ಧಾರವಾಡ

ನಾಳೆ ನೇತ್ರ ತಪಾಸಣೆ

Published On :

ಹುಬ್ಬಳ್ಳಿ: ಕನ್ನಡಪ್ರಭ, ಇಂಡಿಯನ್ ಎಕ್ಸ್‌ಪ್ರೆಸ್, ದಿವ್ಯಜ್ಯೋತಿ ಕಣ್ಣಿನ ಆಸ್ಪತ್ರೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಅ. 23ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಕಲಘಟಗಿಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಭಾ ಭವನದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ದಿವ್ಯಜ್ಯೋತಿ ಆಸ್ಪತ್ರೆಯ ನೇತ್ರ ತಜ್ಞ ಡಾ. ಶ್ರೀಧರ ಅಮೀನ್, ಡಾ. ಸಿದ್ದೇಶ ಮೋತಿ, ಚಿಕ್ಕಮಕ್ಕಳ ನೇತ್ರ ತಜ್ಞ ಡಾ. ಜಿ.ಎಸ್. ಸಿದ್ದಲಿಂಗಸ್ವಾಮಿ ರೋಗಿಗಳ ನೇತ್ರ ತಪಾಸಣೆ ಮಾಡಲಿದ್ದಾರೆ. ಶಿಬಿರ ಆಯೋಜಿಸುತ್ತಿರುವ ಕಣ್ಣಿನ ಪೊರೆಯ ಆರೈಕೆಗಾಗಿ ಮೈಕ್ರೊ ಇನ್ಸಿಜನ್ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ರಿಫ್ರಾಕ್ಟಿವ್ ಸರ್ಜರಿ, ಕಾಂಟಾಕ್ಟ್ ಲೇನ್ಸ್, ಆರ್‌ಬಿಟಿ ಮತ್ತು ಅಕ್ಯಲೋಪ್ಲಾಸ್ಟಿ ಚಿಕಿತ್ಸೆ, ಚಿಕ್ಕಮಕ್ಕಳ ನೇತ್ರ ವಿಜ್ಞಾನ ಮತ್ತು ವಕ್ರ ಕಣ್ಣುಗಳ ಚಿಕಿತ್ಸೆ ಸೇರಿದಂತೆ ದೃಷ್ಟಿ ದೋಷಕ್ಕೆ ಸಂಬಂಧಿಸಿದ ವಿವಿಧ ಸೌಲಭ್ಯ ಲಭ್ಯ ಇವೆ. ಅಂದು ಬೆಳಗ್ಗೆ ಹಮ್ಮಿಕೊಂಡ ಉಚಿತ ನೇತ್ರ ತಪಾಸಣೆ ಶಿಬಿರದ ಪ್ರಯೋಜನವನ್ನು ಕಲಘಟಗಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ. ಮಾಹಿತಿ ಮತ್ತು ಹೆಸರು ನೋಂದಣಿಗೆ ಶ್ರೀಧರ ಅಮೀನ್ 94804 59058, ರವಿ ಬಡಿಗೇರ 90088 70639, ಶ್ರೀನಿವಾಸ 91648 50555, ಅನಿಲ ಪಮ್ಮಾರ 90369 08450, ಪ್ರಭು ರಂಗಾಪುರ, 99455 64826 ರಾಕೇಶ ಅಳಗವಾಡಿ 99864 99303ಅವರನ್ನು ಸಂಪರ್ಕಿಸಬಹುದು.
ಸಹಜ ಸ್ಥಿತಿಗೆ ಭಟ್ಕಳ
ಭಟ್ಕಳ: ಕಳೆದ ಎರಡು ದಿನಗಳಿಂದ ಕ್ಷುಲಕ ಕಾರಣಕ್ಕೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿ ಅಶಾಂತಿಯತ್ತ ಸಾಗಿದ್ದ ಭಟ್ಕಳ ನಗರ ಸಹಜ ಸ್ಥಿತಿಗೆ ಮರಳುತ್ತಿದ್ದು, ಜಿಲ್ಲಾಡಳಿತ ಬಿಗಿ ಬಂದೋಬಸ್ತ್ ಹಿಂತೆಗೆದುಕೊಂಡಿದೆ. ಭಟ್ಕಳ ನಗರದಲ್ಲಿ ಕಳೆದ ಎರಡು ದಿನಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಕೋಮುಗಳ ಮಧ್ಯೆ ವಾಗ್ಯುದ್ಧ ಏರ್ಪಟ್ಟು ಅಶಾಂತಿ ವಾತಾವರಣ ಉಂಟಾಗಿ ಬಿಗುವಿನ ಸ್ಥಿತಿ ನಿರ್ಮಾಣವಾಗಿತ್ತು. ಭಟ್ಕಳ ನಗರ ಠಾಣಾ ಪೊಲೀಸರು ವಾತಾವರಣ ತಿಳಿಗೊಳಿಸಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರಿಂದ ಪರಸ್ಪರ ಶಾಂತಿ ವಾತಾವರಣ ಉಂಟಾಗಿದೆ. ಭಾನುವಾರದಂದು ನಗರದ ಹಳೇ ಬಸ್ ನಿಲ್ದಾಣ ಬಳಿಯ ನಾಗಬನದ ಹತ್ತಿರ ಮಾಂಸದ ತುಂಡುಗಳನ್ನು ಹಾಕಿದ್ದರಿಂದ ಈ ಬಿಗುವಿನ ವಾತಾವರಣ ಇನ್ನಷ್ಟು ಹೆಚ್ಚಿತ್ತು. ಇದನ್ನು ಸರಿಪಡಿಸಿ ಶಾಂತಿ ಕಾಪಾಡುವಲ್ಲಿ ನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಾವಿಗಿಳಿದು ಆತಂಕ ಸೃಷ್ಟಿಸಿದ ಚಿತ್ರದುರ್ಗದ ವ್ಯಕ್ತಿ
ಗದಗ: ಯಾರಾದರೂ ಬಾವಿಯಲ್ಲಿ ಬಿದ್ದಿದ್ದಾರೆ ಎಂದರೆ, ಸಹಜವಾಗಿ ಎಲ್ಲರಿಗೂ ಆತಂಕ ಉಂಟಾಗುತ್ತದೆ. ಸೋಮವಾರ ನಗರದ ಹಳೆ ಬಸ್ ನಿಲ್ದಾಣದ ಸಮೀಪದಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆಯ ಆವರಣದಲ್ಲಿ ಅದೇ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಬಾವಿಯಲ್ಲಿದ್ದ ವ್ಯಕ್ತಿಯನ್ನು ಹೊರತೆಗೆಯಲು ಹೋದರೆ ಆ ವ್ಯಕ್ತಿ ಮಾತ್ರ ನಾನು ಇಲ್ಲಿ ಧ್ಯಾನ ಮಾಡುತ್ತಿದ್ದೇನೆ ಎಂದು ಗಂಟೆಗಟ್ಟಲೇ ಸಾರ್ವಜನಿಕರನ್ನು ಕಾಡಿದ ಘಟನೆ ಜರುಗಿದೆ. ಈ ರೀತಿಯ ಅವಾಂತರ ಸೃಷ್ಟಿಸಿದವನು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಜಾನಕಲ್ ಗ್ರಾಮದ ಶಂಕರಮೂರ್ತಿ.  ಬಾವಿಯಲ್ಲಿದ್ದ ಈ ವ್ಯಕ್ತಿಯನ್ನು ನೋಡಿದವರು ಪೊಲೀಸರಿಗೆ ತಿಳಿಸಿದ್ದು, ಅವರು ಅಗ್ನಿಶಾಮಕದಳದ ಸಹಕಾರದೊಂದಿಗೆ ಬಾವಿಯಿಂದ ಮೇಲೆತ್ತಲು ಪ್ರಯತ್ನಿಸಿದವರನ್ನು ಹಿಗ್ಗಾ ಮುಗ್ಗಾ ಬೈದ ಶಂಕರಮೂರ್ತಿ ನಾನು ಇಲ್ಲಿ ಧ್ಯಾನ ಮಾಡುತ್ತಿದ್ದೇನೆ. ದಯವಿಟ್ಟು ನನಗೆ ತೊಂದರೆ ಮಾಡಬೇಡಿ ಎಂದು ಕೂಗಾಡತೊಡಗಿದ್ದಾನೆ. ನಂತರ ಗಂಟೆಗಟ್ಟಲೇ ಕಾಯ್ದು ಮನವೊಲಿಸಿದ ಸಿಬ್ಬಂದಿ ಪ್ಲಾಸ್ಟಿಕ್ ಪುಟ್ಟಿಯ ಸಹಾಯದೊಂದಿಗೆ ಹಗ್ಗದ ಮೂಲಕ ಬಾವಿಯಿಂದ ಮೇಲೆತ್ತಿದಾಗ ಕೈಕಾಲುಗಳು ನೆನೆದು ಹೋಗಿದ್ದವು. ನಂತರ ಪೊಲೀಸರು ಸ್ಥಳೀಯ ವೈದ್ಯರಿಗೆ ತಿಳಿಸಿ ತಪಾಸಣೆ ನಡೆಸಿದರು. ಬಳಿಕ ಶಂಕರಮೂರ್ತಿಯನ್ನು ಯಾವ ಕಾರಣಕ್ಕಾಗಿ ಹೀಗೆ ಮಾಡಿದಿರಿ ಎಂದು ಕೇಳಿದಾಗ ಅವರು ವಿಚಿತ್ರವಾಗಿ ಉತ್ತರಿಸಿದ್ದು, ಮೇಲ್ನೋಟಕ್ಕೆ ಅವರು ಮಾನಸಿಕ ಅಸ್ವಸ್ಥರಂತೆ ಕಾಣುತ್ತಿದ್ದಾರೆ. ನಾನು ಮನಸ್ಸಿನ ಶಾಂತಿಗಾಗಿ ವೀರೇಶ್ವರ ಪುಣ್ಯಾಶ್ರಮಕ್ಕೆ ಬಂದಿದ್ದೆ, ಮರಳಿ ಊರಿಗೆ ಹೋಗಲು ಹಣವಿಲ್ಲ ಎನ್ನುವ ಮೂಲಕ ಗೊಂದಲಕಾರಿ ಹೇಳಿಕೆ ನೀಡಿದರು. ಸೋಮವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಅಗ್ನಿಶಾಮಕ, ಪೊಲೀಸ್ ಇಲಾಖೆಗೆ ಇದೊಂದು ದೊಡ್ಡ ತಲೆ ನೋವಾಗಿತ್ತು. ಇದರೊಟ್ಟಿಗೆ ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆ ದೊರೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.