ಧಾರವಾಡ

ಮುಸ್ಲಿಂ ತುಷ್ಟೀಕರಣಕ್ಕೆ ಕಾಂಗ್ರೆಸ್ ಹುನ್ನಾರ: ಜೋಶಿ

Published On :

ಹುಬ್ಬಳ್ಳಿ: ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರುವ ಮುಸ್ಲಿಂರನ್ನು ತುಷ್ಟೀಕರಣಗೊಳಿಸುವುದಕ್ಕೆ ಭಯೋತ್ಪಾದನೆಯನ್ನು ಕೂಡ ಕಾಂಗ್ರೆಸ್ ಬಳಸಿಕೊಳ್ಳಲು ಹಿಂಜರಿಯುವುದಿಲ್ಲ ಎಂದು ಸಂಸದ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ.  ದೇಶದ ಭದ್ರತೆ, ಭಯೋತ್ಪಾದನೆಯಂತಹ ಅಪಾಯಕಾರಿ ವಿಷಯಗಳಿಗೂ ಈ ಅನಿಷ್ಟ ರಾಜಕೀಯ ಅನ್ವಯಿಸುತ್ತಿದೆ. ಈಗ ಕೇಂದ್ರ ಗೃಹ ಸಚಿವ ಸುಶೀಲಕುಮಾರ್ ಶಿಂದೆ ಅವರು ಭಯೋತ್ಪಾದನೆ ವಿಷಯದಲ್ಲಿ ನಿರಪರಾಧಿ ಮುಸ್ಲಿಂ ಯುವಕರನ್ನ್ನು ಅನವಶ್ಯಕವಾಗಿ ಬಂಧಿಸದಿರುವಂತೆ ಸೂಚಿಸುವ ಮೂಲಕ ಮುಸ್ಲಿಂ ತುಷ್ಟೀಕರಣ ಮಾಡುತ್ತಿದ್ದಾರೆ. ದೇಶದ ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡಿ ಭಯೋತ್ಪಾದನೆ ಹೆಸರಿನಲ್ಲಿ ಅನವಶ್ಯಕವಾಗಿ ನಿರಪರಾಧಿ ಮುಸ್ಲಿಂ ಯುವಕರನ್ನ್ನು ಬಂಧಿಸದಂತೆ ಸೂಚಿಸಿದ್ದಾರೆ. ಬಂಧಿಸಿದರೆ ಅಂಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಇದು ಬರುವ ಲೋಕಸಭಾ, ವಿಧಾನಸಭಾ ಚುನಾವಣೆಗಳನ್ನ್ನು ಗುರಿಯಾಗಿಸಿಕೊಂಡು ದೇಶ ಒಡೆಯುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಪ್ರಧಾನಮಂತ್ರಿಗೆ ದೇಶದ ಭದ್ರತೆ ಭಯೋತ್ಪಾದನೆಯಿಂದ ಆಗುವ ಗಂಡಾಂತರ, ದೇಶದ ಜಾತ್ಯತೀತತೆ ಬಗ್ಗೆ ಕಳಕಳಿಯಿದ್ದಲ್ಲಿ ಗೃಹಮಂತ್ರಿ ಸುಶೀಲಕುಮಾರ್ ಶಿಂದೆ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.