ಧಾರವಾಡ

ಸುದ್ದಿ ಸಂಕ್ಷೇಪ

Published On :

ಬ್ಯಾಂಕಿಗೆ ಆಧಾರ್ ಕೊಡಿ
ಧಾರವಾಡ: ಭಾರತ ಸರ್ಕಾರ ಎಲ್‌ಪಿಜಿ ಸಬ್ಸಿಡಿ ನೇರ ನಗದು ಪಾವತಿ ಯೋಜನೆಯನ್ನು ಅಕ್ಟೋಬರ್‌ನಲ್ಲಿ ಜಾರಿಗೊಳಿಸಿದ್ದು, ಎಲ್‌ಪಿಜಿ ಸಹಾಯಧನ ನೇರವಾಗಿ ಬ್ಯಾಂಕಿನಲ್ಲಿ ಆಧಾರ್ ಸಂಖ್ಯೆ ನಮೂದಿಸಿದ ಬ್ಯಾಂಕ್ ಖಾತೆಗಳಲ್ಲಿ ಜಮೆ ಮಾಡಲಾಗುತ್ತಿದೆ. ಜಿಲ್ಲೆಯ ಎಲ್ಲ ಎಲ್‌ಪಿಜಿ ಗ್ರಾಹಕರು ತಮ್ಮ ಬ್ಯಾಂಕಿನ ಶಾಖೆಗೆ ಆಧಾರ್ ಕಾರ್ಡ್ ನಕಲನ್ನು ಕೊಟ್ಟು ಖಾತೆಗೆ ನೋಂದಾಯಿಸಬೇಕು. ಎಟಿಎಂ ಅಂತರ್ಜಾಲ ಬ್ಯಾಂಕಿಂಗ್, ಎಸ್‌ಎಂಎಸ್, ಇತ್ಯಾದಿ ವ್ಯವಸ್ಥೆಯುಳ್ಳ ಬ್ಯಾಂಕುಗಳಲ್ಲಿ ನೋಂದಣಿ ಮಾಡಬಹುದು. ಆಧಾರ್ ಸಂಖ್ಯೆ ನೋಂದಣಿ ಮನವಿ ಪತ್ರಗಳನ್ನು ವಿತರಕರ ಹತ್ತಿರ ಲಭ್ಯವಿರುವ ಪೆಟ್ಟಿಗೆಗಳಲ್ಲಿ ಹಾಕಬಹುದಾಗಿದೆ. ಖಾತೆ ಇಲ್ಲದ ಸಮೀಪದ ವಾಣಿಜ್ಯ, ಗ್ರಾಮೀಣ ಬ್ಯಾಂಕುಗಳಲ್ಲಿ ಖಾತೆ ತೆರೆದು ಆಧಾರ್ ಸಂಖ್ಯೆ ನಮೂದಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಕಸಾಪದಿಂದ ಕಾವ್ಯ ವಾಚನ
ಧಾರವಾಡ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪರಿಷತ್‌ನ ಸಭಾಭವನದಲ್ಲಿ ನಡೆದ ಕಾವ್ಯವಾಚನ ಹಾಗೂ ಸಂವಾದ ಗೋಷ್ಠಿಯಲ್ಲಿ ಕವಿಯತ್ರಿ ಎಚ್.ಎನ್. ಆರತಿ ಕಾವ್ಯ ವಾಚಿಸಿದರು.ಪ್ರಸ್ತುತ ಹೆಣ್ಣು ಆಧುನಿಕ ಜಗತ್ತಿನಲ್ಲಿ ಎದುರಿಸುತ್ತಿರುವ ಹೊಸ ಸಂಕಟಗಳು, ಹಿಂಸೆಗಳು, ಬಂಧನಗಳು ಕುರಿತಾದ ಸಂವೇದನಾಶೀಲ ಕವಿತೆಗಳನ್ನು ವಾಚಿಸಿದರು ಅವರು, ಸ್ವಾತಂತ್ರ್ಯದ ಹೊಸದಾರಿಗಳ ಹುಡುಕಾಟವನ್ನು ಒಳಗೊಂಡ ಕವಿತೆ ಹೇಳಿದರು. ನಂತರ ಪ್ರೊ. ಅಶೋಕ ಶೆಟ್ಟರ, ಡಾ. ವಿನಯಾ, ರಾಮಚಂದ್ರ ಕುಲಕರ್ಣಿ, ಡಾ. ಉಜ್ವಲಾ ಹಿರೇಮಠ, ಎಂ.ಎಂ. ಪುರದನಗೌಡರ, ಗಂಗಾಧರ ಗಡಾದ ಅವರೊಂದಿಗೆ ಸಂವಾದ ನಡೆಯಿತು. ಜಿಲ್ಲಾ ಕಸಪಾ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಚನ್ನಪ್ಪ ಅಂಗಡಿ, ಡಾ. ವೈ.ಎಂ. ಡಾ ಶಿವಾನಂದ ಗಾಳಿ, ಎಸ್.ಎಂ. ಮೆಣಸಿನಕಾಯಿ, ಡಾ. ಪ್ರಜ್ಞಾ ಮತ್ತೀಹಳ್ಳಿ, ರಾಜೇಶ್ವರಿ ಸಾಲಗಟ್ಟಿ, ಗುರು ತಿಗಡಿ, ಲಕ್ಕಮ್ಮನವರ, ನರೇಗಲ್, ದೊಡವಾಡ, ದಾನಪ್ಪಗೌಡರ ಇದ್ದರು.

ಲೋಕಾಯುಕ್ತರಿಂದ ಜಿಲ್ಲಾ ಪ್ರವಾಸ 24ರಿಂದ
ಧಾರವಾಡ: ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕೆ. ಪರಶುರಾಮ ಅ. 24ರಿಂದ ಅ. 26ರ ವರೆಗೆ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ. ಅ. 24ರಂದು ಧಾರವಾಡ ಹಳೇ ಸರ್ಕ್ಯೂಟ್ ಹೌಸ್‌ನಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 1ರ ವರೆಗೆ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸುವರು. 25ರಂದು ಕಲಘಟಗಿ ಪ್ರವಾಸಿ ಮಂದಿರದಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 1ರ ವರೆಗೆ, ಮಧ್ಯಾಹ್ನ 3ರಿಂದ ಸಂಜೆ 5ರ ವರೆಗೆ ಕುಂದಗೋಳ ಪ್ರವಾಸಿ ಮಂದಿರದಲ್ಲಿ, 26ರಂದು ಹುಬ್ಬಳ್ಳಿ ಸರ್ಕ್ಯೂಟ್ ಹೌಸ್‌ನಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 1ರ ವರೆಗೆ, ಮಧ್ಯಾಹ್ನ 3ರಿಂದ 5ರ ವರೆಗೆ ನವಲಗುಂದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವರು. ಸಂಬಂಧಪಟ್ಟ ತಾಲೂಕು ಮತ್ತು ಜಿಲ್ಲೆಯ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಕೆಲಸಕ್ಕೆ ಅನವಶ್ಯಕ ವಿಳಂಬ, ಲಂಚದ ಹಣಕ್ಕೆ ಬೇಡಿಕೆ, ಭ್ರಷ್ಟಾಚಾರ, ಸಾರ್ವಜನಿಕ ಹಣದ ದುರುಪಯೋಗ ಮುಂತಾದ ತೊಂದರೆಗಳ ಬಗ್ಗೆ ದೂರುಗಳನ್ನು 1 ಮತ್ತು 2ರ ಅಫಿಡವಿಟ್‌ನಲ್ಲಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ನೇಮಕ
ಧಾರವಾಡ: ಅಖಿಲ ಭಾರತ ವೀರಶೈವ ಮಹಾಸಭಾದ ಧಾರವಾಡ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ತಾಲೂಕಿನ ಕಲ್ಲೂರ ಗ್ರಾಮದ ಮುಖಂಡರಾದ ಸಿದ್ದು ಕಂಬಾರ ನೇಮಕಗೊಂಡಿದ್ದಾರೆ. ಮಹಾಸಭಾದ ರಾಜ್ಯ ಅಧ್ಯಕ್ಷ ಎನ್. ತಿಪ್ಪಣ್ಣ ಹಾಗೂ ಉಪಾಧ್ಯಕ್ಷ ಗುರುರಾಜ ಹುಣಸಿಮರದ ಅವರ ಆದೇಶದ ಮೇರೆಗೆ ರಾಜ್ಯ ಯುವ ಘಟಕದ ಅಧ್ಯಕ್ಷ ತೇಜಸ್ ಕುಮಾರ ಅವರು ಈ ನೇಮಕ ಮಾಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.