ಧಾರವಾಡ

ಇಂದು ಪೂರ್ವಭಾವಿ ಸಭೆ

Published On :

ಹುಬ್ಬಳ್ಳಿ: ಅ. 18ರಂದು ಆಚರಿಸಲಾಗುತ್ತಿರುವ ತಾಲೂಕು ಮಟ್ಟದ ವಾಲ್ಮೀಕಿ ಜಯಂತಿ ನಿಮಿತ್ತ ಅ. 8ರಂದು ಮಿನಿ ವಿಧಾನಸೌಧದಲ್ಲಿರುವ ತಹಸೀಲ್ದಾರ್ ಕಚೇರಿಯಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳುತ್ತಿದ್ದು ಉಳಿದಂತೆ ದಲಿತ, ವಾಲ್ಮೀಕಿ ಸಮಾಜದ ಸಂಘಟನೆಯ ಮುಖಂಡರು ಪಾಲ್ಗೊಳ್ಳುವಂತೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಕಾವ್ಯ ಪ್ರಶಸ್ತಿಗೆ ಸಂಕಲನ ಆಹ್ವಾನ
ಹುಬ್ಬಳ್ಳಿ: ಡಾ೤ ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆಯಿಂದ ನೀಡುವ ಕಾವ್ಯ ಪ್ರಶಸ್ತಿಗೆ ಕವನ ಪ್ರಶಸ್ತಿಗೆ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಕವನ ಸಂಕಲನ 2012ರಲ್ಲಿ ಪ್ರಕಟವಾಗಿರಬೇಕು. ಸಂಪಾದಿತ ಕವನ ಸಂಕಲನಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ. ಆಸಕ್ತ ಕವಿಗಳು ಅ. 15ರೊಳಗೆ ನಿರಂಜನ ವಾಲಿಶೆಟ್ಟರ್, ರವೀಂದ್ರ ನಗರ ಉಣಕಲ್ ಹುಬ್ಬಳ್ಳಿ ಇಲ್ಲಿಗೆ ಕಳಿಸಬೇಕು. ನವೆಂಬರ್‌ನಲ್ಲಿ ನಡೆಯಲಿರುವ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ನಿರುದ್ಯೋಗಿ ಯುವಕರಿಗೆ ಪಂಗನಾಮ: ದೂರು
ಹುಬ್ಬಳ್ಳಿ: ಅಡ್ವಾನ್ಸಡ್ ಎಜ್ಯುಕೇಷನ್ ಪ್ಯಾಕೇಜ್ ನೀಡುತ್ತೇವೆ ಇದರಿಂದ ದುಡ್ಡು ಗಳಿಸಬಹುದು ಎಂದು ಯುವಕರನ್ನು ವಂಚಿಸುತ್ತಿದ್ದ ಬೆಂಗಳೂರು ಮೂಲದ ಐವರು ಯುವಕರ ವಿರುದ್ಧ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  ಬೆಂಗಳೂರು ನಗರದ ಶರತ್ ರಘುನಾಥಾಚಾರ್ಯ ಅಯ್ಯಂಗಾರ ಎಂಬ ಯುವಕ ಸೇರಿದಂತೆ ಇನ್ನು ನಾಲ್ವರು ಸೇರಿಕೊಂಡು ನೋಯ್ಡಾ ಮೂಲದ ಇಬಿಜ್. ಕಾಮ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು, ನಮ್ಮ ಸಂಸ್ಥೆ ನೀಡುವ ತರಬೇತಿಯಿಂದ ಹಣ ಗಳಿಸಬಹುದು ಎಂದು ನಿರುದ್ಯೋಗಿ ಯುವಕರನ್ನು ನಂಬಿಸಿ ರು. 9,556 ಮೊತ್ತದ ಡಿ.ಡಿ. ಪಡೆದುಕೊಂಡಿದ್ದಾರೆ ಅಲ್ಲದೇ ಹುಬ್ಬಳ್ಳಿಯ ಶ್ರೀಕೃಷ್ಣ ಮಂದಿರದಲ್ಲಿ ನೂರೈವತ್ತಕ್ಕೂ ಹೆಚ್ಚು ಯುವಕರನ್ನು ಸೇರಿಸಿ ಅವರಿಂದ ತಲಾ ರು. 50 ಸಂಗ್ರಹಿಸಿ ಪರಾರಿಯಾಗಿದ್ದಾರೆ ಎಂದು ಗದೂರಿನಲ್ಲಿ ತಿಳಿಸಲಾಗಿದೆ.  
ಲಾರಿ- ಕಾರು ಮಧ್ಯೆ ಡಿಕ್ಕಿ: ಮತ್ತೋರ್ವ ಸಾವು
ಧಾರವಾಡ: ತಾಲೂಕಿನ ಮುಗದ ಗ್ರಾಮದ ಬಳಿ ಭಾನುವಾರ ಲಾರಿ ಮತ್ತು ಮಾರುತಿ ಕಾರಿನ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸೋಮವಾರ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಗೋವಾ ಮೂಲದ, ಮಾರುತಿ ವಾಹನ ಚಾಲಕ ವಾಸುದೇವ (45) ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿದ್ದ ಈತನನ್ನು ಚಿಕಿತ್ಸೆಗಾಗಿ ಗೋವಾಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅಪಘಾತದಲ್ಲಿ ಪಾರ್ವತಿ ಎಂಬ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ಗೋವಾದಿಂದ ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ತೆರಳುತ್ತಿದ್ದಾಗ ತಾಲೂಕಿನ ಮುಗದ ಗ್ರಾಮದ ಬಳಿ ಲಾರಿ ಡಿಕ್ಕಿ ಹೊಡೆದಿತ್ತು. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.