ಧಾರವಾಡ ಜಂಬೂ ಸವಾರಿ ಉತ್ಸವಕ್ಕೆ ಚಾಲನೆ
ಧಾರವಾಡ: ಇಲ್ಲಿನ ಸಾರಸ್ವತಪುರದ ವಿಶ್ವಸ್ಥ ಮಂಡಳಿಯಿಂದ ನಗರದಲ್ಲಿ ಒಂಭತ್ತು ದಿನಗಳ ಕಾಲ ನಡೆಯುವ ಮೂಲ ದಸರಾ ಜಂಬೂ ಸವಾರಿ ಉತ್ಸವಕ್ಕೆ ಮುರಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಶನಿವಾರ ಚಾಲನೆ ನೀಡಿದರು.
ಈ ಸಂದರ್ಭ ಸಮಿತಿಯ ಬಿ.ಎಚ್. ದೇವನೂರ ಮಾತನಾಡಿ, 2004ರಿಂದ ಜಂಬೂ ಸವಾರಿ ನಡೆಸಲಾಗುತ್ತಿದ್ದು, ಇದೀಗ ಜಂಬೂ ಸವಾರಿ ಉತ್ಸವ ದಶಮಾನೋತ್ಸವಕ್ಕೆ ಕಾಲಿಟ್ಟಿದೆ. ಈ ಮೊದಲು ನವರಾತ್ರಿ ಅಂಗವಾಗಿ ಮೈಸೂರಿನಲ್ಲಿ ಮಾತ್ರ ಜಂಬೂ ಸವಾರಿ ನಡೆಸಲಾಗುತ್ತಿತ್ತು. ಇದರಿಂದ ಸಾಕಷ್ಟು ಉತ್ತರ ಕರ್ನಾಟಕದ ಜನತೆ ಈ ದಸರಾ ಉತ್ಸವ ನೋಡಲಾಗದೆ ಕೊರಗುತ್ತಿದ್ದರು. ಹಾಗಾಗಿ, ಉತ್ತರ ಕರ್ನಾಟಕದ ಜನತೆಯೂ ದಸರಾ ಸೊಬಗನ್ನು ನೋಡಬೇಕು ಎಂಬ ಸದುದ್ದೇಶದಿಂದ ಮೈಸೂರು ದಸರಾ ಉತ್ಸವ ಮಾದರಿಯಲ್ಲಿ ಧಾರವಾಡದಲ್ಲೂ ಜಂಬೂ ಸವಾರಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ದಸರಾ ಉತ್ಸವ ಸಮಿತಿ ಅಧ್ಯಕ್ಷ ಬಸವರಾಜ ತುಂಬರಗುದ್ದಿ, ಪಾಲಿಕೆ ಸದಸ್ಯರಾದ ಶೈಲಾ ಕಾಮರೆಡ್ಡಿ, ಬಸವರಾಜ ಮತ್ತಳ್ಳ, ಮಂಜುಗೌಡ ಪಾಟೀಲ, ಎಂ.ಕೆ. ದಾಂಡೇಲಿವಾಲೆ, ಶಿವಾನಂದ ಚಿನ್ನಗಟ್ಟಿ, ಜಗದೀಶ ಬಾಗೋಜಿ, ಕಾಶೀಮ ದವಲಿವಾಲೆ, ಫೀರು ಗೌಳಿ, ಎಸ್.ಡಿ. ಕೊಳೆಕ್ಕನ್ನವರ, ದಿಲೀಪ ಕಡವೆ ಮತ್ತಿತರರಿದ್ದರು.
ಅನುದಾನ ಪ್ರಸ್ತಾವನೆ: ಉತ್ತರ ನೀಡದ ಸರ್ಕಾರ
ಕನ್ನಡಪ್ರಭ ವಾರ್ತೆ, ಧಾರವಾಡ, ಅ. 5
ನಾಡಹಬ್ಬ ದಸರಾ ನಿಮಿತ್ತ ಇಲ್ಲಿನ ಗಾಂಧಿನಗರದ ಈಶ್ವರ ದೇವಸ್ಥಾನದ ದಸರಾ ಜಂಬೂ ಸವಾರಿ ಉತ್ಸವ ಸಮಿತಿ ಅ. 5ರಿಂದ 13ರ ವರೆಗೆ ಸ್ಪರ್ಧೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಮಿತಿ ಅಧ್ಯಕ್ಷ ಗುರುರಾಜ ಹುಣಸಿಮರದ, ಅ. 5ರಂದು ಸಂಜೆ 4ಕ್ಕೆ ಸಕಲ ವಾದ್ಯಮೇಳದೊಂದಿಗೆ ಮೆರವಣಿಗೆ ನಡೆಸಿ ಗಾಂಧಿನಗರದ ಮಾರುತಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಕಳೆದ ವರ್ಷದಿಂದ ಮೂರ್ತಿ ಪ್ರತಿಷ್ಠಾಪನೆ ಆಚರಣೆ ಮಾಡಲಾಗುತ್ತಿದೆ. ಈ ಬಾರಿ ಜಂಬೂ ಸವಾರಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಕಲಾ ತಂಡಗಳು, ಐದು ಆನೆ ಹಾಗೂ ಉತ್ತರ ಕರ್ನಾಟಕದ ಅನೇಕ ಜನರು ದಸರಾ ಸಂಭ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಜಂಬೂ ಸವಾರಿಯಲ್ಲಿ ಭಾಗವಹಿಸಿದ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಲು ಕಲಾಭವನ, ಗಾಂಧಿನಗರದ ಈಶ್ವರ ದೇವಸ್ಥಾನ, ಕರ್ನಾಟಕ ವಿದ್ಯಾವರ್ಧಕ ಸಂಘ, ನವಲೂರ ಹಾಗೂ ಕೆಲಗೇರಿಯಲ್ಲಿ ವೇದಿಕೆ ಸಜ್ಜು ಮಾಡಲಾಗಿದೆ. ಬಾಲವಿಕಾಸ ಅಕಾಡೆಮಿ ಸಹಯೋಗದೊಂದಿಗೆ ಒಂಭತ್ತು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಮಕ್ಕಳಿಗಾಗಿ ಚಿತ್ರಕಲೆ, ಮಕ್ಕಳ ಫ್ಯಾಶನ್ ಶೋ, ಜಾನಪದ, ಚಲನಚಿತ್ರ ಸಮೂಹ ನೃತ್ಯ ಸ್ಪರ್ಧೆಗಳು ನಡೆಯುತ್ತವೆ. ಯುವಕರಿಗಾಗಿ ಬಾಳೆಹಣ್ಣು ಹಾಗೂ ಒಣ ಇಡ್ಲಿ ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿದೆ. ಎರಡು ವರ್ಷದೊಳಗಿನ ಆರೋಗ್ಯವಂತ ಶಿಶುವಿನ ಸ್ಪರ್ಧೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಸಾಡಿ ಫ್ಯಾಶನ್ ಶೋ, ಅಡುಗೆ ಸ್ಪರ್ಧೆ ನಡೆಯಲಿವೆ. ಅ. 13ರಂದು ಮಧ್ಯಾಹ್ನ 2.30ಕ್ಕೆ ವಿವಿಧ ಕಲಾತಂಡ ಹಾಗೂ ಸ್ಥಳೀಯ ಕರಡಿ ಮಜಲು, ಭಜನಾ ಮಂಡಳ ಹಾಗೂ ಜಾಂಜ್ ಮೇಳಗಳ ಮಧ್ಯೆ ಜಂಬೂ ಸವಾರಿ ನಡೆಸಲಾಗುವುದು. ಅ. 14ರಂದು ಸಂಜೆ 7ಕ್ಕೆ ಚಾಮುಂಡೇಶ್ವರಿ ದೇವಿ ಮೂರ್ತಿ ವಿಸರ್ಜನೆ ಮಾಡುವ ಮೂಲಕ ದಸರಾ ಜಂಬೂ ಸವಾರಿಗೆ ತೆರೆಬೀಳಲಿದೆ ಎಂದರು.
ಈ ಹಿಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಳೆದ ವರ್ಷ ದಸರಾ ಜಂಬೂ ಸವಾರಿ ನಡೆಸಲು ಸಮಿತಿಗೆ ರು. 20ಲಕ್ಷ ಅನುದಾನ ಬಿಡುಗಡೆ ಮಾಡಿದ್ದರು. ಸಮಿತಿ ಜಂಬೂ ಸವಾರಿ ಅದ್ಧೂರಿಯಾಗಿ ನಡೆಸಲು ಸರ್ಕಾರ ಬಿಡುಗಡೆ ಮಾಡಿದ ಅನುದಾನ ಸೇರಿಸಿ ಒಟ್ಟು ರು. 38 ಲಕ್ಷ ಖರ್ಚು ಮಾಡಿತ್ತು. ಆದರೆ, ಈ ಬಾರಿಯೂ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಸರ್ಕಾರದಿಂದ ಇನ್ನು ಯಾವುದೇ ಉತ್ತರ ಬಂದಿಲ್ಲ ಎಂದು ಗುರುರಾಜ ಹುಣಸಿಮರದ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಾಶಿವ ದೊಡಮನಿ, ಯಶವಂತರಾವ್ ಕದಂ, ಎಸ್.ಬಿ. ಕಾಳೆ, ರಾಜೇಂದ್ರ ಕಪಲಿ, ವಿಲಾಸ ತಿಬೇಲಿ, ಶೋಭಾ ಕದಂ ಇದ್ದರು.
ಈ ಹಿಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಳೆದ ವರ್ಷ ದಸರಾ ಜಂಬೂ ಸವಾರಿ ನಡೆಸಲು ಸಮಿತಿಗೆ ರು. 20ಲಕ್ಷ ಅನುದಾನ ಬಿಡುಗಡೆ ಮಾಡಿದ್ದರು. ಸಮಿತಿ ಜಂಬೂ ಸವಾರಿ ಅದ್ಧೂರಿಯಾಗಿ ನಡೆಸಲು ಸರ್ಕಾರ ಬಿಡುಗಡೆ ಮಾಡಿದ ಅನುದಾನ ಸೇರಿಸಿ ಒಟ್ಟು ರು. 38 ಲಕ್ಷ ಖರ್ಚು ಮಾಡಿತ್ತು. ಆದರೆ, ಈ ಬಾರಿಯೂ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಸರ್ಕಾರದಿಂದ ಇನ್ನು ಯಾವುದೇ ಉತ್ತರ ಬಂದಿಲ್ಲ.
- ಗುರುರಾಜ ಹುಣಸಿಮರದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

