ಧಾರವಾಡ

ಕನಕ ಜಯಂತಿ ಆಚರಣೆ: ಪೂರ್ವಸಭೆ ಇಂದು

Published On :

ಧಾರವಾಡ: ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಘಟಕ ಇಲ್ಲಿನ ಕಾಳಿದಾಸ ವಿದ್ಯಾರ್ಥಿ ನಿಲಯದಲ್ಲಿ ನ. 16 ರಂದು ಮಧ್ಯಾಹ್ನ 4ಕ್ಕೆ ಕನಕ ಜಯಂತಿ ಆಚರಣೆ ಪೂರ್ವಭಾವಿ ಸಭೆ ಕರೆಯಲಾಗಿದೆ. ಸಮಾಜದ ಎಲ್ಲರೂ ಈ ಸಭೆಯಲ್ಲಿ ಭಾಗವಹಿಸಬೇಕೆಂದು ಜಿಲ್ಲಾಧ್ಯಕ್ಷ ಎಲ್ಲಮ್ಮ ನಾಯ್ಕರ ಪ್ರಕಟಣೆಯಲ್ಲಿ ಕೋರಿದ್ದಾರೆ.
ಮತದಾರರ ಪಟ್ಟಿ: ಹೆಸರು ಸೇರ್ಪಡೆ ದಿನ ವಿಸ್ತರಣೆ
ಧಾರವಾಡ: ವಿಧಾನಪರಿಷತ್‌ನ ಮತದಾರರ ಪಟ್ಟಿಗೆ ಹೊಸ ಹೆಸರು ಸೇರ್ಪಡೆಗೆ ಅರ್ಜಿ ಸ್ವೀಕರಿಸಲು ನ. 15 ಕೊನೆ ದಿನವಾಗಿತ್ತು. ಈ ದಿನ ಮೊಹರಂ ರಜೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ನ. 16 ಕೊನೆ ದಿನವೆಂದು ಭಾರತೀಯ ಚುನಾವಣಾ ಆಯೋಗ ಘೋಷಿಸಿದೆ.
ಇಂದು ಸಂವಾದ ಕಾರ್ಯಕ್ರಮ
ಧಾರವಾಡ: ವಿದ್ಯಾವರ್ಧಕ ಸಂಘವು 58ನೇ ಕರ್ನಾಟಕ ರಾಜ್ಯೋತ್ಸವ ಮಾಸಾಚರಣೆ ಕನ್ನಡ ಹಬ್ಬ ಅಂಗವಾಗಿ ನ. 16ರಂದು ಬೆಳಗ್ಗೆ 10ಕ್ಕೆ ರಾ ಹ. ದೇಶಪಾಂಡೆ ಸಾಂಸ್ಕೃತಿಕ ವೇದಿಕೆ, ಮಾಳಮಡ್ಡಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡಕ್ಕೆ ಅನುವಾದಿಸಿದ ಹತ್ತು ಕಿರು ಹೊತ್ತಿಗೆಗಳ ಕುರಿತು ಸಂವಾದ ಕಾರ್ಯಕ್ರಮ ಏರ್ಪಡಿಸಿದೆ. ಸಾಹಿತಿಗಳು, ಲೇಖಕರು, ಕಲಾವಿದರು, ಚಿಂತಕರು, ಬುದ್ದಿಜೀವಿಗಳು ಕನ್ನಡಾಭಿಮಾನಿಗಳು, ವಿದ್ಯಾರ್ಥಿಗಳು, ಭಾಗವಹಿಸಬೇಕೆಂದು ಶಿಕ್ಷಣ ಮಂಟಪದ ಸಂಚಾಲಕ ಡಾ. ಸಂಜೀವ ಕುಲಕರ್ಣಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಕಾಲು ಜಾರಿ ಇಬ್ಬರು ನೀರುಪಾಲು: ದೂರು
ಕಲಘಟಗಿ: ತಾಲೂಕಿನ ಸೋಮನಕೊಪ್ಪ ಹೊಸಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ತಾಯಿ ಮಗಳಿಬ್ಬರು ನೀರುಪಾಲಾದ ಪ್ರಕರಣವು ಇಲ್ಲಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇಲ್ಲಿನ ಆಲದಕಟ್ಟಿ ಗ್ರಾಮದ ಜಮೀನೊಂದರಲ್ಲಿ ವಾಸವಾಗಿದ್ದ ಬಸವಣ್ಣೆವ್ವ ದ್ಯಾಮಣ್ಣ ಜಮ್ಮಿಹಾಳ (38) ಅವಳ ಮಗಳು ಅಕ್ಷತಾ (15) ಎಂಬುವರೇ ಮೃತಪಟ್ಟ ದುರ್ದೈವಿಗಳು. ಕಲಘಟಗಿ ಮುಂಡಗೋಡ ರಸ್ತೆ ಬಳಿಯ ಸೋಮನಕೊಪ್ಪ ಹೊಸಕೆರೆಗೆ ಬಟ್ಟೆ ತೊಳೆಯಲು ಶುಕ್ರವಾರ ಮಧ್ಯಾಹ್ನ ತಾಯಿ ಹಾಗೂ 4 ಮಕ್ಕಳೊಂದಿಗೆ ಹೋಗಿದ್ದ ಸಂದರ್ಭ ಮಗಳು ಅಕ್ಷತಾ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ರಕ್ಷಿಸಲು ಈಜಲು ಬಾರದ ತಾಯಿ ನೀರಿಗಿಳಿದಿದ್ದು ಇಬ್ಬರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ ನಡುವಿನಮನಿ, ಪಿಎಸ್‌ಐ ಶಿವಾನಂದ ಗಾಣಿಗೇರ, ತಹಸೀಲ್ದಾರ್ ಕೆ.ಆರ್. ಕುಲಕರ್ಣಿ ಹಾಗೂ ಅಗ್ನಿಶಾಮಕ ದಳದವರು 2 ಗಂಟೆಗಳ ಕಾಲ ನೀರಲ್ಲಿ ಮುಳುಗಿದ ಶವಗಳನ್ನು ಹೊರತೆಗೆದು ತನಿಖೆ ಕ್ರಮ ಕೈಗೊಂಡಿದ್ದಾರೆ. ಈ ಕುರಿತು ಪತಿ ದ್ಯಾಮಣ್ಣ ಜಮ್ಮಿಹಾಳ ಅವರು ದೂರನ್ನು ನೀಡಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.