ಹಾಸ್ಯ ಆಸ್ವಾದಿಸುವವರ ಕೊರತೆ: ವಿಷಾದ
ಧಾರವಾಡ: ನಿತ್ಯ ಜೀವನದಲ್ಲಿ ಹಾಸ್ಯವಿರುತ್ತದೆ. ಅದನ್ನು ಕೇಳುವ ಕಿವಿ ಮತ್ತು ಆಸ್ವಾದಿಸುವ ಮನಸ್ಸುಗಳ ಕೊರತೆ ನಮ್ಮಲ್ಲಿ ಎದ್ದು ಕಾಣುತ್ತಿದೆ ಎಂದು ಚಲನಚಿತ್ರ ನಟ ಸುರೇಶ ಕುಲಕರ್ಣಿ ಹೇಳಿದರು.
ಇಲ್ಲಿನ ವಿದ್ಯಾವರ್ಧಕ ಸಂಘದ ಜಾನಪದ ಮಂಟಪ ಎಲ್.ಜಿ. ದೇವಾಂಗಮಠ ಅವರ ರಚನೆ ಹಾಗೂ ನಿರ್ದೇಶನದ 'ನನಗೆಲ್ಲಾ ಗೊತೈತಿ' ಹಾಸ್ಯ ನಾಟಕ ಪ್ರದರ್ಶನದಲ್ಲಿ ಮಾತನಾಡಿದ ಅವರು, ಕವಿ ಹಾಗೂ ಕಲಾವಿದ ದೇವಾಂಗಮಠ ತಮ್ಮ ಬದುಕಿನುದ್ದಕ್ಕೂ ಈಶ್ವರ ಸಣಕಲ್ಲರ ಜಗವೆಲ್ಲ ನಗುತಿರಲಿ ಜಗದಳಲು ನನಗಿರಲಿ ಕವಿವಾಣಿಯಂತೆ ಬಡತನವನ್ನು ಉಣ್ಣುತ್ತಲೇ ಜನರನ್ನು ನಗೆಗಡಲಲ್ಲಿ ತೇಲಿಸುವಂತಹ ನಾಟಕಗಳನ್ನು ನೀಡಿದವರು. ನಟರಾಗಿ, ಸಂಗೀತಗಾರರಾಗಿ ನಿರಂತರ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸುವಲ್ಲಿ ಎಂಟು ದಶಕಗಳಿಂದಲೂ ತೊಡಗಿಸಿಕೊಂಡ ಇವರನ್ನು ಸಮಾಜ ಮತ್ತು ಸರ್ಕಾರ ಗುರುತಿಸಿ ಗೌರವಿಸುವ ಕಾರ್ಯವಾಗಬೇಕಿದೆ ಎಂದು ಅಭಿಪ್ರಾಯಿಸಿದರು. ಮಾಜಿ ಮಹಾಪೌರ ಎಚ್.ವಿ. ಡಂಬಳ ಮಾತನಾಡಿ, ದೇವಾಂಗಮಠ ಅವರಂತಹ ಕಲಾವಿದರು ಸ್ವಾಭಿಮಾನದಿಂದ ಪ್ರಚಾರ ಹುಚ್ಚು ಹಚ್ಚಿಕೊಳ್ಳದೇ ಪ್ರಾಮಾಣಿಕ ಕಲಾ ಸೇವೆ ಮಾಡುತ್ತಾ ಬಂದವರು. ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ದೊರಕುವಂತೆ ಕರ್ನಾಟಕ ವಿದ್ಯಾವರ್ಧಕ ಸಂಘ ಮಾಡಬೇಕಿದ್ದು, ಅವರ ಸೇವೆ ಸಮಾಜ ಮತ್ತು ಸರ್ಕಾರದ ಗಮನಕ್ಕೆ ತಲುಪಿಸಬೇಕಿದೆ. ಅಲ್ಲದೇ, ಇಂತಹ ನಿಸ್ವಾರ್ಥ ಕಲಾವಿದರಿಗೆ ಮಾಸಾಶನ ದೊರಕುವಂತೆ ಸರ್ಕಾರ ಯೋಜನೆ ರೂಪಿಸಬೇಕು ಎಂದರು.
ಶಿವಣ್ಣ ಬೆಲ್ಲದ, ಡಾ. ಎಸ್.ಎಂ. ವೃಷಭೇಂದ್ರಸ್ವಾಮಿ, ಡಾ. ಶಿವಾನಂದ ಗಾಳಿ, ಡಾ. ಶಶಿಧರ ನರೇಂದ್ರ, ಅಶೋಕ ನಿಡವಣಿ, ಜಿ.ಬಿ. ಹೊಂಬಳ, ಪ್ರೇಮಾ ನಡುವಿನಮನಿ, ಶಂಕರ ಹಲಗತ್ತಿ ಇದ್ದರು. ಜಾನಪದ ಮಂಟಪದ ಸಂಚಾಲಕ ಶಂಕರ ಕುಂಬಿ ನಿರೂಪಿಸಿದರು. ಶಶಿಧರ ಪಾಟೀಲ ವಂದಿಸಿದರು. ನಂತರ ಶರಣ ಕಲಾ ವೈಭವ ನಾಟ್ಯ ಕಲಾ ಸಂಘದಿಂದ 'ನನಗೆಲ್ಲಾ ಗೊತೈತಿ' ನಾಟಕ ಪ್ರದರ್ಶನಗೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

