ಅವಳಿ ನಗರದಲ್ಲಿ ಕನಕದಾಸ ಜಯಂತಿ ಆಚರಣೆ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಕನಕ ಅಧ್ಯಯನ ಪೀಠದ ಕನಕ ಸಭಾಭವನದಲ್ಲಿ ಬುಧವಾರ ಜರುಗಿದ ದಾಸವರೇಣ್ಯ ಕನಕದಾಸರ ಜಯಂತಿಯಲ್ಲಿ 'ಕನಕದಾಸರು ಮತ್ತು ಸಾಮಾಜಿಕ ಬದ್ಧತೆ' ಕುರಿತು ಶಿವಮೊಗ್ಗ ಕುವೆಂಪು ವಿವಿ ಕನ್ನಡ ಪ್ರಾಧ್ಯಾಪಕ ಪ್ರೊ. ಜಿ. ಪ್ರಶಾಂತ ನಾಯಕ ವಿಶೇಷ ಉಪನ್ಯಾಸ ನೀಡಿದರು.
ಕವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಟಿ. ಪೋತೆ, ನಿವೃತ್ತ ಪ್ರಾಧ್ಯಾಪಕ ಡಾ. ಕೆ.ರಾಘವೇಂದ್ರರಾವ್, ಡಾ. ಬಿ.ಕೆ. ರವಿ, ಡಾ. ಸರೋಜಿನಿ ಹಿರೇಮಠ ಬರೆದ ಕನಕದಾಸರ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಕುಲಪತಿ ಡಾ.ಎಚ್.ಬಿ. ವಾಲೀಕಾರ ಅಧ್ಯಕ್ಷತೆ ವಹಿಸಿದ್ದರು. ಡಾ. ಎಂ.ಟಿ. ಕಾಂಬಳೆ, ಡಾ. ಶಿವರುದ್ರ ಕಲ್ಲೋಳಿಕರ, ಡಾ. ಸಿ.ಡಿ. ಲಕ್ಕಣ್ಣವರ, ಡಾ. ಬಿ. ಎಫ್. ದಂಡಿನ, ಡಾ. ಎಸ್.ಟಿ. ಬಾಗಲಕೋಟಿ, ಡಾ. ಜೆ.ಎಂ. ನಾಗಯ್ಯ, ಡಾ. ಕೆ. ರಾಘವೇಂದ್ರ ರಾವ್ ದಂಪತಿ, ಭರತ ಒಡೆಯರ, ಎನ್.ಡಿ. ಲಕ್ಕಣ್ಣವರ, ಪ್ರೊ. ಎನ್.ವೈ. ಮಟ್ಟಿಹಾಳ, ವಿ.ಜಿ. ದೀಪಾವಳಿ, ಡಾ. ಯು.ಎಸ್. ರಾಯ್ಕರ, ಡಾ. ಸಂಗೀತಾ ಮಾನೆ, ಡಾ. ಶ್ಯಾಮಲಾ ರತ್ನಾಕರ ಮತ್ತಿತರರು ಉಪಸ್ಥಿತರಿದ್ದರು.
ಬಾಸೆಲ್ ಮಿಶನ್: ನಗರದ ಬಾಸೆಲ್ ಮಿಶನ್ ಪ್ರಾಯೋಗಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 6ನೇ ವರ್ಗದ ವಿದ್ಯಾರ್ಥಿ ದರ್ಶನ ದೇವಾಂಗದ ಕನಕದಾಸರ ವೇಷ ಧರಿಸಿ, ಗಮನ ಸೆಳೆದ. ಮುಖ್ಯಾಧ್ಯಾಪಕ ವಿಲ್ಸನ್ ಮೈಲಿ ಮಾತನಾಡಿದರು.
ಸಾರಸ್ವತಪುರ ಶಾಲೆ: ನಗರದ ಸಾರಸ್ವತಪುರ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕನಕದಾಸರ 526ನೇ ಜಯಂತಿ ಆಚರಿಸಲಾಯಿತು. ಮಂಜುನಾಥ ಹೆಗಡೆ, ಕಲ್ಪನಾ ನಾಯ್ಕ, ಎಂ.ಎನ್. ಸುಧಾಮಣಿ, ರಾಜೇಶ್ವರಿ ಸವಣೂರ, ಸುರೇಖಾ ಯರಗಟ್ಟಿ, ಗಂಗವ್ವ ಹುಲಮನಿ, ಫಾತಿಮಾಬಿ ನದಾಫ್, ಶಶಿರೇಖಾ ಮುಪ್ಪಯ್ಯನವರ, ದಾವಲ್ಬಿ ಜೋರಮ್ಮನವರ, ನೇತ್ರಾವತಿ ಪಿಸೆ, ರುದ್ರವ್ವ ಗುಡಸಲಮನಿ, ವಿಲ್ಮಾ ಕ್ರೂಸ್, ರಜಿಯಾಬೇಗಂ ದಿಲ್ಶಾದ್ ಇತರರಿದ್ದರು.
ಮಾರುತಿ ಶಾಲೆ: ತೇಜಸ್ವಿ ನಗರದ ರೇಲ್ವೆ ಸೇತುವೆ ಬಳಿ ಇರುವ ಶ್ರೀಮಾರುತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನಕ ಜಯಂತಿ ಆಚರಿಸಲಾಯಿತು. ಎ.ಎನ್. ಪಾಟೀಲ, ಮಹಮ್ಮದ ರಫಿಕ್ ರೆಹಮಾನ್ ಭಾಯಿ, ಗೌರವ್ವ ಅಜಗೊನ್ನವರ, ಎನ್.ಎಸ್. ರಾಠೋಡ, ಬಿ.ಬಿ. ನಂದಿ ಇದ್ದರು.
ಭಾಗೀರಥಿ ಶಾಲೆ: ವನಿತಾ ಸೇವಾ ಸಮಾಜದ ಭಾಗೀರತಿ ಪೂರ್ವ ಪ್ರಾಥಮಿಕ ಶಾಲೆ, ವನಿತಾ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಡಿಈಡಿ ಕಾಲೇಜ್ ಸಂಯುಕ್ತ ಆಶ್ರಯದಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು.ನಿರ್ಮಲಾತಾಯಿ ಗೋಖಲೆ, ಎಸ್.ಎಸ್. ಮಳಗಿ, ಅಶೋಕ ನಾಯ್ಕ, ಸಣ್ಣಪ್ಪನವರ, ಗುಂಡಗೋವಿ ಇದ್ದರು.
ಕನಕ ಸಮಾಜ ವೇದಿಕೆ: ಕನಕ ಸಮಾಜ ವೇದಿಕೆಯಿಂದ ನಗರದ ಟೋಲ್ ನಾಕಾ ಕನಕದಾಸ ವೃತ್ತದಲ್ಲಿ ಜಯಂತಿ ಆಚರಿಸಲಾಯಿತು. ಹೇಮಂತ ಗುರ್ಲಹೊಸೂರ, ರಾಜು ಅಂಬೋರೆ, ವಿ.ಡಿ. ಕಾಮರೆಡ್ಡಿ, ರಾಬರ್ಟ ದದ್ದಾಪುರಿ, ಬಿ.ಡಿ. ಹಿರೇಗೌಡರ ಇದ್ದರು.
ದುಮ್ಮವಾಡ: ದುಮ್ಮವಾಡದ ಸರ್ಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು. ವಿ.ಡಿ.ಕಾನಡೆ, ಆರ್.ಐ. ಇಬ್ರಾಹಿಂಪುರ, ಆರ್.ಎಫ್.ಮಾಳಗಿ, ಎಂ.ಎಂ. ಸಾಂಬ್ರಾಣಿ, ಎಲ್.ಆರ್. ಜೋಶಿ ಇನ್ನಿತರರಿದ್ದರು.
ಹುಬ್ಬಳ್ಳಿ ಮಹಾನಗರ ಪಾಲಿಕೆ: ಮಹಾನಗರ ಪಾಲಿಕೆ ಸಭಾಭವನದಲ್ಲಿ ಬುಧವಾರ ಕನಕದಾಸರ ಜಯಂತಿ ಆಚರಿಸಲಾಯಿತು. ಪಾಲಿಕೆ ಆಯುಕ್ತ ರಮಣದೀಪ ಚೌಧರಿ, ಪ್ರೊ. ಧನವಂತ ಹಾಜವಗೋಳ, ಸುಲೋಚನಾ ರಾಯನಗೌಡರ, ಎಸ್.ಎಚ್. ನರೇಗಲ್, ಪ್ರಕಾಶ ಗಾಳೆಮ್ಮನವರ, ದಶರಥ ವಾಲಿ, ಡಿ.ಕೆ. ಚವ್ಹಾಣ, ದೀಪಾಗೌರಿ, ವೀರೇಂದ್ರ ಕುಂದಗೋಳ ಇದ್ದರು.
ಕೆಎಸ್ಸೆಸ್ ಕಾಲೇಜು: ಹುಬ್ಬಳ್ಳಿಯಲ್ಲಿ ಕನಕದಾಸ ಶಿಕ್ಷಣ ಸಮಿತಿಯಿಂದ ಬುಧವಾರ ಕನಕದಾಸರ ಜಯಂತಿ ಆಚರಿಸಲಾಯಿತು. ವಿಜಯನಗರ ಶಿಕ್ಷಣ ಕಾಲೇಜು ಉಪನ್ಯಾಸಕಿ ವಿಜಯಲಕ್ಷ್ಮೀ ದಂಡಿನ, ಡಾ. ವಿ.ಎಚ್. ಬೆಳಗಲಿ, ಡಾ. ಮಲ್ಲಿಕಾರ್ಜುನ, ಎಸ್.ಟಿ. ಮುದರೆಡ್ಡಿ, ಬಿ.ಎಚ್. ದಳವಾಯಿ ಇದ್ದರು. ಜಿ.ಎಂ. ಸುಣಗಾರ, ಎಸ್.ಎಫ್. ಅಣ್ಣಿಗೇರಿ, ಅಶೋಕ ಗಡಾದ, ಬಸವರಾಜ ಗೊರವರ, ಆರ್.ಎಸ್. ಪಾಟೀಲ ಇತರರಿದ್ದರು.
ಕನಕ, ಟಿಪ್ಪು ಜಯಂತಿ ಆಚರಣೆ: ಹುಬ್ಬಳ್ಳಿ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಘಟಕದಿಂದ ಇಲ್ಲಿನ ಗಿರಣಿ ಚಾಳದಲ್ಲಿ ಬುಧವಾರ ಕನಕದಾಸ, ಟಿಪ್ಪು ಜಯಂತಿ ಆಚರಿಸಲಾಯಿತು. ಶಾಸಕ ಸಿ.ಎಸ್. ಶಿವಳ್ಳಿ, ಸದಸ್ಯ, ಮೋಹನ ಹಿರೇಮನಿ, ರಾಜಾ ದೇಸಾಯಿ, ಎಫ್.ಎಚ್. ಜಕ್ಕಪ್ಪನವರ, ಸದಾನಂದ ಡಂಗನವರ, ಸತೀಶ ಮೆಹರವಾಡೆ, ರಾಜಶೇಖರ ಮೆಣಸಿನಕಾಯಿ, ದೇವಕಿ ಯೋಗಾನಂದ, ಮಹೇಶ ಕಾರವಾರಕರ, ಮಹೇಶ ದಾಬಡೆ, ದುರ್ಗಪ್ಪ ಪೂಜಾರ, ಸರೋಜಾ ಹೂಗಾರ, ಫಿರಾಜಿ ಖಂಡೇಕಾರ್, ನಿರ್ಮಲಾ ಮಾನೆ, ಲಕ್ಷ್ಮಿ ಬಾರಕೇರ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

