ಇಂದು ಭಗೀರಥ ಜಾಗೃತಿ
ಹುಬ್ಬಳ್ಳಿ: ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಮತ್ತು ಯೋಜನೆಗೆ ಸಂಬಂಧಿಸಿದಂತೆ ಅವಳಿ ನಗರ ನಾಗರಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ ನ. 18, 19ರಂದು ನಗರದಲ್ಲಿ ಭಗೀರಥ ಜಾಗೃತಿ ಜಾಥಾ ಹಮ್ಮಿಕೊಂಡಿದೆ. ನ.18ರಂದು ಬೆಳಗ್ಗೆ 10ಕ್ಕೆ ದುರ್ಗದಬೈಲ್ನಲ್ಲಿ ಭಗೀರಥ ಜಾಗೃತಿ ಜಾಥಾ ಉದ್ಘಾಟನೆಗೊಳ್ಳಲಿದೆ. ಅಲ್ಲಿಂದ ದಾಜಿಬಾನ್ ಪೇಟ್, ಚೆನ್ನಮ್ಮ ಸರ್ಕಲ್, ಬಂಕಾಪುರ ಚೌಕ, ಇಂಡಿಪಂಪ್, ಸರ್ವೋದಯ ಸರ್ಕಲ್, ವಿಶ್ವೇಶ್ವರ ನಗರ, ಹೊಸೂರ ಸರ್ಕಲ್, ಉಣಕಲ್ ಕ್ರಾಸ್, ಭೈರಿದೇವರಕೊಪ್ಪ ಮುಖಾಂತರ ಸಿದ್ದೇಶ್ವರ ಕಲ್ಯಾಣ ಮಂಟಪ ತಲುಪಲಿದೆ. ನ. 19ರಂದು ನವನಗರ ಸರ್ಕಲ್ನಲ್ಲಿ ಭಗೀರಥ ಜಾಗೃತಿ ಜಾಥಾ ಉದ್ಘಾಟನೆಯಾಗಲಿದೆ. ಅಲ್ಲಿಂದ ಗಾಂಧಿ ನಗರ, ಟೋಲ ನಾಕಾ, ಮಾಳಮಡ್ಡಿ, ಶ್ರೀನಗರ, ಸಾಧನಕೇರಿ, ಗಾಂಧಿಚೌಕ್ ಮುಖಾಂತರ ಕಲಾಭವನಕ್ಕೆ ಆಗಮಿಸಲಿದ್ದು, ಸಂಜೆ 6:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
20ರಂದು ಕನ್ನಡೋತ್ಸವ
ಧಾರವಾಡ: ಸೌಂದರ್ಯ ಫೌಂಡೇಶನ್ ಹಾಗೂ ಪೂಜಾ ಕಂಪ್ಯೂಟರ್ ಎಜುಕೇಶನ್ ವತಿಯಿಂದ ರಾಜ್ಯೋತ್ಸವ ಅಂಗವಾಗಿ ಇಲ್ಲಿನ ರಂಗಾಯಣ ಬಯಲು ರಂಗಮಂದಿರದಲ್ಲಿ ಕನ್ನಡೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಉದ್ಘಾಟಿಸಲಿದ್ದು, ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ವಿನಯ ಕುಲಕರ್ಣಿ, ಅರವಿಂದ ಬೆಲ್ಲದ ಮತ್ತಿತರರು ಭಾಗವಹಿಸುತ್ತಾರೆ. ಏಳು ಜನ ಸಾಧಕರಿಗೆ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸುಗಮ ಸಂಗೀತ, ಭರತನಾಟ್ಯ, ಏಕಪಾತ್ರ ಅಭಿನಯ, ಹಾಸ್ಯ, ಮಿಮಿಕ್ರಿ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸೌಂದರ್ಯ ಫೌಂಡೇಶನ್ ಅಧ್ಯಕ್ಷ ಮಂಜುನಾಥ ಬಡಿಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ತಂತಿ ನಾಟಕ ಪ್ರದರ್ಶನ
ಧಾರವಾಡ: ವಿದ್ಯಾವರ್ಧಕ ಸಂಘದಲ್ಲಿ ನಡೆಯುತ್ತಿರುವ ರಾಜ್ಯೋತ್ಸವದ ಕನ್ನಡ ಹಬ್ಬದ ಅಂಗವಾಗಿ ನ. 18ರಂದು ಎಚ್.ಸಿ. ಮೊಗಲಿ ಸ್ಮರಣಾರ್ಥ ತಂತಿ ನಾಟಕ ಪ್ರದರ್ಶನಗೊಳ್ಳಲಿದೆ. ರಾಜೇಂದ್ರ ಕಾರಂತ ರಚಿಸಿದ್ದು, ಬಿ.ಆರ್. ರೇಣುಕಪ್ಪ ನಿರ್ದೇಶಿಸಿದ್ದಾರೆ. ರಂಗ ಅತಿಥಿಗಳಾಗಿ ರಾಜು ಬೆಳ್ಳಕ್ಕಿ ಭಾಗವಹಿಸಲಿದ್ದು, ಸೋಮಶೇಖರ ಜಾಡರ ಹಾಗೂ ಬಾಬಣ್ಣ ಮುನವಳ್ಳಿ ಅವರಿಗೆ ರಂಗ ಕಲಾ ಸನ್ಮಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

