿಂಗಪ್ಪ ಅಸುಂಡಿ, ಉಸ್ಮಾನ ಬಬರ್ಚಿ, ಬಸವರಾಜ ಸೋಮಗೊಂಡ ಸಂತಾಪ ಸೂಚಿಸಿದ್ದಾರೆ.
ಮಾನೋಜಿ ಕಲಾಲ
ನವಲಗುಂದ: ಇಲ್ಲಿಯ ಕಲಾಲ ಓಣಿ ನಿವಾಸಿ ಕಲಾಲ ಸಮಾಜದ ಪ್ರಮುಖ ಮಾನೋಜಿ ವಾಸೋಜೀ ಕಲಾಲ(52) ಭಾನುವಾರ ನಿಧನರಾದರು. ಮೃತರಿಗೆ ಪತ್ನಿ, ನಾಲ್ವರು ಪುತ್ರರು, ಅಪಾರ ಬಂಧು ಬಳಗವಿದೆ.
ಸಂತಾಪ: ಮಾನೋಜಿ ನಿಧನಕ್ಕೆ ಗವಿಮಠದ ಬಸವಲಿಂಗ ಸ್ವಾಮೀಜಿ, ಪಂಚಗೃಹ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು, ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಶಾಸಕ ಶಂಕರಪಾಟೀಲ ಮುನೇನಕೊಪ್ಪ, ಡಾ. ಆರ್.ಬಿ. ಶಿರಿಯಣ್ಣವರ, ಮಾಜಿ ಸಚಿವ ಕೆ.ಎನ್. ಗಡ್ಡಿ, ನೇತಾಜಿ ಕಲಾಲ, ಚಂದ್ರಶೇಖರ ಕಲಾಲ, ನರಸಪ್ಪ ಕಲಾಲ, ಮಹಾಂತೇಶ ಕಲಾಲ, ಅಜಿತ ಆನೆಗೊಂದಿ, ಅಶೋಕ ಮಜ್ಜಿಗುಡ್ಡ, ಸಿದ್ದಲಿಂಗಪ್ಪ ಜಮಖಂಡಿ, ಎಂ.ಕೆ. ಕುಲಕರ್ಣಿ, ಸಕ್ರಪ್ಪ ಹಳ್ಳದ, ಉಸ್ಮಾನ್ ಬಬರ್ಚಿ ಮೊದಲಾದವರು ಸಂತಾಪ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

