ಧಾರವಾಡ

ಪದಾಧಿಕಾರಿಗಳ ಆಯ್ಕೆ

Published On :

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಜಿಲ್ಲಾ ಲೈಸೆನ್ಸ್ ಪ್ಲೆಂಬರ್ ಸಂಘದ ನೂತನ ಅಧ್ಯಕ್ಷರಾಗಿ ನಾಗರಾಜ ಕಲಘಟಗಿ ಆಯ್ಕೆಗೊಂಡಿದ್ದಾರೆ. ಇತರ ಪದಾಧಿಕಾರಿಗಳಾಗಿ ಮಕಬೂಲಸಾಬ ಉಂಟವಾಲೆ (ಉಪಾಧ್ಯಕ್ಷ), ರಾಘವೇಂದ್ರ ಕಾಂತನ (ಸಹ ಉಪಾಧ್ಯಕ್ಷ), ಫತೇಶಾ ಯರಗಟ್ಟಿ (ಪ್ರಧಾನ ಕಾರ್ಯದರ್ಶಿ), ಗುಡದಯ್ಯ ತೇಜಪ್ಪನವರ (ಸಹ ಕಾರ್ಯದರ್ಶಿ), ಎನ್.ಎಂ. ಜಮಾದಾರ (ಖಜಾಂಚಿ), ಮುಕ್ತುಂಸಾಬ ದೊಡ್ಡವಾಡ (ಸಹ ಖಜಾಂಚಿ), ಫಯಾಜ್ ಅಹ್ಮದ ಖಾಜಿ, ಹನಮಂತಪ್ಪ ಮಣ್ಣವಡ್ಡರ, ನಬೀಸಾಬ ನದಾಫ, ಹಟೇಲಸಾಬ ನದಾಫ, ಇಬ್ರಾಹಿಂ ಇರಕಲ್ (ಕಾರ್ಯಕಾರಿಣಿ ಸದಸ್ಯರು) ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.  ನೂತನವಾಗಿ ಸದಸ್ಯತ್ವ ಪಡೆಯಲಿಚ್ಛಿಸುವವರು ಮೊ: 97397 11721 ಸಂಪರ್ಕಿಸಲು ಪ್ರಧಾನ ಕಾರ್ಯದರ್ಶಿ ಫತೇಶಾ ಯರಗಟ್ಟಿ ಪ್ರಕಟಣೆ ಮೂಲಕ ಕೋರಿದ್ದಾರೆ.
'ಚಿಂತನ ಶ್ರೀ' ಗೌರವ ಪ್ರಶಸ್ತಿ ಪ್ರದಾನ
ಹುಬ್ಬಳ್ಳಿ: ಕಲೆ, ಸಾಹಿತ್ಯ, ರಂಗಭೂಮಿ ಕ್ಷೇತ್ರದ ಪ್ರತಿಭೆ ಗುರುತಿಸಿ ನಗರದ ಚಿಂತನ ವೇದಿಕೆ ವತಿಯಿಂದ ಈ ತಿಂಗಳ ಕೊನೆಯಲ್ಲಿ 'ಚಿಂತನ ಶ್ರೀ' ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಆಸಕ್ತರು 2012-13ರ ಸಾಲಿನಲ್ಲಿ ಪ್ರಕಟಗೊಂಡ ಸಾಹಿತ್ಯ ಕೃತಿಗಳನ್ನು ಕಳಿಸಬಹುದು. ಆಯ್ಕೆಗೊಂಡ ಕೃತಿಗಳ ಲೇಖಕರಿಗೆ ಪ್ರಶಸ್ತಿ ನೀಡಿ, ಗೌರವಿಸಲಾಗುವುದು. ಪ್ರಕಟಿತ ಕೃತಿಗಳ ಎರಡು ಪ್ರತಿಗಳನ್ನು ನ. 16ರೊಳಗೆ ಅಧ್ಯಕ್ಷರು, ಚಿಂತನ ವೇದಿಕೆ, ಬುಡುಪನಹಳ್ಳಿ ಬಿಲ್ಡಿಂಗ್, ಶಿವಗಿರಿ, ಉಣಕಲ್, ಹುಬ್ಬಳ್ಳಿ-23 ವಿಳಾಸಕ್ಕೆ ಕಳುಹಿಸಬೇಕು. ಮಾಹಿತಿಗೆ ಮೊಸಂ-76761 89641 ಸಂಪರ್ಕಿಸಲು ಕೋರಲಾಗಿದೆ.
ನವಲಗುಂದ ತಾಲೂಕು ಕ್ಷೇತ್ರ ಪ್ರಚಾರ ಕಾರ್ಯಕ್ರಮ
ಧಾರವಾಡ: ನವಲಗುಂದ ತಾಲೂಕಿನ ಆಯ್ದ 24 ಗ್ರಾಮಗಳಲ್ಲಿ ವಾರ್ತಾ ಇಲಾಖೆ ವತಿಯಿಂದ ನ. 11ರಿಂದ ಆರಂಭವಾಗಿರುವ ಕ್ಷೇತ್ರ ಪ್ರಚಾರ ಕಾರ್ಯಕ್ರಮ ತಾಲೂಕಿನ ಭದ್ರಾಪುರ, ಮಜ್ಜಿಗುಡ್ಡ ಗ್ರಾಮಗಳಲ್ಲಿ ಯಶಸ್ವಿಯಾಗಿ ಜರುಗಿದೆ. ನ. 12ರಂದು ಸಾಸ್ವಿಹಳ್ಳಿ, ಹಳ್ಳಿಕೇರಿ, 13ಕ್ಕೆ ಅಡ್ನೂರ, ತುಪ್ಪದ ಕುರಹಟ್ಟಿ, 14 ಯರಿಕಿತ್ತೂರು, ಇಬ್ರಾಹಿಂಪುರ, 15 ದಾಟನಾಳ, ನಾಯ್ಕನೂರ, 16 ಮನಕವಾಡ ಹಾಗೂ ನಲವಡಿ ಗ್ರಾಮಗಳಲ್ಲಿ ವಸ್ತು ಪ್ರದರ್ಶನ, ಚಲನಚಿತ್ರ ಪ್ರದರ್ಶನ ಹಾಗೂ ಸಮುದಾಯ ಕಲಾ ತಂಡದಿಂದ ಬೀದಿ ನಾಟಕ ನಡೆಯಲಿದೆ. ನ. 17ರಂದು ಕೊಂಗವಾಡ, ಅರಹಟ್ಟಿ, 18ರಂದು ನಾಗನೂರ, ಸೊಟಕನಾಳ, 19ರಂದು ಚಿಲಕವಾಡ, ನಾಗರಳ್ಳಿ, 20ರಂದು ಬಲ್ಲರವಾಡ, ಬೆಳಹಾರ, 21ರಂದು ಅಮರಗೋಳ, ಕುಮಾರಗೊಪ್ಪ ಮತ್ತು 22ರಂದು ಖನ್ನೂರ ಹಾಗೂ ಬೋಗಾನೂರ ಗ್ರಾಮಗಳಲ್ಲಿ ವಸ್ತು ಪ್ರದರ್ಶನ, ಚಲನಚಿತ್ರ ಹಾಗೂ ದುರ್ಗಾದೇವಿ ಗೀಗೀ ಮೇಳದಿಂದ ಜಾನಪದ ಸಂಗೀತ ಕಾರ್ಯಕ್ರಮಗಳು ಜರಗುವವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.