ಇಂದಿರಾ ಗಾಂಧಿ ಜಯಂತಿ
ಕುಂದಗೋಳ: ದೀನ ದಲಿತರೋದ್ಧಾರಕ್ಕಾಗಿ ದುಡಿದು, ಉಳುವವನೆ ಭೂಮಿಯ ಒಡೆಯ ಎಂಬ ಘೋಷಣೆ ಮಾಡುವ ಮೂಲಕ ಜನಪ್ರಿಯರಾಗಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ನೆನೆದು ಅವರ ಜಯಂತಿಯನ್ನಾಚರಿಸಲು ಹರ್ಷವೆನಿಸುತ್ತದೆ ಎಂದು ಕೆಸಿಸಿ ಬ್ಯಾಂಕ್ ನೂತನ ನಿರ್ದೇಶಕ ಉಮೇಶ್ ಹೆಬಸೂರ ಹೇಳಿದರು. ಇಲ್ಲಿನ ಕೊಕಾಟೆಯವರ ಮನೆಯಲ್ಲಿ ಹಮ್ಮಿಕೊಂಡ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿವೃತ್ತ ಶಿಕ್ಷಕ ಎನ್.ಎಫ್. ನದಾಫ್, ವಿಜಯಕುಮಾರ್ ಹಾಲಿ, ರವಿರಾಜ ಭಸ್ತಿ ಮಾತನಾಡಿದರು. ತಾಲೂಕು ಕಾಂಗ್ರೆಸ್ ಅಧ್ಯಕ್ಷ ದಯಾನಂದ ಕುಂದೂರ, ಚಿದಾನಂದ ಬಡಿಗೇರ್, ಹನಮಂತಪ್ಪ ತಂಬೂರ, ರಾಜು ಕೊಕಾಟೆ, ಸಿದ್ಧಪ್ಪ ಹುಣಸಣ್ಣವರ್, ಬಸುರಾಜ ಮಡಿವಾಳರ, ಮೆಹಬೂಬ್ ನದಾಫ್, ಯಲ್ಲಪ್ಪ ಮಾಡಳ್ಳಿ, ವಿದ್ಯಾಧರ ಸುಂಕದ, ಹನುಮಂತಪ್ಪ ಕಂಬಳಿ, ಬಸವರಾಜ ಶಿರಸಂಗಿ ಇದ್ದರು. ಸಕ್ರು ಲಮಾಣಿ ಸ್ವಾಗತಿಸಿ, ನಿರೂಪಿಸಿದರು.
ಕನಕದಾಸ ಜಯಂತಿ ಆಚರಣೆ
ಕುಂದಗೋಳ: ಇಲ್ಲಿನ ಸವಾಯಿ ಗಂಧರ್ವರ ಸ್ಮಾರಕ ಭವನದಲ್ಲಿ ಬುಧವಾರ ಕನಕದಾಸ ಜಯಂತಿ ಆಚರಿಸಲಾಯಿತು. ಸಭೆಯಲ್ಲಿ ಶಾಸಕ ಸಿ.ಎಸ್. ಶಿವಳ್ಳಿ, ಹುಬ್ಬಳ್ಳಿ ವಿಜಯನಗರ ಕಾಲೇಜಿನ ಕನ್ನಡ ಉಪನ್ಯಾಸಕ ಕೆ.ಬಿ. ಕುರಿ ಮಾತನಾಡಿದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಕನಕದಾಸ ವೃತ್ತದಲ್ಲಿ ಕನಕದಾಸ ಮೂರ್ತಿಗೆ ಪೂಜೆ ಸಲ್ಲಿಸಿ ಪಟ್ಟಣದ ವಿವಿಧ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ತಹಸೀಲ್ದಾರ್ ಎಚ್.ಎಂ. ಓಲೇಕಾರ, ಹನುಮಂತಪ್ಪ ಕಂಬಳಿ, ಡಿ.ಟಿ. ಗೊರವರ, ವಿಜಯಕುಮಾರ ಹಾಲಿ, ಹನುಮಂತಪ್ಪ ನಾಯ್ಕರ, ಖನೋಜ, ಸಿದ್ಧಪ್ಪ ಕುಸುಗಲ್ ಉಪಸ್ಥಿತರಿದ್ದರು. ಶಿಕ್ಷಣಾಧಿಕಾರಿ ಮಂಗಲಾ ಪಾಟೀಲ ಸ್ವಾಗತಿಸಿದರು. ಕಾರ್ಯನಿರ್ವಾಹಕಾಧಿಕಾರಿ ಸಿ.ಎಸ್. ಜೋಷಿ ಪ್ರಾಸ್ತಾವಿಕ ಮಾತನಾಡಿದರು, ಬಸುರಾಜ ಕುಸುಗಲ್ ನಿರೂಪಿಸಿದರು. ಜಿ.ಎಫ್. ಬಾಳಿಹಳ್ಳಿಮಠ ವಂದಿಸಿದರು.
ಟಿಪ್ಪು ಎಲ್ಲ ವರ್ಗಕ್ಕೆ ಸೇರಿದವರು: ಕುಲಕರ್ಣಿ
ಧಾರವಾಡ: ಮೈಸೂರು ಹುಲಿ ಟಿಪ್ಪು ಸುಲ್ತಾನರು ಮುಸ್ಲಿಂ ಸಮುದಾಯಕ್ಕೆ ಮಾತ್ರ ಸೀಮಿತರಾಗಿಲ್ಲ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು. ಟಿಪ್ಪು ಸುಲ್ತಾನ್ ಆರ್ಟ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ವತಿಯಿಂದ ನಗರದ ಅಂಜುಮನ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆ ಹಾಗೂ ಟ್ರಸ್ಟಿನ 6ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಟಿಪ್ಪು ಸುಲ್ತಾನರು ಎಲ್ಲ ವರ್ಗ, ಸಮುದಾಯದವರಿಗೆ ಸೇರಿದವರು. ಅವರ ವ್ಯಕ್ತಿತ್ವ ಆದರಣೀಯವಾದುದು. ಜಯಂತಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಭಾಷಾ ಪೀರ ಸಾನ್ನಿಧ್ಯ ವಹಿಸಿದ್ದರು. ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಿದ್ದರು. ಇಸ್ಲಾಯಿಲ್ ತಮಟಗಾರ ಇನ್ನಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

