ಕಳಸಾ-ಬಂಡೂರಿ: ಸರ್ವ ಪಕ್ಷ ಸಭೆ ಕರೆಯಿರಿ
ಧಾರವಾಡ: ಕಳಸಾ-ಬಂಡೂರಿ ನಾಲಾ ವಿಚಾರವಾಗಿ ಗೋವಾ ಸರ್ಕಾರ ಇತ್ತೀಚೆಗೆ ತುಸು ಮೃದು ಧೋರಣೆ ತೋರುತ್ತಿದ್ದು, ಮುಖ್ಯಮಂತ್ರಿಗಳು ಕೂಡಲೇ ಸರ್ವ ಪಕ್ಷಗಳ ಸಭೆ ಕರೆದು ದೆಹಲಿಗೆ ಒಂದು ನಿಯೋಗ ಕಳುಹಿಸಬೇಕೆಂದು ಶಾಸಕ ಎನ್.ಎಚ್. ಕೋನರೆಡ್ಡಿ ಆಗ್ರಹಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 13ರಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಕುರಿತಾಗಿ ಜಲಸಂಪನ್ಮೂಲ ಸಚಿವರು ಸೇರಿದಂತೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಉಸ್ತುವಾರಿ ಸಚಿವರು ಹಾಗೂ ಶಾಸಕರ ಸಭೆ ನಡೆಸುತ್ತಿರುವುದು ಸ್ವಾಗತರ್ಹ. ರಾಜ್ಯ ಸರ್ಕಾರ ಈ ಮೂಲಕ ರೈತರ ಹಾಗೂ ಹೋರಾಟಗಾರರ ಸಲಹೆ-ಸೂಚನೆಗಳನ್ನು ಪಡೆದು ಒಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಹುಬ್ಬಳ್ಳಿ-ಧಾರವಾಡ ಸೇರಿದಂತೆ ವಿವಿಧ ಪಟ್ಟಣಗಳಿಗೆ ಕುಡಿಯುವ ನೀರಿನ ಈ ಯೋಜನೆ ಅನುಷ್ಠಾನಕ್ಕೆ ಒಗ್ಗಟ್ಟಿನ ಪ್ರಯತ್ನ ನಡೆಯಬೇಕಿದೆ. ಇಲ್ಲಿ ಯಾವುದೇ ಪಕ್ಷದ ರಾಜಕಾರಣ ಬೇಡ ಎಂದು ಕೋನರೆಡ್ಡಿ ಪ್ರತಿಪಾದಿಸಿದರು.
ನ. 12ರಂದು ಸಚಿವ, ಶಾಸಕರ ತಂಡವು ಕಳಸಾ-ಬಂಡೂರಿ ನಾಲಾ ಯೋಜನೆ, ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಬರುವ ಕಾಲುವೆ ಹಾಗೂ ಉಪ ಕಾಲುವೆಗಳು, ಬೆಣ್ಣಿ ಹಳ್ಳ ಅಭಿವೃದ್ಧಿ ಯೋಜನೆ ಕುರಿತು ಖಾನಾಪುರ ತಾಲೂಕಿನ ಕಣಕುಂಬಿಗೆ ತೆರಳುತ್ತಿದ್ದು, ಕಾವೇರಿ ಕಣಿವೆಗೆ ಬೆಂಬಲ ನೀಡಿದಂತೆ ಇಡಿ ರಾಜ್ಯ ಒಂದಾಗಿ ಕಳಸಾ-ಬಂಡೂರಿ ನಾಲಾ ಜೋಡಣೆ ವಿಷಯಕ್ಕೆ ಒಂದಾಗಬೇಕಿದೆ. ಅಧಿವೇಶನದಲ್ಲಿ ಒಂದು ತೀರ್ಮಾನ ತೆಗೆದುಕೊಂಡು ಕೂಡಲೇ ಸರ್ವಪಕ್ಷಗಳ ಸಭೆ ನಡೆಯಲಿ. ನ್ಯಾಯಾಧೀಕರಣದ ಮುಂದೆ ಸಮರ್ಥವಾಗಿ ವಾದ ಮಂಡಿಸಿ ನಮ್ಮ ಪಾಲಿನ ನೀರು ನಮಗೆ ಕೊಡುವಂತಾಗಲಿ ಎಂದರು.
ಬಿ.ವಿ. ಸೋಮಾಪುರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

