ಧಾರವಾಡ

ಸಂಸ್ಕಾರಯುತ ಬದುಕು ನಡೆಸಿ: ಶ್ರೀಗಳು

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 18
ಬದುಕಿನ ಬಂಡಿ ಎ್ನಳೆಯಲು ಸತಿಪತಿಗಳು ಧಾರ್ಮಿಕ ನೆಲೆಗಟ್ಟಿನಲ್ಲಿ ಸಂಸ್ಕಾರಯುತ ಬದುಕು ನಡೆಸಬೇಕು ಎಂದು ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.
ಶಿವಬಸವ ಜನಕಲ್ಯಾಣ ಸಂಸ್ಥೆ ಸಂಯೋಜಿಸಿದ್ದ ದಾಂಪತ್ಯದಲ್ಲಿ ಸಾಮರಸ್ಯ ದಾಂಪತ್ಯ ಕವಿಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿ, ದಾಂಪತ್ಯ ಜೀವನದ ಬದುಕು ಅರಿತು ನಡೆಯಬೇಕು. ಪರಸ್ಪರ ಸಹಕಾರದಿಂದ ಧಾರ್ಮಿಕ ಜೀವನ ಪಥದಲ್ಲಿ ಸಾಗಿದರೆ ಬದುಕಿಗೊಂದು ಬೆಲೆ ಬರುತ್ತದೆ ಎಂದರು.
ಗದುಗಿನ ಅಡವೀಂದ್ರ ಸ್ವಾಮೀಜಿ, ಮಹೇಶ್ವರ ಸ್ವಾಮೀಜಿ ಎಸ್. ಹೊಸಳ್ಳಿಮಠ ಅವರು ದಾಂಪತ್ಯದಲ್ಲಿ ಸಾಮರಸ್ಯ ಕುರಿತು ಮಾತನಾಡಿದರು.
ಗದಗ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಹಿರಿಯ ಸಾಹಿತಿ ಡಿ.ವಿ. ಬಡಿಗೇರ ಅವರು ನನ್ನ್ನವಳು ಎಂಬ ಹಾಸ್ಯ ಕವನ ವಾಚಿಸಿದರು. ಬಸವರಾಜ ದಂಡಿನ ಅವರು ಜೀವನ ಕಾವ್ಯ ಕುರಿತು ಹಾಗೂ ಕವಿತಾ ಬಸವರಾಜ ದಂಡಿನ ಅವರು ಜೀವನ ಸ್ಫೂರ್ತಿ ಡಾ. ರಾಜೇಂದ್ರ ಗಡಾದ ದಾಂಪತ್ಯ ಸಾಮರಸ್ಯ ಹಾಗೂ ಜ್ಯೊತಿ ಗಡಾದ ಅವರು ದಾಂಪತ್ಯ ಜೀವನ ಕುರಿತು ಕವನ ವಾಚಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕ ಮಹಾಮಂಡಳದ ರಾಜ್ಯ ಅಧ್ಯಕ್ಷ, ಸಾಹಿತಿ ಡಾ. ಕೆ.ಎಸ್. ಶರ್ಮಾ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಬಾಪುಗೌಡ ಪಾಟೀಲ, ಅನಿಲ ಮೆಣಸಿನಕಾಯಿ, ನವಲಗುಂದ ಪಿಎಲ್‌ಡಿ ಬ್ಯಾಂಕ್ ದೇಸಾಯಿಗೌಡ್ರ ಪಾಟೀಲ, ಹು-ಧಾ ಪಾಲಿಕೆ ಸದಸ್ಯ ಶಿವು ಹಿರೇಮಠ, ವೆಂಕಟೇಶ ದಾಸರ, ಡಿ. ಪ್ರಸಾದ, ಸಿ.ಜಿ.ಬಿ. ಹಿರೇಮಠ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.