ಧಾರವಾಡ

ಬಕ್ರೀದ್: ಹು-ಧಾ ಸಂಚಾರ ಮಾರ್ಗ ಬದಲಾವಣೆ

Published On :

ಹುಬ್ಬಳ್ಳಿ: ಬಕ್ರೀದ್ ಹಬ್ಬದ ನಿಮಿತ್ತ ಅ.16ರಂದು ನಗರದ ಕೆಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಇನ್ನೂ ಕೆಲವು ರಸ್ತೆಗಳ ವಾಹನ ಸಂಚಾರ ಮಾರ್ಗ ಬದಲಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಬಿ.ಎ. ಪದ್ಮನಯನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮ್ಯಾದಾರ ಓಣಿ-ತುಳಜಾ ಭವಾನಿ ಸರ್ಕಲ್, ಪೆಂಡಾರ ಓಣಿ-ತುಳಜಾ ಭವಾನಿ ಸರ್ಕಲ್, ಕಾಳಮ್ಮನ ಅಗಸಿ, ಮಹಾವೀರ ಗಲ್ಲಿ, ಮೂರುಸಾವಿರ ಮಠ, ಅಂಚಟಗೇರಿ ಓಣಿ, ಪದ್ಮಾ ಟಾಕೀಸ್ ರಸ್ತೆ, ಗೌಳಿ ಗಲ್ಲಿ, ಚನ್ನಪೇಟ ಮೇನ್ ರೋಡ್, ಚಾಟ್ನಿಮಠ ಕಡೆಗೆ, ಕಮರಿಪೇಟ, ಜೈ ಭಾರತ ಸರ್ಕಲ್ ಈ  ಪ್ರದೇಶಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಸ್ಟೇಷನ್ ರಸ್ತೆ, ರಾಧಾಕೃಷ್ಣ ಗಲ್ಲಿ, ಶಾ ಬಜಾರ್, ಬಂಡಿವಾಡ ಬೇಸ ಮಸಿದಿಯಿಂದ ಹೊಸ ದುರ್ಗದಬೈಲವರಗೆ, ಲ್ಯಾಮಿಂಗ್ಟನ್ ರಸ್ತೆ, ಶಿವಾಜಿ ಚೌಕ್, ಚಿಟಗುಪ್ಪಿ ಸರ್ಕಲ್, ಕೊಪ್ಪಿಕರ್ ರಸ್ತೆ, ಪೆಂಡಾರಗಲ್ಲಿ, ಕಾಳಮ್ಮನ ಅಗಸಿ, ಮುಲ್ಲಾ ಓಣಿ, ಡಾಕಪ್ಪ ಸರ್ಕಲ್, ಕೌಲಪೇಟ್, ಪಿ.ಬಿ. ರಸ್ತೆ, ಚಾಟ್ನಿಮಠ ಕ್ರಾಸ್‌ನಿಂದ ಎಂ.ಟಿ. ಮಿಲ್, ಕಾರವಾರ ರಸ್ತೆ, ಕೇಶ್ವಾಪುರ ಸರ್ಕಲ್, ದೇಸಾಯಿ ಸರ್ಕಲ್‌ನಿಂದ ಈದ್ಗಾ ಮೈದಾನವರೆಗೆ, ಕೆ.ಎಚ್. ಪಾಟೀಲ ರೋಡ್, ಅಂಡರ್ ಬ್ರಿಡ್ಜ್, ಅಂಬೇಡ್ಕರ್ ರಸ್ತೆ ಮತ್ತು ಡಾಕಪ್ಪ ವೃತ್ತದಲ್ಲಿ ವಾಹನ ಸಂಚಾರಕ್ಕೆ ಅವಕಾಶವಿದೆ.
ಗದಗ ಮತ್ತು ಸ್ಟೇಷನ್ ರಸ್ತೆ ಮುಖಾಂತರ ಬರುವ ವಾಹನಗಳನ್ನು ಪಿಂಟೋ ಪಾಯಿಂಟ್, ದೇಸಾಯಿ ಸರ್ಕಲ್, ಕಾಟನ್ ಮಾರ್ಕೆಟ್ ಮುಖಾಂತರ ಹೊಸೂರಿಗೆ ಬಂದು ಸೇರುವಂತೆ ಮಾರ್ಗ ಬದಲಿಸಲಾಗಿದೆ. ಕೆಎಸ್ಸಾರ್ಟಿಸಿ ಬಸ್‌ಗಳು ಗ್ಲಾಸ್‌ಹೌಸ್ ಎದುರು ನಿಲ್ಲುವುದಕ್ಕೆ ವ್ಯವಸ್ಥೆ ಮಾಡಲಾಗಿದೆ.
ನವಲಗುಂದ ಕಡೆಯಿಂದ ಬರುವ ವಾಹನಗಳನ್ನು ಪಿಂಟೊ ಪಾಯಿಂಟ್ ಮುಖಾಂತರ ಐ.ಬಿ. ರಸ್ತೆ, ಕಾಟನ್ ಮಾರ್ಕೆಟ್ ಮುಖಾಂತರ ಹೊಸುರ ಸರ್ಕಲ್ ಸೇರುವಂತೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಿಂದ ಧಾರವಾಡಕ್ಕೆ ಹೋಗುವ ವಾಹನಗಳನ್ನು ಬೈಪಾಸ್ ಮುಖಾಂತರ ಕಳುಹಿಸಲಾಗುವುದು. ನವಲಗುಂದ ಮತ್ತು ಗದಗ ಕಡೆಗೆ ಹೋಗುವ ವಾಹನಗಳನ್ನು ಮಾತ್ರ ತೊರವಿ ಹಕ್ಕಲ, ಎಂ.ಟಿ. ಮಿಲ್, ವಾಣಿ ವಿಲಾಸ ಕ್ರಾಸ್ ಮುಖಾಂತರ ಹೊಸೂರು ಸರ್ಕಲ್ ಸೇರಿ ನವಲಗುಂದ ಮತ್ತು ಗದಗನತ್ತ ತೆರಳುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ.
ದೇಸಾಯಿ ಸರ್ಕಲ್ ಮುಖಾಂತರ ಬೆಂಗಳೂರು ಮತ್ತು ಧಾರವಾಡ ನಗರಕ್ಕೆ ಹೋಗುವ ವಾಹನಗಳನ್ನು ಶಾನಭಾಗ ಮತ್ತು ಗಿರಣಿ ಚಾಳ ಎಂ.ಟಿ. ಕ್ರಾಸ್ ಮುಖಾಂತರ ಬಿಡಲಾಗುವುದು. ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್‌ಗೆ ಚಿಕ್ಕ ರಸ್ತೆಗಳ ಮುಖಾಂತರ ಬರುವ ವಾಹನಗಳನ್ನು ಅಲ್ಲಿಯೇ ತಡೆಯಲಾಗುವುದು ಇಲ್ಲವೇ ಪರ್ಯಾಯ ಮಾರ್ಗದ ಮುಖಾಂತರ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ.
ಹುಬ್ಬಳ್ಳಿ ಶಹರ ಮೈದಾನದಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವ ಸಂದರ್ಭ ಹುಬ್ಬಳ್ಳಿ ನಗರದತ್ತ ಬರುವ ವಾಹನಗಳನ್ನು ಪ್ರಾರ್ಥನೆ ಮುಗಿಯುವವರೆಗೆ ತಡೆದು ನಿಲ್ಲಿಸಲಾಗುವುದು. ಹಳೇ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವ ಸಂದರ್ಭ ಕಾರವಾರ ರಸ್ತೆ ಮತ್ತು ಇಂಡಿಪಂಪ್‌ನಿಂದ ಬರುವ ವಾಹನಗಳನ್ನು ಪ್ರಾರ್ಥನೆ ಪೂರ್ಣಗೊಳ್ಳುವವರೆಗೆ ತಡೆದು ನಂತರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಕಮಿಷನರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.