ಧಾರವಾಡ

ಸರ್ಕಾರದ ವಿರುದ್ಧ ಕೆಜೆಪಿ ಜನಾಂದೋಲನ

Published On :

ಕಲಘಟಗಿ: ರಾಜ್ಯ ಸರ್ಕಾರದ ನಿಷ್ಕ್ರಿಯ ಆಡಳಿತದ ವಿರುದ್ಧ ಕರ್ನಾಟಕ ಜನತಾ ಪಕ್ಷವು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಜನರಲ್ಲಿ ಜಾಗೃತಿ ಮೂಡಿಸಲಿದೆ ಎಂದು ಕೆಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಗೋಖಲೆ ಹೇಳಿದರು.
ಪಟ್ಟಣದ ಹನ್ನೆರಡು ಮಠದ ಆವರಣದಲ್ಲಿ ಜರುಗಿದ ತಾಲೂಕು ಕೆಜೆಪಿ ಸಭೆಯಲ್ಲಿ ಅವರು ಮಾತನಾಡಿ, ರಾಜ್ಯದ ರೇಲ್ವೆ ಯೋಜನೆಗೆ ಬಿಡುಗಡೆಯಾಗಬೇಕಿದ್ದ ರು. 700 ಕೋಟಿಗಳಲ್ಲಿ ಕೆಲವೇ ಕೆಲವು ಕೋಟಿ ಬಿಡುಗಡೆ ಮಾಡಿ ರಾಜ್ಯದ ಅಭಿವೃದ್ಧಿಯ ಕುರಿತು ತನ್ನ ನಿರ್ಲಕ್ಷ್ಯವನ್ನು ಸಾಬೀತುಪಡಿಸಿದೆ.
ಕಳಸಾ ಬಂಡೂರಿ ಯೋಜನೆ, ಯಡಿಯೂರಪ್ಪ ಅವರು ಈ ಹಿಂದೆ ರೂಪಿಸಿದ ಜನೋಪಯೋಗಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ರೈತ, ಕೃಷಿ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು, ದೀನ ದಲಿತರು ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದು, ಪಕ್ಷ ಸೌಲಭ್ಯ ವಂಚಿತರ ಪರ ಬೃಹತ್ ಜನಾಂದೋಲನ ನಡೆಸಲಿದೆ ಎಂದರು. ಕೆಜೆಪಿ ಜಿಲ್ಲಾಧ್ಯಕ್ಷ ಎಸ್.ಐ. ಚಿಕ್ಕನಗೌಡ್ರ ಮಾತನಾಡಿದರು. ರಾಜ್ಯ ರೈತ ಘಟಕದ ಅಧ್ಯಕ್ಷ ಈಶ್ವರಚಂದ್ರ ಹೊಸಮನಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಾಣಿಕ್ಯ ಚಿಲ್ಲೂರ, ಹನುಮಂತಗೌಡ ಪಾಟೀಲ, ಎಸ್.ಎಂ. ಯಲಿವಾಳ, ವಿರೂಪಾಕ್ಷಗೌಡ ಪಾಟೀಲ, ವಿ.ಬಿ. ಶಿವನಗೌಡ್ರ, ಅಶೋಕ ಸುತಗಟ್ಟಿ, ಬಸವರಾಜ ಸುಳ್ಳದ, ಪ್ರಭು ಬೆಟಗೇರಿ, ಶಂಕ್ರಪ್ಪ ಮನಗುಂಡಿ, ಮಲ್ಲಿಕಾರ್ಜುನಗೌಡ ಪಾಟೀಲ, ಜಯಪಾಲ ಬೆಟದೂರ, ಸುರೇಶ ಮಂಜರಗಿ, ಅಜ್ಜಪ್ಪ ಸುಳ್ಳದ, ವೀರಭದ್ರಪ್ಪ ಕೆಲಗೇರಿ, ಬಸವರಾಜ ಶೀಲವಂತರ, ವೀರಭದ್ರಪ್ಪ ಸತ್ತೂರ, ಶಂಕರಗೌಡ ಪಾಟೀಲ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.