ಧಾರವಾಡ

ಅಪಾರ್ಟ್‌ಮೆಂಟ್‌ಗಳಲ್ಲಿ ಅವಿಭಕ್ತ ಕುಟುಂಬ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಅ. 16
ಇಂದಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ. ಆದರೆ, ಅದೇ ಮಾದರಿಯಲ್ಲಿ ಅನೇಕ ಕುಟುಂಬಗಳು ಅಪಾರ್ಟ್‌ಮೆಂಟ್‌ನಂತಹ ಒಂದೇ ಸೂರಿನಲ್ಲಿ ವಾಸಿಸುತ್ತಿರುವುದು ಸಂತಸದ ಸಂಗತಿ ಎಂದು ಮಹಾಲಕ್ಷ್ಮೀ ಬ್ಯಾಂಕ್ ಅಧ್ಯಕ್ಷ ವಿಜಯ ಕುಲಕರ್ಣಿ ಹೇಳಿದರು.
ಇಲ್ಲಿನ ಕೆ.ಸಿ. ಪಾರ್ಕ್ ಬಳಿಯ ರೋಟ್ಸನ್ ಅಪಾರ್ಟ್‌ಮೆಂಟ್‌ನಲ್ಲಿ ನೂತನ ಸಾಂಸ್ಕೃತಿಕ ಭವನ ಉದ್ಘಾಟಿಸಿ ಮಾತನಾಡಿದ ಅವರು, ಈ ಅಪಾರ್ಟ್‌ಮೆಂಟ್‌ನಲ್ಲಿ ಹಲವಾರು ಕುಟುಂಬಗಳು ಯಾವುದೇ ಜಾತಿ, ಭೇದ ಮಾಡಿಕೊಳ್ಳದೆ ಎಲ್ಲರೂ ಅನ್ಯೋನ್ಯತೆಯಿಂದ ಬದುಕುವ ಮೂಲಕ ಇಡೀ ಸಮಾಜಕ್ಕೆ ಹಾಗೂ ಇತರ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಆದರ್ಶರಾಗಿದ್ದಾರೆ. ಇಲ್ಲಿನ ಜನತೆಗೆ ಬೇಕಾದ ಸಹಾಯ, ಸಹಕಾರ ಕೊಡುವುದಾಗಿ ಭರವಸೆ ನೀಡಿದರು.
ತೆರಿಗೆ ಭರಿಸಿ: ಶಾಸಕ ಅರವಿಂದ ಬೆಲ್ಲದ ಮಾತನಾಡಿ, ನಾಗರಿಕರು ತಮ್ಮ ಹಕ್ಕುಗಳನ್ನು ಪಡೆಯುವುದು ನ್ಯಾಯಸಮ್ಮತ. ಅದೆ ವೇಳೆ ತಮ್ಮ ಕರ್ತವ್ಯಗಳ ಬಗ್ಗೆಯೂ ಗಮನಹರಿಸುವುದು ಅಗತ್ಯ. ಪ್ರಸ್ತುತ ದಿನಗಳಲ್ಲಿ ಕೇವಲ ಹಕ್ಕುಗಳಿಗಾಗಿ ಮಾತನಾಡುವವರಿದ್ದಾರೆ. ಆದರೆ, ಅವರಿಗೆ ಕರ್ತವ್ಯಗಳ ಬಗ್ಗೆ ಬೇಜವಾಬ್ದಾರಿ. ನಗರದ ನೈರ್ಮಲೀಕರಣ, ಸೌಲಭ್ಯಗಳ ಮಿತವ್ಯಯ ಬಳಕೆಯಂತಹ ಕ್ರಮಗಳನ್ನು ಕೈಕೊಳ್ಳಲು ಎಲ್ಲರೂ ಆಸಕ್ತಿವಹಿಸಬೇಕು. ಇದರಿಂದ ನಗರ ಪ್ರದೇಶಗಳಲ್ಲಿ ನೆಮ್ಮದಿ ಮತ್ತು ಆರೋಗ್ಯಕರ ಜೀವನ ಸಾಗಿಸಲು ಸಾಧ್ಯ. ನಗರದಲ್ಲಿ ಬಹುತೇಕ ಸುಶಿಕ್ಷಿತ ಜನರು ತೆರಿಗೆ ತುಂಬುತ್ತಿಲ್ಲ. ಆದರೆ ಬಡವರು, ಅಶಿಕ್ಷಿತ ವರ್ಗದವರು ಪ್ರಾಮಾಣಿಕವಾಗಿ ತೆರಿಗೆ ಭರಿಸುತ್ತಾರೆ. ಇದು ಸರಿಯಲ್ಲ. ಸರ್ಕಾರ ಅಥವಾ ಮಹಾನಗರ ಪಾಲಿಕೆಯಿಂದ ನಾಗರಿಕ ಸೌಲಭ್ಯ ಪಡೆಯುವ ಮೊದಲು ತೆರಿಗೆ ಭರಿಸಲು ಮರೆಯಬಾರದು. ಇದು ತಮ್ಮ ಹಕ್ಕುಗಳನ್ನು ಪಡೆಯಲು ಸಹಕಾರಿಯಾಗಲಿದೆ ಎಂದರು.
ಅಸೋಸಿಯೇಶನ್ ಅಧ್ಯಕ್ಷ ಎನ್.ಸಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯ ರಾಜು ಅಂಬೋರೆ ಮತ್ತು ರೋಟ್ಸನ್ ಗ್ರೂಪ್ ಸಿಇಒ ಪಿ.ಡಿ. ರಾಯ್ಕರ್, ತಾರಾ ದಂಡಗಿ, ಪಿ.ಬಿ. ನದಾಫ್, ಶಿವಾಜಿ ಪವಾರ, ವಿ.ವಿ. ಹುಲ್ಲೂರ, ಎಂ.ಎಂ. ದಾಮೋದರ, ನಾಮದೇವ ಅಂಬೋರೆ, ಸುರೇಶ ಪೈ, ಕೇಶವ ಕಾಂಬಳೆ, ಕೆ.ಇ. ದಾಸರ, ಅಶೋಕ ವೆಕರ, ಜೆ.ಜೆ. ಮಿರಾಂಡಾ, ಸರೋಜಿನಿ ರೆಡ್ಡಿ, ಅನುರಾಧಾ ಮಹಾಲೆ, ಮೋಹಿನಿ ಜಾಧವ, ಅನುರಾಧಾ ಪಾಟೀಲ, ಜಯಲಕ್ಷ್ಮೀ ಹುಲ್ಲೂರ, ವಿಜಯಲಕ್ಷ್ಮೀ ಪೈ, ರಾಧಿಕಾ ಮಹಾಲೆ, ವೀಣಾ ಕಾಂಬಳೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.