ಅವಕಾಶ ಉಪಯೋಗಿಸಿ ಪ್ರತಿಭೆ ಮೆರೆಯಿರಿ
ಧಾರವಾಡ: ಯುವಕರಿಗೆ ನೀಡಿದ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳುವ ಮೂಲಕ ತಮ್ಮಲ್ಲಿ ಹುದುಗಿರುವ ಪ್ರತಿಭೆ ಅನಾವರಣಗೊಳಿಸಬೇಕು ಎಂದು ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷ ಆನಂದಕುಮಾರ ಮಗದುಮ್ ಹೇಳಿದರು.
ಇಲ್ಲಿನ ಕಲಾಸಂಗಮ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಮಾತನಾಡಿದರು. ಕಲಾ ಸಂಗಮದಂತಹ ಸಂಸ್ಥೆಗಳು ಆಸಕ್ತಿವಹಿಸಿಕೊಂಡು ಯುವಕರಲ್ಲಿ ಸಾಂಸ್ಕೃತಿಕ ಛಾಪು ಮೂಡಿಸುತ್ತಿರುವುದು ಹೆಮ್ಮೆಯ ಸಂಗತಿ. ಇಂತಹ ಸಂಘ ಸಂಸ್ಥೆಗಳು ಏರ್ಪಡಿಸುವ ಕಾರ್ಯಕ್ರಮದಲ್ಲಿ ಯುವ ಸಮುದಾಯ ಭಾಗವಹಿಸುವ ಮೂಲಕ ಪ್ರತಿಭೆ ತೋರಪಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಮುಂಬೈನ ಕಲಾ ನಿರ್ದೇಶಕ ಸುಧೀರ ಧಾಮನ್ಸಕರ್, ನಾಟಕಕಾರ ಎಲ್.ಆರ್. ಬೂದಿಹಾಳ ಹಾಗೂ ಉರ್ದು ಕಾದಂಬರಿಕಾರ ಅನೀಸ್ ಬಾರುದ್ವಾಲೆ ಅವರನ್ನು ಸನ್ಮಾನಿಸಲಾಯಿತು. ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ. ಅಬಕಾರಿ ಮಿತ್ರ ಪತ್ರಿಕೆ ಸಂಪಾದಕ ಎಸ್.ಎಸ್. ಚಿಕ್ಕಮಠ ಮಾತನಾಡಿದರು. ಸಾಹಿತಿ ಮೋಹನ ನಾಗಮ್ಮನವರ ಅಧ್ಯಕ್ಷತೆ ವಹಿಸಿದ್ದರು. ಕಲಾಸಂಗಮದ ಅಧ್ಯಕ್ಷ ಪ್ರಭು ಹಂಚಿನಾಳ, ಮಾರ್ತಾಂಡಪ್ಪ ಕತ್ತಿ ಇದ್ದರು. ಸಾಂಸ್ಕೃತಿಕ ಉತ್ಸವದಲ್ಲಿ ಮಲ್ಲಪ್ಪ ಹೊಂಗಲ ಹಾಸ್ಯ, ಉತ್ಪಲಾ ಗದಗಕರ ಅವರಿಂದ ಸುಗಮ ಸಂಗೀತ, ದೀಪಾ ಜಕಾತಿ ಅವರಿಂದ ಭರತನಾಟ್ಯ, ಕಲಾಸ್ಪಂದನ ನೃತ್ಯ ಅಕಾಡೆಮಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಶಿವಗಿರಿ ಬಾಯ್ಸ್ ತಂಡದಿಂದ ಡ್ಯಾನ್ಸ್, ಎಲ್.ಜಿ. ದೇವಾಂಗಮಠ ನಿರ್ದೇಶನದ ಶರಣ ವೈಭವ ನಾಟಕ ಸಂಘದಿಂದ 'ಹೆಂಡ್ತಿ ಬೇಕು ಹೆಂಡ್ತಿ' ನಾಟಕ ಪ್ರದರ್ಶನ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

